ಸೋಮವಾರ, ಫೆಬ್ರವರಿ 22, 2010

Fear of attack

ಇಲ್ಲಿ ಆಗತಿರೂ ಜನಾಂಗಿಯ ದಾಳಿ ಬಗ್ಗೆ.. ಓದಿ, ಕೇಳಿ, ನೋಡಿ, ಇತ್ತೀಚಿಗೆ ನನಗು ಕೂಡ ಹೆದರಿಕೆ ಆಗಿದೆ....
ಮೊದಲ ನಾನಿರತಿರೂ ಜಾಗ ಸುರಕ್ಷಿತ ವಾಗಿತ್ತು, ಈಗೀಗ ಬಂದಿರೋ ಜಾಗ ಸ್ವಲ್ಪ ಶಾಂತವಾಗಿರೋ ಮತ್ತು ೬ ಗಂಟೆಮೇಲೆ ಯಾರು ಹೊರಗಿರೋಲ್ಲ...

ಹೀಗೆ ಒಂದು ರಾತ್ರಿ 7.30 ಆಗಿತ್ತು, ಆದಿನಾ ತುಂಬಾ ಕತ್ತಲು, ಮೋಡಾ ಬೇರೆ ಕಪ್ಪು.. ಮಳೆ ಆಗೋ chances ಇದೆ ಅದಕ್ಕೆ ಮೋಡಾ ಎಲ್ಲ ಕಪ್ಪು ಅನ್ಕೊಂಡು, ಚುಕ್ಕಿ ಬೇರೆ ಕಾಣ್ತಿಲ್ಲ... ಮೋಡಾ ಆಗಿರೋವಾಗ ಚುಕ್ಕಿ ಎಲ್ಲಾ ಎಲ್ಲ ಕಾನಸಬೇಕು ನನ್ನ ಹುಚು ಕಲ್ಪನೆ ಏನೆಲ್ಲ ಯೋಚಿಸ್ತಿದ್ದಿನೀ... ಅನ್ಕೊಂಡು ಬಸ್ ಈಳದು... ಆಚೆ, ಈಚೆ ನೋಡದೆ ಯಾರು ಇರಲಿಲ್ಲ... ಸ್ವಲ್ಪ ಹೀಗೆ ಎರಡು ಹೆಜ್ಜೆ ನಡದೇ... ಇಬ್ಬರು ಹುಡಗರೂ ನನ್ನ ಹಿಂದೆ ಬರೋಕ್ ಶುರು ಮಾದದ್ರು... ಸ್ವಲ್ಪ ಸ್ವಲ್ಪವಾಗಿ ಭಯ ನನ್ನನ ಆವರಸೋಕ್ ಶುರು ಮಾಡ್ತು...

ಮುಂದೆ ಹೋಗಿ ಸ್ವಲ್ಪ ನಿಂತರೈತು, ಹಿಂಬಾಲಕರು ಸ್ವಲ್ಪ ಮುಂದೆ ಹೋದಮೇಲೆ ನಾನು ನಡದ್ರಯತು ಅನ್ಕೊಂಡು, ಸುಮ್ನೆ ಹೀಗೆ ಹಾಡು ಕೇಳ್ತಾ ಇರೋ ಹಾಗೆ ನನ್ನ ಮೊಬೈಲ್ ತೆಗದು ಅಲ್ಲೇ ಒಂದು ಮೂಲೆಯಲ್ಲಿ ನಿತಕೊಂಡೆ... ಆ ಹುಡಗರೂ ಕೂಡ ಅಲ್ಲೇ ನಿಂತು, ನೋಡಲಿಕ್ಕೆ ಶುರು ಮಾಡಿದ್ರು... ಏನಪ್ಪಾ ಮಾಡೋದಿಗಾ, ನಾನೇನಾದ್ರು  ಓಡಲಿಕ್ಕೆ ಶುರು ಮಾಡದರೆ, ಎಲ್ಲಿ ಬೆನ್ನು ಹತ್ತರೋ ಅನ್ನೋ ಭಯ, ಅಲ್ಲೇ ನಿಂತರೆ???? ಹೀಗೆಲ್ಲ ಏನೇನೊ ಪ್ರಶ್ನೆ, ಉತ್ತರ, ಉತ್ತರ ಪ್ರಶ್ನೆ....
ಧರ್ಯ ಮಾಡಿ ನಡಿತಾ ಹೋದೆ... ಹಿಂದೆ ಹುಡಗರೂ ನಾನು ಹೋಗೋ ದಾರಿನೆ ಹಿಂಬಾಲಿಸುತ್ತ, ಬರಲಿಕ್ಕೀ ಶುರು ಮಾಡಿದ್ರು... ಅವರ ನೋಡೋ ದೃಷ್ಟಿ ನೋಡಿ... ಇವತ್ತು ನನ್ನಮೇಲೆ ಹಲ್ಲೆ ಆಗೋ ಹಾಗಿದೆ... ಮನೆಲ್ಲಿ ಎಷ್ಟು ಹೇಳಿದ್ರು ವಾಪಸ್ ಬಂದು ಬಿಡು ಅಂತ, ಎಷ್ಟು ಮೊಂಡು ಧರ್ಯ ನಂದು ಎಲ್ಲರಿಗೂ ವಾದ ಮಾಡಿ ಇಲ್ಲೇ ಓದ ಬೇಕು ಅಂತ ಬಂದೆ (ಈ ಎಲ್ಲಾ ಭೂತ, ಭವಿಷ್ಯ ಕಾಲ ಎಲ್ಲಾ ಯೋಚಿಸ್ತಾ)..ಆದದ್ದಾಯಿತು, ಅಂತ ಹಿಂದೆ ನೋಡದೆ ಹೋಗ್ತಾನೆ (ಸ್ವಲ್ಪ ಜೋರಾಗಿ) ಇದ್ದೆ...
 ಆ ಹುಡಗರು ಜೋರಾಗಿ ನನ್ನ ಹತ್ತರನೇ ಬರೋ ಹಾಗೆ ಅನಸ್ತು..

ಅಯ್ಯೋ ದೇವರೇ ಅನ್ಕೊಂಡು ನನ್ನ ಎರಡು ಕೈಗಳಿಂದ ಗಟ್ಟಿಯಾಗಿ ಕಿವಿ ಹಿಡದು ಅಲ್ಲೇ ನಿಂತು ಬಿಟ್ಟೆ... ಆ ಹುಡಗರು ಓಡಿ ಹೋಗಿ taxi ಹಿಡದರು... ಅವರಿಗೂ ನಾನು ಹೆದರಿರೋ ವಿಷಯ ಗೊತ್ತಿತ್ತೇನೋ.. We are not attackers sweety!!! ಅಂತೇಳಿ ಹೋದರೂ :P ... ಅಯ್ಯೋ ಹುಚ್ಚು ಜೀವವೆ, ಎಷ್ಟು ಜೀವನದ ಮೇಲೆ  ಆಸೆ ಅನ್ಕೊಂಡು, ಮನೆಗೆ ಬಂದೆ...  ಹೆದರಿಕೆ ಅನ್ನೋದು ಎಷ್ಟು ಆಳವಾಗಿ ಮನದಲ್ಲಿ ಮೂಡಿದೆ ಅಂದ್ರೆ, ಈವಾಗ ೬ ಗಂಟೆಕೆಲ್ಲ ಮನೆ ಸೇರತಿನೀ...

6 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ಮಾನಸ,
ದೇವರು ನಿಮ್ಮ ಜೊತೆ ಇದ್ದಾನೆ....
ಎಲ್ಲರೂ ಕೆಟ್ಟವರಲ್ಲ ....ಒಳ್ಳೆ ಜನ ಸಹ ಇದ್ದಾರೆ ಆದರೆ ಹೇಗೆ ನಂಬುವುದು...
ನಮ್ಮ ಹುಷಾರು ನಮಹೆ ಇರಬೇಕು....
ಚೆಂದದ ಬರಹ....

Manasa ಹೇಳಿದರು...

@ saviganasu,

Thanks ree... Nanna message kudaa ade :)

ಸಾಗರದಾಚೆಯ ಇಂಚರ ಹೇಳಿದರು...

ಮಾನಸ
ನಿಮ್ಮ ಬ್ಲಾಗಿಗೆ ಇಂದು ಬಂದೆ,
ನಿಮ್ಮ ಉತ್ತರ ಕರ್ನಾಟಕದ ಕನ್ನಡದ ಸೊಗಸು ತುಂಬಾ ಇಷ್ಟ ಆಯಿತು
ಆ ಭಾಷೆಯ ಸೊಗಡು ಮನಸ್ಸಿಗೆ ನಾಟಿತು
ನಿಮ್ಮ ಬರಹ ಚೆನ್ನಾಗಿದೆ
ಕೆಟ್ಟ ಜನರಿಂದಾಗಿ ಒಳ್ಳೆಯ ಜನರನ್ನು ಗುರುತಿಸಲು ಅಸಾಧ್ಯವಾಗಿದೆ ಅಲ್ಲವೇ?

Manasa ಹೇಳಿದರು...

Gurumurthy Sir,

Blog visit madidakke tumba dhanyawadagaLu... Howdu ree, yaranna nambeku gottagolla... aadaree hedarike inda aada sangati!!

ಸೀತಾರಾಮ. ಕೆ. ಹೇಳಿದರು...

ಓದ್ತಾ ಓದ್ತಾ ಭಾಳ ಹೆದರಕಿ ಆಗಿತ್ರೆವ್ವಾ ಮು೦ದೆನಾಗೆತಿ.. ನಮ್ಮ ಹುಡುಗಿಗ ಯೇನಾರ ಮಾಡಿ ಗೀಡಿ ಬಿಡ್ತಾರನ ಅ೦ತ. ಸಧ್ಯ ಎನ ಆಗ್ಲಾರ್ದ ನೋಡಿ ಮನಸು ಹಗುರಾತವಾ.. ಅದ್ರೂ ಹೆನ್ನ ಹೆ೦ಗಸು ನೀ ನಿನ್ನ ಹುಶಾರ್ಯಗ ಇರು ಬ್ಯಾರೇ ದೇಶದಾಗ ನೀ ಇರಾದು.. ಅದು ನಮ್ಮ ಹುಬ್ಬ್ಳಿ ಅಲ್ಲಲ್ಲಾ ಮತ್ತಾಅ..
ಚೆ೦ದ ಬರಿದೀಯವ್ವಾ..

Manasa ಹೇಳಿದರು...

ಸೀತಾರಾಮ್ ಸರ್,
ನೀವು ನನ್ನ ಮೇಲೆ ಇಟ್ಟಿರು ಕಾಳಜೀಗೆ ತುಂಬಾ ಧನ್ಯವಾದಗಳು... ಕಂಡೀತ ಹುಷಾರಾಗಿ ಇರತೀನ್ :)... ಬರಹ ಮೆಚಿದ್ದಿಕ್ಕೆ ತುಂಬಾ ಖುಷಿ ಆಯ್ತು...