ಸೋಮವಾರ, ಅಕ್ಟೋಬರ್ 25, 2010

ಮಾತಿನಲ್ಲಿ ಜಗವ ಗೆಲ್ಲುವ

ಕಾಡುವ ಹುಡುಗಿಯ ಕೇಳಿ ನೋಡು
ಅವಳ ಮುನಿಸಿಗೆ
ನಿನ್ನ ಅನಿಸಿಕೆ ಏನು

ಕಿತ್ತಾಡಿ ಜಗಳಘಂಟ ಅನ್ನಿಸಿಕೊಬ್ಯಾಡಾ
ತುಂಟಾಟದಿ ಮನ ಗೆದ್ದು ನೋಡು

ಸೀರೆ ತರದಿದ್ದರೂ
ನನ್ನುಸಿರೇ ಎಂದು ಕರೆದು ನೋಡು

ಸಿಡುಕು ಹೆಣ್ಣಿಗೆ
ಸಿಂಗಾರಿ ಎಂದು ನೋಡು

ಜಗಳಕ್ಕಿಳಿದರೆ
ಚೆನಮ್ಮ ಎಂದು ನೋಡು

ಸಿಟ್ಟಾದರೆ
ಮಾರಿಯಂತೆ ಹೊಳೆವ ಕಣ್ಣು ಎಂದು ನೋಡು

ಪ್ರೀತಿ ಮಾತಿಗೆ ಸೋಲದವರಿಲ್ಲ
ಮಾತಿನಲ್ಲಿ ಜಗವ ಗೆಲ್ಲುವ
ಮಾತಿನ ಮಲ್ಲನಾಗಿ ನೋಡು

11 ಕಾಮೆಂಟ್‌ಗಳು:

shivu.k ಹೇಳಿದರು...

ಮಾನಸ ಮೇಡಮ್,

"ಸೀರೆ ತರದಿದ್ದರೂ
ನನ್ನುಸಿರೇ"
ಎಂದರೆ ನಿಮ್ಮುಸಿರು ಆಮ್ಲಜನಕ ನನ್ನುಸಿರು ಕೂಡ ಆಮ್ಲಜನಕವೇ ಅದು ಗಾಳಿಯಲ್ಲಿ ಬಿಟ್ಟಿಯಾಗಿ ಸಿಗುತ್ತದೆ, ಅದರಲ್ಲಿ ನಿಮ್ಮದೇನು ಹೆಗ್ಗಳಿಕೆ ಸುಮ್ಮನೆ ಸೀರೆ ತಂದುಕೊಡ್ರಿ ಎಂದರೇ ಏನು ಮಾಡುವುದು!
ಮಾತಿನಲ್ಲಿ ಈಗ ನೀವು ಹೇಳಿದಂತೆ ಗೆಲ್ಲಲು ಸಾಧ್ಯವೇ?

arya_forU ಹೇಳಿದರು...

ಕಿತ್ತಾಡಿ ಜಗಳಘಂಟ ಅನ್ನಿಸಿಕೊಬ್ಯಾಡಾ
ತುಂಟಾಟದಿ ಮನ ಗೆದ್ದು ನೋಡು nce lines :)

chandra ಹೇಳಿದರು...

Hello Manasa avare,
Nimma kavitee odi, Nanu kavi agalu hoode.
Nivu bareda kavitee nodi, Nanu barayalu hoode.
Nivu heledange nanu matina malla nagalu hoode.
Nivu heledange nanu……………………….hoode
……. All the time Waiting for next article

- ಕತ್ತಲೆ ಮನೆ... ಹೇಳಿದರು...

ಎಷ್ಟಾದರೂ 'ಹೊಗಳದೆ ನಾರಿ ಮನಸು ಕೊಡಳು..' ಅಲ್ವೇ..!!

ನನ್ನ 'ಮನಸಿನಮನೆ'ಗೂ ಬನ್ನಿ..

ಸವಿಗನಸು ಹೇಳಿದರು...

ಮಾನಸ,
ಇನ್ನು ಕೆಲವು ಯಾರಿಗೆ ಬಿಟ್ರಿ.....
ಚಿನ್ನ, ರನ್ನ, ಬಂಗಾರ........
ಚೆನ್ನಾಗಿದೆ...

ಮನದಾಳದಿಂದ............ ಹೇಳಿದರು...

ಮಾನಸಾ ಮೇಡಂ,
ನೋಡೊಣ, ಈ ಉಪಾಯಗಳನ್ನು ನಾನು ಮುಂದೆ ಅಳವಡಿಸಿಕೊಳ್ಳುತ್ತೇನೆ. ಶಿವಣ್ಣ ಹೇಳಿದಂತೆ ಒಂದು ವೇಳೆ ಕ್ಲಿಕ್ ಆಗಿಲ್ಲ ಅಂದ್ರೆ?
ಹ್ಹ ಹ್ಹ ಹ್ಹಾ....
ಚೆನ್ನಾಗಿದೆ.

Soumya. B ಹೇಳಿದರು...

chenaagide madam.. :)

ಸತೀಶ್ ಗೌಡ ಹೇಳಿದರು...

ಕಿತ್ತಾಡಿ ಜಗಳಘಂಟ ಅನ್ನಿಸಿಕೊಬ್ಯಾಡಾ
ತುಂಟಾಟದಿ ಮನ ಗೆದ್ದು ನೋಡು


ಈ ಎರಡು ಸಾಲಿನಲ್ಲಿರುವ ಅರ್ಥ ತುಂಬಾ ದೊಡ್ಡದು ಮೇಡಂ ಮನಸ್ಸಿಗೆ ತುಂಬಾ ಹಿಡಿಸಿತು

ಬಿಡುವು ಮಾಡಿಕೊಂಡು ನನ್ನವಳಲೋಕಕ್ಕೆ ಹಾಗಾಗ ಬರುತ್ತಿರಿ

Manasa ಹೇಳಿದರು...

@ಶಿವು ಸರ್, ಹೊಗಳಿಕೆ ಅಥವಾ ಪ್ರೀತಿ ಮಾತಿಗೆ ಮನಸೋತವರು ಯಾರು ಇಲ್ಲ ಹೇಳಿ...

@aRya_forU(ವಿನಯ್), ಥ್ಯಾಂಕ್ಸ್

@Chandra, ಧನ್ಯವಾದಗಳು :)

@ಕನಸಿನ ಮನೆ/ಕತ್ತಲೆ ಮನೆ/ಮನಸಿನ ಮನೆ, ಹೊಗಳಿಕೆ ಅಂತಾಗಲ್ಲೋ ರೀ, ಇಲ್ಲಿ ಪ್ರೀತಿ ಮಾತು ಅನ್ನಬಹುದು :)

@ಸವಿಗನಸು (ಮಹೇಶ್), ಹು ಕಣ್ರೀ, ಚಿನ್ನ, ರನ್ನ,ಬಂಗಾರು ಎಲ್ಲವು ಕಾಮನ್ ಅಲ್ವಾ ಅದಕ್ಕೆ ಸ್ವಲ್ಪ different ಆಗಿರಲಿ ಅಂತಾ :)

@ಪ್ರವೀಣ್ ಗೌಡ. ಕ್ಲಿಕ್ ಆಗಿಲ್ಲ ಅಂದರೆ ನಿಮ್ಮ ಗ್ರಹಚಾರ :P

@ಸತೀಶ್ ಗೌಡ, ಧನ್ಯವಾದಗಳು... ಖಂಡಿತಾ ನಿಮ್ಮ ಲೇಖನ ಓದುವೆ :)

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ಕವನ ಮಾನಸ.
ಒಳ್ಳೆ tips

Doddamanimanju ಹೇಳಿದರು...

ಕವನ ಚನ್ನಾಗಿದೆ ಆದ್ರೆ ಮಾತಿನಲ್ಲಿ ಎಲ್ಲಾ ಹುಡುಗಿರ್ನ ಸೋಲಿಸೋಕೆ ಆಗುತ್ತಾ ನನಗೇನು ಆಗೋಲ್ಲ ಅನಿಸುತ್ತೆ ನೀವೆಲ್ಲ ಒಂಥರಾ ಪಾದರಸ ಇದ್ದಂಗೆ ತುಂಬಾ ಕಷ್ಟ ಅನಿಸುತ್ತೆ ಮಾತಿನಲ್ಲಿ ಮಲ್ಲ ಆಗ ಬಹುದು ಆದ್ರೆ ಮಾತಲ್ಲಿ ಹೆಂಡ್ತೀನಿ ಗೆಲ್ಲೋಕೆ ಆಗೋಲ್ಲ ಅಲ್ಲಿ ನೋಡಿ ಶಿವೂ ಸರ್ ಗೆ ಫುಲ್ ಅನುಭವ ವಾಗಿದೆ ಅದಕ್ಕೆ ಆಮ್ಲಜನಕ ಬಗ್ಗೆ ಹೇಳ್ತಾ ಇದಾರೆ :)