ಸೋಮವಾರ, ಜನವರಿ 25, 2010

 ಧರಣಿ ಮಂಡಲ ಮದ್ಯಧೋಳಗೆ
ಮೆರೆಯುತಿಹ ಕರುನಾಡ ದೇಶದೊಳಿರುವ
ಕಾಳಿಂಗನೆಂಬ ಗೊಲ್ಲನ ಪರಿಯ ನಾನೆಂತು ಪೇಳ್ವೆನು
ಎಳೆಯ ಮಾವಿನ ಮರದ ಕೆಳಗೆ
ಕೊಳನುದುತ ಗೊಲ್ಲ ಗೌಡನು
ಬಳಸಿ  ನಿಂದ  ಕರುಗಳನ್ನು

ಬಳಿಗೆ ಕರೆದನು ಹರುಷದಿ
ಗಂಗೆ ಬಾರೆ ಗೌರಿ ಬಾರೆ
ತುಂಗಭದ್ರೆ ತಾಯಿ ಬಾರೆ
ಪುಣ್ಯಕೋಟಿ ನೀನು ಬಾರೆ
ಎಂದು ಗೊಲ್ಲನು ಕರೆದನು

ಗೊಲ್ಲ ಕರೆದ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂದು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ
ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಹಬ್ಬಿದ ಮಲೆ ಮಧ್ಯದೊಳಗೆ
ಅರ್ಭುತನೇನ್ ಎಂಬಿ  ವ್ಯಾಘ್ರನು
ಅಬ್ಬರಿಸಿ ಹಸಿಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಮೊರೆದು ರೋಷದಿ  ಗುಡುಗುತ ಹುಲಿ
ಭೋರಿಡುತ  ಚ್ಹಂಗನೆ  ಜಿಗಿದು
ನೆಗೆಯಲು ಚೆದರಿ ಹೋದವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದಿ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನಿಗಲೇ
ಬಿಳಹೊಯ್ವೇನು ನಿನ್ನ ಹೊಟ್ಟೆಯ
ಸಿಳಿಬಿಡುವೇನು ಎನುತ ಕೋಪದಿ
ಖುಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೇ ಕೇಳು
ಕಂದನಿರುವನು  ದೊಡ್ಡಿಯೊಳಗೆ
ಒಂದು  ನಿಮಿಷದಿ  ಮೊಲೆಯ  ಕೊಟ್ಟು
ಬಂದು  ಸೇರುವೆ  ನಿಲ್ಲಿಗೆ

ಹಸಿದ  ವೇಳೆಗೆ  ಸಿಕ್ಕಿದೊಡವೆಯ
ವಶವ  ಮಾಡದೇ  ಬಿಡಲು  ನೀನು
ನುಸುಳಿ   ಹೋಗುವೆ  ಮತ್ತೆ  ಬರುವೆಯ
ಹುಸಿಯ  ನುಡಿಯುವೆನೆಂದಿತು

ಸತ್ಯವೇ  ನಮ್ಮ  ತಾಯಿ  ತಂದೆ
ಸತ್ಯವೇ  ನಮ್ಮ  ಬಂಧು  ಬಳಗ
ಸತ್ಯ  ವಾಕ್ಯಕೆ  ತಪ್ಪಿ  ನಡೆದರೆ
ಮೆಚ್ಚನಾ  ಪರಮಾತ್ಮನು
ಸತ್ಯವೇ  ಭಗವಂತನೆಂಬ  ಪುಣ್ಯಕೋಟಿಯ  ಕತೆಯಿದು

ಕೊಂಡು  ತಿನ್ನುವೆನೆಂಬ  ಹುಲಿಗೆ
ಚೆಂದದಿಂದ  ಭಾಷೆ  ಕೊಟ್ಟು
ಕಂಡ  ನಿನ್ನನು  ನೋಡಿ   ಪೋಗುವೆ
ನೆಂದು  ಬಂದೆನು  ದೊಡ್ಡಿಗೆ

ಅರ  ಮೊಲೆಯನು  ಕುಡಿಯಲಮ್ಮ
ಅರ  ಬಳಿಯಲಿ  ಮಲಗಲಮ್ಮ
ಅರ  ಸೇರಿ  ಬದುಕಲಮ್ಮ
ಆರು  ನನಗೆ  ಹಿತವರು

ಅಮ್ಮಗಳಿರ   ಅಕ್ಕಗಳಿರ 
ಎನ್ನ ತಯೋಡ ಹುಟ್ಟುಗಳಿರ
ಕಂದ ನಿಮ್ಮವನೆಂದು  ಕಾಣಿರಿ
ತಬ್ಬಲಿಯನಿ  ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನಿ  ಕರುವನು

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೋಗುವೆನು
ಇಬ್ಬರ ಋಣ ತಿರಿತೆಂದು
ತಬ್ಬಿಕೊಂಡಿತು ಕಂದನ

ಸತ್ಯವೇ  ಭಗವಂತನೆಂಬ  ಪುಣ್ಯಕೋಟಿಯ  ಕತೆಯಿದು

ಗೋವು ಕರುವನು ಬಿಟ್ಟು ಬಂದು
ಸಾವಕಾಶವ  ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು
ಖಂಡವಿದೆಕೋ ಮಾಂಸವಿದೆಕೋ
ಗುಂಡಿಗೆಯ  ಬಿಸಿರಕ್ತವಿದೆಕೋ
ಚಂದವ್ಯಘ್ರನೆ  ನಿನಿದೆಲ್ಲವ
ನುಂಡು  ಸಂತಸದಿಂದಿರು

ಪುಣ್ಯಕೋಟಿಯ  ಮಾತ  ಕೇಳಿ
ಕಣ್ಣನಿರನು  ಸುರಿಸಿ  ನೊಂದು
ಕನ್ನೆಯಿವಳನು  ಕೊಂಡು  ತಿಂದರೆ
ಮೆಚ್ಚನಾ  ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು  ಏನ ಪಡೆವೆನು
ಎನ್ನುತ ಹುಲಿ ಹರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕತೆಯಿದು

ಪುಣ್ಯಕೋಟಿಯ ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನಗೊಲ್ಲನ ಕರೆದು ತಾನು
ಮುನ್ನ ತದಿಂತೆಂಡಿತು

ಎನ್ನ ವಂಶದ ಗೋವಗಲೋಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ  ಕೃಷ್ಹ್ಣನ  ಭಜಿಸಿರಿ....

13 ಕಾಮೆಂಟ್‌ಗಳು:

ಮನಸು ಹೇಳಿದರು...

nanna istada haadu thnq

ARUN MANIPAL ಹೇಳಿದರು...

ee hadu odi bahala hele nenapugalu kaditu ..nimma blog chennagide..heege barita iri.

Manasa ಹೇಳಿದರು...

@ manasu.. thanks ree, idu nanagu kuda tumba istavaad haadu...

Manasa ಹೇಳಿದರು...

@ Arun, ee hadu hige hasiragiralee, eegina pustakagaLalli ideyo ilawo gottilla.. idar message matra heart touching. thanks for the encouragement...

ಸವಿಗನಸು ಹೇಳಿದರು...

ಮೊದಲ ಬೇಟಿ ನಿಮ್ಮ ಬ್ಲಾಗಿಗೆ ...ಅಲ್ಲೆ ನನ್ನ ಬಹಳ ಇಷ್ಟವಾದ ಹಾಡು.....
ನನಗೆ ಮಾತ್ರ ಅಲ್ಲದೆ ನಮ್ಮ ಮನೆಯವರೆಲ್ಲರ ಅಚ್ಚುಮೆಚ್ಚು....
ಚೆನ್ನಾಗಿದೆ...
ಬರೀತಾ ಇರಿ....

Manasa ಹೇಳಿದರು...

@ Saviganasu,

Thanks for the encouragement ree... tumba khsushi aayatu, ee haadu nenap madi madi baradadakke sarthaka ayatu anastide :)

ಸೀತಾರಾಮ. ಕೆ. ಹೇಳಿದರು...

ನನ್ನ ಇಷ್ಟದ ಹಾಡು.
ಇದನ್ನು ಕೇಳಲು ಈ ಕೊ೦ಡಿ ಕ್ಲಿಕ್ಕಿಸಿ :
http://www.youtube.com/watch?v=mUNtHRXyWXY

ಸೀತಾರಾಮ. ಕೆ. ಹೇಳಿದರು...

ಈ ಕೊ೦ಡಿಯಲ್ಲಿ ನಾಟಕ ರೂಪದ ಕಥೆಯ ಸನ್ನಿವೇಶ ದೃಶ್ಯ-ಮಾದ್ಯಮದಲ್ಲಿದೆ. ಹಾಡು ಕೇಳುತ್ತಾ ಮತ್ತು ನಾಟಕ ನೋಡುತ್ತಾ ಕಣ್ಣೀರನ್ನು ತಡೆಯಲು ನನ್ನಿ೦ದ ಇದುವರೆಗೂ ಆಗಿಲ್ಲ. ನೀವು ಪ್ರಯತ್ನಿಸಿ.
ಹಾಡು ಕೇಳಿದ ಮೇಲೆ ಮನಸ್ಸು ಹೇಗಿರುತ್ತೆ .... ಅನುಭವಿಸಿ.....

Manasa ಹೇಳಿದರು...

ಸೀತಾರಾಮ್ ಸರ್,
ಲಿಂಕ್ ಕಲಿಸಿದಕ್ಕೆ ತುಂಬಾ ಧನ್ಯವಾದ :)
ಈ ಹಾಡೀನ್ ಸಂದೇಶಾ ನನಗೆ ತುಂಬಾ ಇಸ್ಟಾ...

Ramesha ಹೇಳಿದರು...

Manasa... Idu nanage bahala ishtavaada haadu.. nanna baalya nenapisiddakkaagi dhanyavaadagalu.. P B Srinivas avara dhvaniyalliyu keli kanneeru hakiddu nenne-monne irabahuduanisuttade... :)

Manasa ಹೇಳಿದರು...

@ Ramesh thanks ree,

Nimma baalya nenapisidakke nanagu kuda tumbaa santoshaa aayatu, song is fantabulous :)

Deepu ಹೇಳಿದರು...

ಹಳೆಯ ನೆನಪನ್ನುಮತ್ತೆ ಚಿಗುರಿಸಿಧಕ್ಕೆ ತುಂಭ ದನ್ಯವದ

Jay ಹೇಳಿದರು...

ಈ ಹಾಡು ಕರ್ನಾಟಕದ ಎಲ್ಲರ ಮನಸ್ಸಿನ ಸಹಬಾಳ್ವೆಯ ಕನ್ನಡಿಯ೦ತೆ. ಬಹಳ ಇಷ್ಟವಾದ ಹಾಡು, ಕೊಟ್ಟ ವಚನವನ್ನ ಊಳಿಸಿಕೊಳ್ಳುವಿಕೆಯ ಪ್ರತಿಫಲವನ್ನು ಅದ್ಭುತವಾಗಿ ವರ್ಣಿಸಲಾಗಿದೆ.