ಸೋಮವಾರ, ಆಗಸ್ಟ್ 23, 2010

Reservation

ನಾ ಯುನಿವೆರ್ಸಿಟಿ ಹೋಗು ಬಸ್ ಕೆಟ್ಟ ನಿಂತತು... ಲೇಟ್ ಬ್ಯಾರೆ ಆಗಾತಿತ್ತು... ಏನ್ ಮಾಡುದು.. ಇಳದು ಬ್ಯಾರೆ ಬಸ್ ಹತ್ತಬೇಕು ಅಂದ್ರ.. ಅದು ಕೆಟ್ಟಿದ್ದು ನಡು ರಸ್ತೆ... ಹಂಗ ಡ್ರೈವರ್ ಅಂತು ಬಸ್ ಬಾಗಲಾ ತೆಗಿಯಪ್ಪ ಇಲ್ಲೇ ಇಳಿತೆವಿ ಅಂದ್ರು... safety issue ಅಂತೇಳಿ ಬಾಗಲಾನು ತಗಿಲಿಲ್ಲ.... ಇನ್ನು ಬ್ಯಾರೆ ಬಸ್ ಬರುದು ತಡಾ ಅಂತಾ ಗೊತ್ತಾತು... ಅಲ್ಲೇ ಆಜು ಬಾಜು (ಅಕ್ಕ ಪಕ್ಕ) ಕುತವರಿಗೆಲ್ಲ ಸ್ಮೈಲ್ ತಳ್ಳಿ... ಮತ್ತ ಬಂದು ನನ್ನ ಆಸನಕ್ಕೆ ಆಸಿನಳಾಗಿ...ಒಂದಿಷ್ಟು ಗಿಚಿದ್ದು...
 ನಮ್ಮುರಕಡೆ ಬಸ್ ಸೀಟ್ ಹಿಡಿಯೋ ನೆನಪಾಗಿ ಒಬ್ಬಾಕಿ ನಗಾಕ ಶುರು ಮಾಡಿದೆ... 
ನಿಮಗೂ ನೆನಪಾತ???
 ಹುಬ್ಬಳ್ಳಿ ಬಸ್ ಸ್ಟ್ಯಾಂಡ್... ನಮ್ಮ ಅಜ್ಜ ಅಜ್ಜಿ ಊರಿಗೆ ಸುಟಿ ಇದ್ದಾಗ ಹೋಗು ದಿನಗಳು... ಬಸ್ಸಿಂದ ಹೊರಗೆ ನಿತಕೊಂಡು ನಮ್ಮ ಮಾವಯ್ಯ (ತಾಯಿ ಅಣ್ಣ) ಟಾವೆಲ್ ಒಗದು ಸೀಟ್ researvation ಮಾಡೋದು... ಅಸ್ಟೆ ಅಲ್ಲರಿ... ಕರವಸ್ತ್ರ, ಟಪಗಿ, ಕಯ್ಯಗ ಏನ್ ಸಿಗತದೋ ಅದನ್ನ ಆಗದು... ಸೀಟ್ reservation ಮಾಡೋದು... ಸೀಟ್ ಅಂತು reserve ಆಗಿರ್ತಿತ್ತು... ಇನ್ನು ಬಸ್ ಹತ್ತಿ ಒಳಾಗ ಬರುದರಾಗ... ಯಾರರ ಕೂತಿದ್ದರ ಪಜೀತಿ ಮಾಡಿ... ಎಷ್ಟು ಕಷ್ಟ ಪಟ್ಟು reserve  ಮಾಡಿದ ಸಂಗತಿ ಹೇಳಿ ಎಬ್ಬಸಿ ಊರ ಬರೋವರೆಗೂ ನಿಶ್ಚಿಂತಿ...

ಇನ್ನು ಚುಮಣಿ ಎಣ್ಣಿ ಪಾಳಿ
ಆರ  ಲಿಟರ್ ಹಿಡಿಯೋ ಬಾಟಲಿಗೆ ಎಂಟ ಲೀಟರ್ ಹಾಕೋ ನಮ್ಮ ರೇಶನ ಅಂಗಡಿಗಳು...
ಚುಮಣಿಎಣ್ಣಿ (ಸಿಮೆ ಎಣ್ಣೆ) ಮುಂಜಾನೆ ಜಲ್ದಿ ಎದ್ದು ಹೋಗಿ ಒಂದು ಕಲ್ಲು ಇಟ್ಟಬರೋದು ಡಬ್ಬಿ ಬದಲಿಗೆ, ಆ ಕಲ್ಲೇ reservation  place  for next  dubbi...

ಇಷ್ಟು ಸಾಕು ಮತ್ತ ಮುಂದಿನ reservation ಮತ್ತ ಬರೀತೀನಿ...
    

ಮಂಗಳವಾರ, ಆಗಸ್ಟ್ 3, 2010

ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ

ಇತ್ತೀಚಿಗೆ ನನ್ನ ಭಾರತೀಯ ಗೆಳೆಯ ಒಬ್ಬ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ, ಅವನ ಮತ್ತು ಮತ್ತಿಸ್ಟು  ಜನಾ ಫಾರೆನ್ ಫ್ರೆಂಡ್ಸ್ ಜೊತೆ ಆದ ಸಂಭಾಷಣೆಯನ್ನ, ಆಡು ಭಾಷೆಯಲ್ಲಿ ಭಾರತದಲ್ಲಿರೋವರ ಪಾಶ್ಚಾತ್ಯ ಸಂಸ್ಕೃತಿ, ಸ್ವಚತೆ ಬಗ್ಗೆ ಆಡೋ ಮಾತುಗಳು ಕೂಡಾ ಮಿಕ್ಸ್ ಮಾಡಿ ಬರೆದಿದ್ದೇನೆ....

ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ...
ಅಯ್ಯೋ!! foreigners ಬಾಳ ಮುಂದ ಬಿಡ್ರಿ... ಏನೆಲ್ಲಾ ಕಂಡು ಹಿಡದಾರಿ, ಹೆಂಗೆಲ್ಲ ಮನಿ ಕಟಕೊಂಡಾರಿ... ಅಬ್ಬಬ್ಬಬ್ಬ!!! ಬ್ಯಾಸಗ್ಯಾಗ ತಣ್ಣನ ಗಾಳಿ, ಚಳಿಗಾಲದಾಗ ಬೆಚ್ಚಗೆ ಇರುಹಂಗೆ... ಏನೆಲ್ಲಾ ವ್ಯವಸ್ತೆ, ಏನ್ ಸ್ವಚತಾ... ಮೇಚ ಬೇಕರಿ... ಏನ್ ಶಾಣೆ ಅಂತಿರಿ...
ನಮಲ್ಲೆನರಿ ಮಂದಿ ಅಜ್ಞ್ಯಾನಿಗಳು... ಏನ್ ತಲಿನ ಇಲ್ಲ ಬಿಡ್ರಿ...

ಅಲ್ಲಿಯವರು ಮಕ್ಕಳಿಗೆ ಶಿಸ್ತು ಕಲಸೋದು ಅಂದರ ಮೆಚಬೇಕರಿ... ಏನ್ ನೀಟ್ ಅಂತಿರಿ ನಮ್ಮನಿಗೆ ಇತ್ತಿತಲಾಗ foreignನ್ಯಾಗ್ ಇದ್ದ ಬಂದ ಇಬ್ಬರು ಗಂಡಾ ಹೆಂಡತಿ ಅವರ ಮಕ್ಕಳನ್ನ ಕರಕೊಂಡು ಬಂದಿದ್ರು... ನಮ್ಮ ತಮ್ಮನ ಮಕ್ಕಳಿಗೂ ಅವರಿಗೂ ಹೊಲಸಿದರ... ಆ foreign ಮಕ್ಕಳು (ಆ ಜೋಡಿಗೆ ಇರೋ ಮಕ್ಕಳು) ಅವು foreign ಮಕ್ಕಳು ಆಗೊದವು ಮಾತಾಡ್ತಾ ಹೊಗಳ್ತಾ...ಛೆ ಛೆ ಛೆ ಏನ್ ನಾಜೂಕು, ಏನ್ ಕತಿ...

ಫಾರೆನ್ ಸಂಸ್ಕೃತಿ ನಮ್ಮದಾಗಿಸ್ಕೊಲಿಕ್ಕೆ ಬಾಳ ಹೊತ್ತೇನು ಹಿಡಿಯುದಿಲ್ಲ ಬಿಡ್ರಿ. ಅದ ಅವರಿಗೆ ನಮ್ಮ ಸಂಸ್ಕೃತಿ ಬಗ್ಗೆ ಓದಿ ತಿಳಕೊಂಡು ಅನ್ವಯಿಸಬೇಕು ಅಂದ್ರ ಒಂದು ಯುಗಾ ಕಳಿಬೇಕು. ನಾನೇನು ಅವರ ಸಂಸ್ಕೃತಿ ಬಗ್ಗೆ ಕೀಳರಿಮೆ ಮುಡಸ್ತಿಲ್ಲ. ಅವರದು ಸರಳ ಜೀವನ, ಯಾರ್ ಬೇಕಾದರೂ ಸರಳವಾಗಿ ಪಾಲಿಸಬಹುದು ಅಂತಾ. ಆತ್ಮೀಯತೆ ಕಡಿಮೆ, ಅವರ ಮನೆಗೆ ಹೋಗಬೇಕಿದ್ದರೆ ಮೊದಲೇ ಒಂದು ವಾರ ಮುಂಚೆ ಹೇಳಿ ಫ್ರೀ ಇದ್ದೀರಾ ನಾವು ಬರಬೇಕು ಅಂತಾ ಮಾಡಿದ್ವಿ ಅಂತೆಲ್ಲ ಕೇಳಿ/ಹೇಳಿ permission ತುಗೊಂಡು ಹೋಗಬೇಕು.

ದೂರದ ಬೆಟ್ಟ ನುಣ್ಣಗೆ... ಎಲ್ಲ ಕಡೆನು, ಅವರದೇ ಆದ ಸಂಸ್ಕೃತಿ... ಅಲ್ಲಿಯವರಿಗೆ ನಮ್ಮ ಸಂಸ್ಕೃತಿ ಬಗ್ಗೆ ಹೇಳಿ ನೋಡ್ರಿ. ಎಲ್ಲಿಲ್ಲದ ಆತ್ಮೀಯತೆ, ಪರಿಚಯ ಇಲ್ಲದಿದ್ದರೂ, ಬಾಗಿಲು ತಟ್ಟಿದಾಗ್ ಬಾಗಲ ತೆಗದು, ನೀರು ಬೇಕಿತ್ತೆನರಿ, ಎಲ್ಲಿಯವರು, ಎಲ್ಲಿ ಹೊಂಟಿದ್ರಿ... ವಿಚಾರಿಸಿ ಅವರ ತೋರಸೋ ಅಕ್ಕರೆ ಮುಂದೆ. ಇದ್ಯಾವ ಲೆಕ್ಕ... ಫೇಮಸ್ ಬರಹಗಾರ Francois Gautier ಭಾರತ ಬಗ್ಗೆ ಬರೆದಿರುವ ಲೇಖನಗಳು ಸೂಪರ್. ಸಮಯಾ ಸಿಕ್ಕಾಗ ಓದಿ ನೋಡಿ...

ನಮ್ಮಲ್ಲೇ ಹಿಂತಾ ಹಾಯ್ ಫಾಯ ಲೈಫ್ ಬೇಕು ಅವರಂಗ ಇರಬೇಕು, ಅದು ಸರಿ ಇಲ್ಲ, ಇದು ಸರಿ ಇಲ್ಲ... ಎಲ್ಲದಕ್ಕೂ ಸರಿ ಇಲ್ಲ... ಅದ ಇದ್ದಿದ್ರ ಮಸ್ತ ಇರ್ತಿತ್ತು... ಅದಕಿಂತಾ... ನಾವೇ ಅನುಸರಿಸ್ಕೊಂಡು ಹೋದರೆ, ಎಷ್ಟು ಚುಲೋ ಇರತೆತಿ ಅಲ್ಲವಾ... ನಿಜಾ ಜನಸಂಖೆ ಸಮಸ್ಯಯಿಂದಾ ಎಲ್ಲ ರೀತಿ ವ್ಯವಸ್ತೆ ಮಾಡೋದು, ಮಾಡಿದರು ಪಾಲಸೋದು ಎಷ್ಟು ಕಷ್ಟಾ.

ತಂದೆ ತಾಯಿಯನ್ನ ವಯಸ್ಸಾದ ಕೂಡಲೇ ವೃದ್ದಾಶ್ರಮಕ್ಕ ಸೇರಿಸಿ ಫಾರೆನ್ ಬಂದು ಇರೋದು ಸರಳ ಅನಿಸದವರಿಗೆ. ಅವರ ಜೊತೆ ಇದ್ದು, ಅವ್ವನ ಕೈ ಅಡುಗೆ, ಅಪ್ಪನ ಸಲಹೆ. ಮಕ್ಕಳಿಗೆ ಅಜ್ಜ, ಅಜ್ಜಿ ಪ್ರೀತಿ ಕೊಟ್ಟು ನೋಡಿ... ತಂದೆ, ತಾಯಿಯನ್ನ ವೃದ್ದಾಶ್ರಮಕ್ಕ ಸೇರಸಿ, ನಾನು ಇಷ್ಟು ದುಡ್ಡು ಕಳಸ್ತಿನಿ, ಯಾವದಕ್ಕೂ ನಮ್ಮನ್ನ ನೆನಸಿರಬಾರದು ಎಲ್ಲ ಅನುಕುಲಾನು ಮಾಡಿ ಬಂದೇನಿ... ವಯಸ್ಸಾದಾಗ ಅವರಿಗೆ ಬೇಕಾಗಿರೋದು ಆಸರೆ, ದುಡ್ಡಲ್ಲ... ನಮಗಾಗಿ ಅವರು ಪಟ್ಟ ಪರಿಶ್ರಮ, ನೋವಿದ್ದರೂ ಎಲ್ಲಿ ನಮ್ಮ ಓದಿಗೆ ಎಫೆಕ್ಟ್ ಆಗುತ್ತೋ ಅಂತ ಸಮಸ್ಯ ಅನ್ನೋದು ನಮ್ಮ ಕಡೆ ಸುಳಿಯದ ಹಾಗೆ ನೋಡಕೊಂಡು. ಎಲ್ಲ ಬೇಕುಗಳನ್ನು ಇಡೆರಸೋದು. ಅಬ್ಬ!! ಬರಿತಾ ಹೋದರೆ ಒಂದೇ ಎರಡೇ. 

ನಿಜಾ ಫಾರೆನ್ ನಾವು ಬಂದಿರೋದು ಒಂದು ಒಳ್ಳೆ ವಿಧ್ಯಾಭ್ಯಾಸಕ್ಕೋ ಅಥವಾ ದುಡ್ಡು ಮಾಡುದುಕ್ಕೋ. ಆದರೆ ಅದೇನೇ ಇದ್ದರು 'ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ'.