ಸೋಮವಾರ, ಮೇ 3, 2010

ಗಿರಮಿಟ್ :)

ಎಲ್ಲರಿಗು ಗೊತ್ತೈತೋ  ಇಲ್ಲೋ ನಮ್ಮಕಡೆ ಗಿರಮಿಟ್... ಈ ಸತಿ ಇಂಡಿಯಾಕ  ಹೋದಾಗ್ ನಮ್ಮೂರಿನ ಅಂದ್ರ ಹುಬ್ಬಳ್ಳಿ ದುರ್ಗದ ಬೈಲ್ನ್ಯಾಗ್... ಮಸ್ತ ಬಾಜಾರದಾಗ್ ಸಂತಿ ಮಾಡಿ... ಸಂತಿ ಮಾಡುದು ಹೆಸರಿಗೆ... ನಾನು ಅಲ್ಲಿಗೆ ಹೋಗುದು ಗಿರಮಿಟ್ ತಿನ್ನಕ ರೀ :) ....

ಒಹ್!!  ಪಾಪ,  ಗಿರಮಿಟ್ ಅಂದರ ಎಲ್ಲರಿಗು ಗೊತ್ತೈತೋ ಇಲ್ಲೋ .. ಏನು ಅಂತಿರಬೇಕು ಅಲ್ಲ...
ನಮ್ಮಕಡೆ ಬಹಳ ಫೇಮಸ್ ಚಾಟ್ ರೀ ಅದು... ಚುಮ್ಮರಿ... ಅಹಹ
OK ಬಾಳ ಕಾಡಸುದು ಬ್ಯಾಡ...

ಚುಮ್ಮರಿ (ಮಂಡಕ್ಕಿ, ಬ್ಹೇಲ) ... ಮಾಡುವ ರೀತಿ ... ಉಳ್ಳಗಡ್ಡಿ (ಇರುಳಿ), ಟೊಮೇಟೊ, ಹಸಿ ಮೆಣಸಿನಕಾಯಿ, ಕೊತಂಬರಿ... ಎಲ್ಲ ಸಣ್ಣಗೆ ಹೆಚ್ಹಿ... ಎಣ್ಣಿ ಕಾಸಿ... ಸಾಸವಿ, ಜೀರಗಿ... ಚಡಪಡಿಸಿ... ಚಟಪಟ ಸಿದಸಿ... ಹೆಚಿದ ಹಸಿಮೆನಸಿನ್ಕೈ... ಉಳ್ಳಗಡ್ಡಿ... ಟೊಮೇಟೊ ಹಾಕಿ ಚೆನಾಗಿ ಗಿರ ಅಂತ ತಿರಗಿಸಿ... ಸ್ವಲ್ಪ ವಗ್ಗರಣಿ ಆರಲಿಕ್ಕೆ ಬಿಟ್ಟು ... ಆಮೇಲೆ ಚುಮ್ಮರಿ ಹಾಕಿ ಮತ್ತ ತಿರಗಿಸಿ ಗಿರ್ರ ಅಂತ... ಪುಟಾಣಿ ಹಿಟ್ಟು... ಕೊತಂಬರಿ ಹಾಕಿ.. ಒಂದು ಹಂಗ ಹಸಿಮೆಣಸಿನಕಾಯಿ.. ಮತ್ತ ಒಂದಿಷ್ಟು ಉಳ್ಳಗಡ್ಡಿ ಮೇಲೆ ಹಾಕಿ.... ಗಿರಮಿಟ್ ತಿಂದ್ರ... ಸತ್ತ ನರ ಎಲ್ಲ ಎದ್ದು ಓಡಾಕ್ ಹತ್ತವ  ... ತಲಿಯೋಳಾಗ ಕುಂತ ಪ್ರಶ್ನೆಕ್ಕ, ಪಟಾ ಪಟಾ ಅಂತ ಉತ್ತರ ಸಿಗತಾವರೀ... ಈದಂತು ನನ್ನ ಅನುಭವ... ಹಂಗೆ ೧೫ ದಿವಸದ ಪ್ರವಾಸದಾಗ್ ೫ ಸತೆ ಹೊರಗಿನ ಗಿರಮಿಟ್ ತಿಂದು ತಿಂದು... ನಮ್ಮ ಅವ್ವ... ಧುಳ ಇದ್ದಿದ್ದ ತಿಂದ್ರ ರುಚಿ ಅಂತ ಕಾಣತದ ಅದಕ್ಕ .. ದುರ್ಗದ್ಬೈಲ್ ಹೊಕ್ಕಿರೀ ಅಂತಿದ್ರು... ಮನೇಲೆ ಮಾಡಿದ್ರು ನನಗೇನೋ ಅಲ್ಲಿ ಹೋಗಿ ತಿಂದರೆ ಸಮಾಧಾನ... ಇವತ್ತು ಯಾಕೋ ಆ ದುರ್ಗದ್ಬೈಲ್ ನೆನೆಪಾಗಿ... ಗಿರಮಿಟ್ ಮಾಡಕೊಂಡು ತಿಂದು... ಬರಿಲಿಕ್ಕೆ ಒಂದು ಪ್ರೋತ್ಸಾಹ ಆತು... ನಮ್ಮ ಹುಬ್ಬಳ್ಳಿ ದುರ್ಗದ್ಬೈಲ್ ಗಿರಮಿಟ್ :) ...

ಹುಬ್ಬಳ್ಳಿಗೆ ಹೊದರ ಮರೀದ ಗಿರಮಿಟ್ ತಿನ್ನಬೇಕರೀಪ :)

14 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

ಗಿರ್ಮಿಟ್ ನೆನಸಿ ಹುಚ್ಚ ಹಿಡಿಸಿ ಕುಡಿಸಿದ್ಯವ್ವಾ!!! ನಮ್ಮ ಧಾರವಾಡದ ಟಿಕಾರೆ ರೋಡ ಜಕನಿ ಭಾವಿ ಹತ್ತಿರದ ಗಿರ್ಮಿಟ್ ನೆನಪಾಗಿ ಹೊಟ್ಟಿ ರುಮ್ಮೆ೦ದ, ಮೈ ಜುಮ್ಮೆ೦ದ, ಬಾಯೆಲ್ಲಾ ನೀರಾಡಿ, ನೆನಸಿ ಮನಸ ಭಾರ ಆತವಾ!! ದುರ್ಗದಬೈಲ್ ಗಿರ್ಮಿಟ್, ಕಟ್ಮಿರ್ಚಿ ಅವಾಗಾವಾಗ ಧಾರವಾಡದಿ೦ದ ಕ್ಲಾಸ್ಸಿಗ್ಗೆ ಚಕ್ಕರ ಹಾಕಿ, ಸೀನೇಮಾ ತಲಬಿಗೆ ಹುಬ್ಳಿಗೆ ಬ೦ದಾಗ ದುರ್ಗದಬೈಲ್-ನಾಗ ರುಚಿ ನೋಡಿದ್ದ್ವಿ.... ಆದರೂ ನಮ್ಮ ಧಾರವಾಡ ಜಕನಿ ಭಾವಿ ಗಿರ್ಮಿಟ್ ಮು೦ದ ಅದೂ ಎನೂ ಅಲ್ಲ! ಹ೦ಗ ನಿಮ್ಮ ದುರ್ಗದಬೈಲ್ ಕಟ್ಮಿರ್ಚಿ ನಮಗೆಲ್ಲೂ ಸಿಕ್ಕಿಲ್ಲ.

ಗೌತಮ್ ಹೆಗಡೆ ಹೇಳಿದರು...

ನಾನೂ ತಿಂದೀನ್ರಿ.ನಂಗು ತುಂಬ ಇಷ್ಟ :)

Ishwar Jakkali ಹೇಳಿದರು...

u remind me my engg days ....week end ge omme durgada bailige hodre ...girmit matte chat masala guarantee ...

Khareena bayaga neer bandwu ...

ಮನಸಿನಮನೆಯವನು ಹೇಳಿದರು...

Mnasa,

ನೀವು ಈಟು ಹೇಳಿದ್ಮ್ಯಾಲ ರುಚಿ ನೋಡ್ಬಿಡ್ಬೇಕಪ ಅನಿಸ್ತಾದ...

Manasa ಹೇಳಿದರು...

@ Shivashankar, definately ee sate India bandaag nimma gadgin girmit ruchi nodabekaatu :)

@ sitaram K, tumbaa thanks Dharwadad tikare road jakani bhavi girmit nenasidakke... allinu try maadinree :) masta irateti :)

@ Goutam Hegade, Oh nivu tindiree namma kade girmit... nimma comment odi khushi aayatu :)

@ Ishwar, hu ree pa... college dinadaag ellaradu favourite place of eating is Durgad bail...

Ottanalli nanna girmit, ellara baayagu nir barastu ;)

Manasa ಹೇಳಿದರು...

@ GnyanarpaNamastu, hu ree khandit aa kade hodare girmit tinnudu maribyadaree :)

Shashi jois ಹೇಳಿದರು...

ಮಾನಸ ,
ನಿಮ್ಮ ಬ್ಲಾಗ್ ಗೆ ಪ್ರಥಮ ಭೇಟಿ ..ಚೆನ್ನಾಗಿದೆ ಗಿರಮಿಟ್..ಆದರೆ ನಾನು ಮೊದಲ ಬಾರಿ ಈ ಪದವನ್ನು ಕೇಳಿದ್ದು...ನಮ್ಮಲ್ಲೂ ಇದೆ .ಆದರೆ ಅದನ್ನು ಮುಂಡಕ್ಕಿ (ಮಂಡಕ್ಕಿ )ಉಪ್ಕರಿ ಅನ್ನುತ್ತೇವೆ.ಆದರೆ ಅದನ್ನು ತಿಂದರೆ ಸತ್ತ ನರ ಎದ್ದು ಓಡೋದು ಇರಲಿ ಎದ್ದು ನಾವೇ ಓಡಬೇಕು ಆಲ್ವಾ ಹ್ಹಾಹ್ಹಾ ಹ್ಹಾ !!!!ನಿಮ್ ಭಾಷೆ ಓದಲು ,ಬರೆಯಲು ಕಷ್ಟ ಅಲ್ವ?ಮಾತನ್ನು ಕೇಳಲು ಸೊಗಸು ..ನಂಗೆ ನಿಮ್ ಭಾಷೇಲಿ ಬರೆಯಲು ಬರಲ್ಲ ..

ಜಲನಯನ ಹೇಳಿದರು...

ಮಾನಸ..ಗಿರ್ಮಿಟ್ ತಿನ್ನೋಕೆ ಪರ್ಮಿಟ್-ಗಿರ್ಮಿಟ್ ಬೇಕಾ ಹ್ಯಾಂಗೆ..ಹಹಹ..ಭಾಳ್ ಛಲೋ ಬರ್ದೀದ್ದೀ...ಖಾರ ಅನ್ನೋದ್ ಕನಸಗೈತಿ ಇಲ್ಲಿ ದೂರ್ ದೇಶ್ದಾಗೆ...

ವಾಣಿಶ್ರೀ ಭಟ್ ಹೇಳಿದರು...

nangu hubbali girmit tintididdu nenapatri matta... navu nam college days dalli tintidviri..

elligomme beti kodri

www.vanishrihs.blogspot.com

Manasa ಹೇಳಿದರು...

@ Vanishri,

Oh try maadiree andangaatu girmit :)

thanks for visiting blog :)

Manasa ಹೇಳಿದರು...

@ ಜಲಾನಯನ (ಆಜಾದರೆ),
ಏನ್ ಮಾಡುದು ಅದಕ್ಕೆ ನಮನ್ನ NRI (not required to India) ಅನ್ನೋದು ... ಎಲ್ಲ ಕನಸೇ , ಬಾಯಿ ಚಪ್ಪರಿಸಿ ನಿರು ಸೋರಿಸೋದು ನೆನಸ್ಕೊಂಡು :)

Manasa ಹೇಳಿದರು...

@ shashi Jois,
thanks for visiting blog... thanks for the comment :)

ಶಿವಪ್ರಕಾಶ್ ಹೇಳಿದರು...

nanagoo girmittu andra boo pirana ri..
naanu college days nalli, roomnaaga maadkotidde... aavaga ondu incident nadetiddu.. nanna blog naaga istralle bariteen ri...

Manasa ಹೇಳಿದರು...

Shivapraksh, ellaru ottanyaaga girmit tindu girr andirii... bahaLa tasty... thanks for the comment :)