ಮಂಗಳವಾರ, ಏಪ್ರಿಲ್ 20, 2010

ಜಾನಪದ

ಎಸ್ಟೋ ದಿವಸದಿಂದ ಈ ಹಾಡು ಬರೀಬೇಕು ಅನ್ಸಿತ್ತು ಆದರ online  ಕೇಳ್ತಾ ಬರಿಲಿಕ್ಕೆ ಕಷ್ಟಾ.. ಮತ್ತ ಯಾವಾಗ್ ಟೈಮ್ ಸಿಗತದೋ ಅಂತ ಕಾಯಕೊಂತ ಕುಂತಿದ್ದೆ... ಇವತ್ತು ಸ್ವಲ್ಪ ಟೈಮ್ ಸಿಕ್ಕತ ಹಂಗ ಕೆಳಕೊಂತ ಬರದೆ...



ಕುಂಜರದ ಗೊಂಬೆ ಕೇಳಿ ನಲ್ಲರ ಜಾಣೆ ಖುಶಲದ ರಂಬೆ ಕೇಳೆ ...
ನಮ್ಮೂರ ಗೌಡನ ಮಗಳು ನಿರಿಗೆ ಹೋಗುವಾಗ  ಕಟ್ಟೆ  ಕಲ್ಲಾಗಿ ಬಂದು ಅಡಗಿದ್ದಾ ಆ  ಹುಡುಗ

ಕಟ್ಟೆ ಕಲ್ಲಾಗಿ  ಬಂದು ಅಡಗಿರೋ ಹೊತ್ತಿಗೆ ಹೊನ್ನಾಳಿ ಹೊಳೆಯಾಗಿ ಹರಿದಿದ್ದಲ್ ಆ  ಹುಡಗಿ
ಹೊನ್ನಾಳಿ  ಹೊಳೆಯಾಗಿ ಹರಿದಿರೋ ಹೊತ್ತಿಗೆ ಅಡ್ಡಯೇರಿ ಆಗಿ ತಡಿದಿದ್ದ ಹುಡುಗ

ಅಡ್ಡ ಏರಿಯಾಗಿ ತಡೆದಿರೋ ಹೊತ್ತಿಗೆ ತೆಂಗಿನ ಮರವಾಗಿ ಬೆಳೆದಿದ್ದಳ  ಆ ಹುಡಗಿ
ತೆಂಗಿನ ಮರವಾಗಿ ಬೆಳಿದಿರೋ ಹೊತ್ತಿಗೆ... ಮರವೇರಿ ಎಳೆನೀರ ಕುಡಿದಿದ್ದನ ಆ ಹುಡುಗ

ಮರವೇರಿ ಎಳೆನೀರ ಕುಡಿದಿರೋ ಹೊತ್ತಿಗೆ... ಜೋಳದ ಕಾಳಗಿ ಚಿಮ್ಮಿದ್ದಲ  ಆ ಹುಡಗಿ
ಜೋಳದ ಕಾಳಗಿ ಚಿಮ್ಮಿರೋ...  ಹೊತ್ತಿಗೆ ಕೋಳಿ ಹುಂಜಾಗಿ ಕುಕ್ಕಿದ್ದನ ಆ ಹುಡುಗ

ಕೋಳಿ ಹುಂಜಾಗಿ  ಕುಕ್ಕಿರೋ ಹೊತ್ತಿಗೆ... ಹೆಬ್ಬುಲಿ ಆಗಿ ನಿಂತಿದ್ದಳ ಹುಡಗಿ
ಹೆಬ್ಬುಲಿ ಆಗಿ ನಿಂತಿರೋ ಹೊತ್ತಿಗೆ. .. ಚಿನ್ನದ ಕತ್ತಿನ ಕೋವಿ ಹಿಡಿದು ನಿಂತಿದ್ದನ್ ಆ  ಹುಡುಗ
ಚಿನ್ನದ ಕತ್ತಿನ ಕೋವಿ ಹಿಡಿದಿರೋ ಹೊತ್ತಿಗೆ ಮುತ್ತಿನ ಶೆರಗ್ ಒಡ್ಡಿ ಬೇಡಿದ್ದಲ ಹುಡಗಿ

ಕುಂಜರದ ಗೊಂಬೆ ಕೇಳಿ ನಲ್ಲರ ಜಾಣೆ ಖುಶಲದ ರಂಬೆ ಕೇಳೆ ...

ಗುರುವಾರ, ಏಪ್ರಿಲ್ 1, 2010

bharata pravaas

ಮಾರ್ಚ್ ೫, ೨೦೧೦, ಮುಂಜೇನೆ ೪ ಘಂಟೆ... ಆಸ್ಟ್ರೇಲಿಯದಿಂದ ಬೆಂಗಳೂರು...  ಕೆಲಸ ಎಲ್ಲ ಮುಗನ್ಸೊಂಕುದು ಏನು ಬಾಕಿ ಬಿಡಲಂಗ, ೧೫ ದಿನ ರಜಾ ತುಗೊಂಡು... ಬ್ರಿಸ್ಬನೆ ಇಂದ ಸಿಂಗಪೋರ್ ಅಲ್ಲಿಂದ ದುಬೈ ಮತ್ತೆ ಬೆಂಗಳೂರು... ಹೋಗತಿದ್ದಂಗ ನಮ್ಮ ಅಣ್ಣ ವಿಮಾನ ನಿಲ್ದಾಣ ದಾಗ ನನ್ನ ದಾರಿ ನೋಡಕೊಂತ ನಿಂತಿದ್ದ... ಹೋಗತಿದ್ದಂಗ ನೋಡಿ ನನಗಂತೂ ಬಾಳ ಖುಷಿ ಆತು... ಹಂಗ ಇಬ್ಬರು ಸ್ವಲ್ಪ ಹೊತ್ತು ಮಾತಾದಕೊಂತ... ಅಲ್ಲೇ ವಿಮಾನ ನಿಲ್ದಾಣ ದಾಗ್ ಕಾಫಿ ಕುಡದು, ಅಲ್ಲಿಂದಾ ಸಿದಾ ಮುಂಜೆನಿ ೬ ಘಂಟೆ ಗಾಡಿ ಹಿಡಕೊಂಡು ಹುಬ್ಬಳ್ಳಿಗೆ....
  
ಹುಬ್ಬಳ್ಳಿ ರೈಲ್ವೆ ಸ್ಟೇಷನ್ ಸಮೀಪ ಬರತಿದ್ದಂಗ ಕರ್ಫು ಹಾಕಿದ್ದು ಗೊತ್ತಾತು ನೋಡ್ರೀ... ಈಗ ಮನಿಗೆ ಹೆಂಗ ಹೋಗುದು, ಅಣ್ಣ ಮತ್ತ ನಾನು ಇನ್ನು ಹುಬ್ಬಳ್ಳಿ ಬರಾಕ್ ೧ ತಾಸ ಇತ್ತು, ಏನ್ ಮಾಡುನು ಅಂತ ಇಬ್ಬರು ಮಾತಾಡಕೊಂತ ಕೂತಿದ್ವಿ... ನಮ್ಮ ಬಾಜು ಕುಂತ ಒಬ್ಬ ಹೆಣಮಗಳು ತನ್ನ ಮಗನಿಗೆ (ಸುಮಾರು ೫ ವರ್ಷದವ ಇರಬಹುದು)... ಇಲ್ಲೇ ಏನರ ತಿನ್ನು ಹುಬ್ಬಳ್ಳಿಗೆ ಹೊದರ ಏನು ಸಿಗಂಗಿಲ್ಲ ಕರ್ಫು ಹಾಕ್ಯರ, ಅವನೋ ಏ ಯೆನಬೆ ನೀನು ನನಗ ಹಸದಿಲ್ಲ ಅಂತ ನಾ ಅಂದ್ರ ಎಷ್ಟು ಜೋರ ಮಾಡತಿ, ಆಮೇಲೆ ಏನಾರ ಕೇಳ ನೋಡು ಅಂತ ಆ ತಾಯಿ. ನಾವಿಬ್ಬರು ಅವರ ಮಾತು ಕೇಳ್ತಾ ಅಲ್ಲೇ ಮುಸು ಮುಸು ನಕ್ಕೊಂತ, ಹಂಗ ಸ್ವಲ್ಪ ಆಕಡೆ ಹೋದರಾತು ಅಂತ ಹೊಂಟವಿ, ಅಲ್ಲಿ ಇನ್ನೊದು, ಏನ್ ಹುಬ್ಬಳ್ಳಿ ರೀ ದಾಂದಲೆ ಊರು, ಶಾಂತಿ ಅನ್ನೋದು ಇಲ್ಲ ನೋಡ್ರೀ, ಯಾರೋ ಇನ್ನೋಬರು ಅನ್ನೋದು ಕೇಳಸ್ತು ... ನನಗೋ ಇಲ್ಲದ ಸಿಟ್ಟು ಬಂತ್ ನೋಡ್ರೀ.. ಬಂದಿರುದು ೧೫ ದಿನ ಅದರಾಗ್ ಹಿಂಗ ಕರ್ಫು ಹಾಕೊಂಡು ಕುಂತರ ಏನ್ ಮಾಡೋದು, ಎಲ್ಲಿ ಹೋಗಲಿಕ್ಕು ಆಗಂಗಿಲ್ಲ, ಫ್ರೆಂಡ್ಸ್ ಭೇಟಿ ಆಗಬೇಕು, ಒಂದು ರೌಂಡ್ ನನ್ನ ಹಳೆ ಸ್ಕೂಲ್, ಕಾಲೇಜ್ ಎಲ್ಲಾ ನೋಡಾಕ್ ಹೋಗಬೇಕು ಏನೆಲ್ಲ ಆಸೆ ಇಟಕೊಂದು ಬಂದೀನಿ, ಏನಾಗುತ್ತೋ ಏನೋ... ಮನಸನ್ಯಾಗ ಹಂಗ ನೂರ ಎಂಟು ವಿಚಾರ... ಊರ ಸಮೀಪ ಬಂತು... ರಿಕ್ಷ ಎಲ್ಲ ಬಂದ... ಸ್ಟೇಷನ್ನಿಂದ ಹೊರಗ  ಬಂದ್ವಿ... ಅಲ್ಲೇ ಭಾವ ಆಗಲೇ ಬಂದು ನಿಂತಿದ್ರು... ಜೀಪ್ ಅಲ್ಲೇ ಇತ್ತು, ಸಿಪಿಐ ಇದ್ದದರಿಂದ ಹುಬ್ಬಳ್ಳಿ ಕರ್ಫು ಆಗಿದ್ದರಿಂದ ಅವರ ಡ್ಯೂಟಿ ಅಲ್ಲೇ ಹಾಕಿದರು... ನೋಡಿ ಬಾರಿ ಖುಷಿ ಆತು... ಸಿಪಿಐ ಭಾವ ನನ್ನ ಬರಮಾಡಕೊಲಕ ಸ್ಟೇಷನ್ಗೆ ಬಂದಾರು... ತಾವು ಮುಂದ ಕೂತು...ಹಿಂದಿನ ಸೀಟು ನಮಗೆ ಕೊಟ್ಟರು , ನಾನು ತಲೆ ತಿನ್ನೋಕ್ ಶುರು ಮಾಡಿದೆ.. ಅಲ್ರಿ  ಮಾಮಾರ, ನಿಮದು ರಾಯಭಾಗ್ ಪೋಸ್ಟ್ ಅದರ ಇಲ್ಲಿ ಹೆಂಗ ಹಾಕಿದರು, ಮತ್ತ ನಾನು ಬರು ಸುದ್ದಿ ನಿಮಗ್ಹೆಂಗ ಗೂತ್ತ ರೀ? ಅಕ್ಕ ಏನಾರು ಹೇಳಿದ್ಲೆನರೀ? ಮತ್ತ ಎಲ್ಲ ಆರಾಮ ರೀ? 

ಯಾವದಕ್ಕ ಉತ್ತರ ಮೊದಲ ಹೇಳಲಿ ನನ್ನ ನಾದಿನಿ?
ಮುದ್ದಾದ ನಾದಿನಿ ಬಳಿಗೆ ಬಂದರೆ ಅವಳ ಚೆಲುವು ನನ್ನ ಕಣ್ಣ ತುಂಬಿದೆ.... ನೂರಾರು ಬಂನನದ ಆಸೆ ಹಕ್ಕಿಯು ಎದೆಯ ಒಳಗೆ ರೆಕ್ಕೆ ಬೀಚಿ ಹಾರಿದೆ ... ಹಾಡೋಕೆ ಶುರು ಮಾಡಿದ್ರು... ನಾನು ಒಂದು ಸ್ಮೈಲ್ ಕೊಟ್ಟೆ  :) ...

ಅದೇ ಇವಾಗ್ ಇಂತದ್ದೆ ಊರು ಅಂತಿಲ್ಲ ಹೀಗೆ ಬೆಳಗಾವಿ, ರಾಯಭಾಗ, ಸುತ್ತಲು ಇವಾಗ್ ಡ್ಯೂಟಿ ಅಂದ್ರು... ಸರಿ ಬಿಡ್ರೀ ನನಗ ಚುಲೋ  ಆಯ್ತು ಮನೆಗೆ ಹೆಂಗ ಹೋಗುದು ಅಂತ ನಾನು ಅಣ್ಣ ಯೋಚಿಸ್ತಿದ್ವಿ ;) ...

ನಮ್ಮ ಮಾಮರ ಜೀಪ್ ನ್ಯಾಗ ಹತ್ತಿ ಮನಿಗೆ ಹೊಂಟ್ವಿ... ಹೊಗೊವಾಗ್ ಸಕತ್ ಮಜಾ... ನಮ್ಮ ಜೀಪ್ ನೋಡಿ ಜನ ಓಡೋದು, ಮರೆಯಾಗೋದು ನೋಡಿ ನಕ್ಕಿದ್ದೆ ನಕ್ಕಿದ್ದು... ಅದರಲ್ಲೂ ಡ್ರೈವರ್, ಸಾಹೇಬರ ನೋಡಿ ಜನ ಒಡತಿಲ್ಲರೀ,  ಅಮ್ಮವರೆ ನಿಮ್ಮನ ನೋಡಿ ಅಂದ... ಯಾಕ್ರಿ ಅಣ್ಣಾವ್ರೆ ಅಂತ  ಒಂದು ಸಾರಿ ನಕ್ಕೆ...ಪಾಪ ಜನಾ ಜೀಪ, ಪೋಲಿಸ್ ನೋಡಿ ಒಡೋರು...
ಮನೆ ಬಂತು... ಅವ್ವ, ಅಪ್ಪಾಜಿ, ಅಕ್ಕ, ಅಜ್ಜಿ, ಕಾಕ,ಕಾಕು, ತಂಗಿ, ತಮ್ಮಂದಿರು... ಎಲ್ಲರು ಬಾಗಿಲಿಗೆ  ಬಂದು ನಿಂತಿದ್ದರು...

ಒಂದ್ ಸತಿ ಎಲ್ಲಾರ್ನು ನೋಡಿ, ಮನಸ್ಸು ಹ್ಯಪ್ಪಿಯೋ ಹ್ಯಾಪಿ :)
ಆಗಲೇ ೩ ಘಂಟೆ ಆಗಿತ್ತು... ಹೋಳಿಗೆ ಊಟ ರೆಡಿ ಇತ್ತು.... ನಮ್ಮಲ್ಲಿ ಹೋಳಿಗೆ ಸಾರು ಬಾರಿ ಅದರಾಗ ಒಳನ್ಯಗ್ ರುಬ್ಬಿದ ಸಾಂಬಾರ್ ಮಸಾಲಿ ಬಾರಿ ಬಾರಿ... ಭಾವ ಊಟಕ್ಕೆ ರೆಡಿ ಆದರು, ಅಯ್ಯೋ ಇದೇನು ಭಾವ ಡ್ಯೂಟಿ ನಲ್ಲಿ ಇರಬೇಕಾರೆ... ಇನ್ನು ಮನೆಲ್ಲಿ ಇದ್ದಿರೀ ಅಂದೇ... ಹೋಗಬೇಕು ಊಟ ಮಾಡಿ ಅಂದ್ರು...ಒಹ್! ನೀವು ನಮನೆ ಸುತ್ತನೆ ಡ್ಯೂಟಿ ;) ... ಹು ಮತ್ತೆ ಇವಾಗ ಬ್ಯೂಟಿ ಬಂದಮೇಲೆ ಇನ್ನೆಲಿ ಡ್ಯೂಟಿ ನಿಮ್ಮನೆ ಬಾಗಿಲು ಕಾಯೋದೇ ಡ್ಯೂಟಿ ಅಂದ್ರು :)
ಮೂರೂ ದಿವಸ ಅಲ್ಲೇ ಡ್ಯೂಟಿ... ಪಾಪ, ರಾತ್ರಿ, ಹಗಲು, ಉರಿ ಬಿಸಲು ಯಾವದು ಲೆಕ್ಕಿಸದೆ.. ಅದು ಬೇರೆ ಫೋನ್ ಹಂಗೆ ಹೋದಕೊತನೆ ಇರುತ್ತೆ, ಒಂದು ತಾಸ ಸತೆಕ್ ಅವರು ನಮ್ಮಕುಡ ಕಳಿಲಿಲ್ಲ, ಆ ಹೋಳಿಗೆ ಉಂಡ ದಿನ ಬಿಟ್ಟರ...
ಕಾಲಿಂಗ್ ಕಂಟ್ರೋಲ್ ರೂಮ್ ... ಎಲ್ಲದಿರೀ, ಇಲ್ಲೇ ಇದು ಆತು , ಅದು ಆತು,  ಅಂತ ಹೋದಕೊತಾನೇ ಇರ್ತಿತ್ತು...
 ಇದೆಲ್ಲದರೆ ನಡು ಮತ್ತ ನನ್ನ ಕರಕೊಂಡ ಹೋಗಾಕ, ಸ್ಟೇಷನ್ ಬಂದಿದ್ರು... ಎಂತ ಖುಷಿ... ಇಲ್ಲಿ ಬಂದಕೂಡಲೇ... ಎಲ್ಲರನು ನೆನಸೋದು, ಒಬ್ಬಳೇ ನಗೋದು...
ಏನಾದ್ರೂ ನಮ್ಮುರೆ ಚೆಂದಾ :)