ಶನಿವಾರ, ಡಿಸೆಂಬರ್ 11, 2010

ಆ ಒಂದು ಕ್ಷಣ ಯೋಚಿಸದಿದ್ದರೆ!!

ಮಳೆ ಬರೋಹಾಗೆ ಇತ್ತು.. ಬೇಗಾ ಆಕಡೆ ಕ್ರಾಸ್ ಮಾಡಿ taxi ಇಲ್ಲ ಬಸ್ ಹಿಡಿದರಾಯತು ಅಂತಾ, ಧಾವಿಸಿ ಸಿಗ್ನಲ್ ಹತ್ರಾ ಓಡಿ ಬಂದೆ. ಪಕ್ಕದಲ್ಲಿ ಇಬ್ಬರು ಮೂವರು ಹುಡಗರು ನಿಂತಿದ್ದರು, ಸ್ಮೈಲ್ ಮಾಡಿದರು ನಾ ಕೂಡಾ ಸ್ಮೈಲ್ ಕೊಟ್ಟು muted ಹೈ ಹೇಳಿ ಆಕಡೆ ಸರೆದು ನಿಂತೇ ನನ್ನ ಹಿಂದೆ ಇನ್ನೊಬ್ಬ ಬಂದು ನಿತಾ.. ಸನ್ glasses ಹಾಕಿದಾ.. ನಾ ಇನ್ನು ಸ್ವಲ್ಪ ಆ ಕಡೆ ಸರೆದು ನಿತಕೊಂಡೆ... ಸಿಗ್ನಲ್ ಬಿಟ್ಟು.. ಕ್ರಾಸ್ ಮಾಡೋಕೆ ರೆಡಿ ಆದೆ... ಹಿಂದೆ ಸನ್ glasses ಹಾಕಿರೋನು ಬಂದು ಕೈ ಹಿಡಿದಾ, ಆ ಹಿಡಿತದಲ್ಲಿ ಏನೋ ಒಂದು ನೋವಿಂದಾ ಕುಡಿದ ಅನುಭವಾ, ಕೈ ಹಿಡಿದು ನಡೆಸೆನ್ನ ಅನ್ನುವ ಹಾಗೆ ಎಂದು ಭಾಸವಾಗುತಿತ್ತು ... ಸಿಟ್ಟು ಸಹಜಾ ಹಾಗೆ ಬಂದು ಕೈ ಹಿಡಿದು ಕೊಂಡರೆ ಯಾರಿಗಾದರು, ಆದರು ತಕ್ಷಣದ ಮಟ್ಟಿಗೆ ಸಿಟ್ಟು ಬಂದಿದೆ ಅಂತಾ ಬಾಯಿಗೆ ಬಂದಾಗೆ ಮಾತಾಡೋದಾಗಲಿ ಕಪಾಳಕ್ಕೆ ಹೊಡೆಯೋ ಯೋಚನೆ ಆಗಲಿ ಬರಲಿಲ್ಲ.

ಕೈ ಹಿಡಿದೇ ರೋಡ್ ಕ್ರಾಸ್ ಮಾಡಿದವು.. ಆಮೇಲೆ ನಿತಕೊಂಡು, ನಿಧಾನಕ್ಕೆ ಕೈ ಬಿಡಸ್ಕೊಂಡೆ... ಯಾಕೆ ನೀವು ನನ್ನ ಕೈ ಹಿಡಿದದ್ದು ಅಂತಾ ಕೇಳದೆ, ಆತ ತನ್ನ ಕನ್ನಡಕ ತೆಗೆದು... ತುಂಬಾ ಧನ್ಯವಾದ ರೋಡ್ ಕ್ರಾಸ್ ಮಾಡಿಸಿದಕ್ಕೆ ಅಂತಾ ಕೈ ಕುಲುಕಿದಾ... ನಾ ಕುರುಡಾ ನಿವಿಲ್ಲದಿದ್ದರೆ ನಾ ಮತ್ತೆ ಯಾರಾದರು ಬರೋವರೆಗೂ ಕಾದು ರೋಡ್ ಕ್ರಾಸ್ ಮಾಡಬೇಕಾಗಿತ್ತು... ತುಂಬಾ ಸಹಾಯ ಆಯ್ತು ನಿಮ್ಮಿಂದಾ ಅಂತಾ ಹೊರಟಾ. ಅವನ ಮಾತು ಕೇಳಿ ಮನಸ್ಸಿಗೆ ಹಿಂಸೆ ಆಯಿತು, ಏನು ಮಾತಾಡಬೇಕು ತಿಳಿಯಲಿಲ್ಲ. ಕಣ್ಣುಗಳು ತುಂಬಿದ್ದವು. ಹಾಗೆ ಅವನನ್ನೇ ನೋಡುತ್ತಾ ನಿಂತೇ, ಆತ ಹೊರಡಲು ಅಣಿಯಾದ. ಏನೇ ಹೇಳಲು ಬಾಯಿ ಬಾರದ್ದರಿಂದಾ, ಹಾಗೆ ಅವನನ್ನೇ ಹಿಂಬಾಲಿಸಿ, ಮಾತಾಡಬೇಕೆನಿಸಿತ್ತು. ನನ್ನ ಕಾಲು ನಡುಗೆ ಇಂದಾ ಗೊತ್ತಾಗಿತ್ತು ಅವನಿಗೆ ನಾ ಹಿಂಬಾಲಿಸುತ್ತಿರುವುದು.. ಎಲ್ಲಿಂದಾ ಅಂತಾ ಕೆಳದಾ, ನಾ ನನ್ನ ಬಗ್ಗೆ ಹೇಳಿ... ಮುಂದಿನ ಕ್ರಾಸ್ ನಲ್ಲಿ ಮತ್ತೊಮ್ಮೆ ಕೈ ಹಿಡಿದು ದಾಟಿಸಿದೆ... ಮನಸ್ಸಿಗೆ ಅದೇ ಯೋಚನೆ ಕಾಡತೊಡಗಿತು.. ಕಣ್ಣಿದ್ದು ಕುರುಡರಂತೆ, ಬಾಯಿದ್ದು ಮೂಕರಂತೆ, ಕೆಲವೊಮ್ಮೆ ಆಡುತ್ತೇವೆ.. ನಿಜವಾಗಲು ಅದು ಇಲ್ಲದವರ ಪಾಡು ಎಷ್ಟು ಕಷ್ಟಾ. ಅದೇ ಗುಂಗಿನಲ್ಲಿದ್ದ ನನಗೆ ಬಟ್ಟೆ ಕರಿದಿ ಮಾಡೋ ಯೋಚನೆ ಬಿಟ್ಟು ಹೋಗಿತ್ತು . ಮನೆಗೆ ಬರ್ತಾ, ನೋಡೋಣಾ ಹೇಗಿರುತ್ತೆ ಕಣ್ಣು ಮುಚಿ ನಡೆದರೆ ಅಂತಾ... ನಾ ಇರುವ ಮನೇನೆ ದಿನವು ವಸ್ತುಗಳು ಎಲ್ಲಿರುತ್ತವೆ ಅನ್ನೋದು ಚೆನ್ನಾಗೆ ಗೊತ್ತು.. ಅದಕ್ಕೆ ಹೊರಗಡೆ ಈ ಪ್ರಯೋಗಾ ನನ್ನ ಮೇಲೆ ನಾನೇ ಮಾಡಿಕೊಂಡರಾಯಿತು ಅಂತಾ.. ಮಳೆ ನಿಲ್ಲೋದನ್ನೇ ಕಾಯ್ತಾ.. ನಿಂತಮೇಲೆ ಹೊರಗೆ ಹೋದೆ... ಹಾಗೆ ಕಣ್ಣು ಮುಚ್ಕೊಂಡು ಕಣ್ಣಿದ್ದು ಕುರಡಿ ಹಾಗೆ ನಡಿಯೋಕೆ ಶುರು ಮಾಡದೆ... ಪ್ರತಿಯೊಂದು ಹೆಜ್ಜೆ ಇಡ್ತಾ ಭಯ ಅನ್ನೋದು ಆವರಿಸಿತ್ತು, ಭಯದಲ್ಲೇ ಮುನ್ನಡೆದೆ, ಆಕಡೆ ಇಕಡೆ ಜನಾ ನಡೆದಾಡೋ ಶಬ್ದದಿಂದಲೇ, ಪಕಕ್ಕೆ ಸರಿಯುತ್ತಿದ್ದೆ...ಹಾಗೆ ಮುಂದೆ ಹೋಗಿ ಒಂದು ಮರಕ್ಕೆ ದಡ್ಡ ಅಂತಾ ತಲೆ ಬಡಿಸ್ಕೊಂಡೆ... ಆದ ನೋವು ಅಸ್ಟಿಸ್ಟಲ್ಲ, ಅಮ್ಮ ಅಂತಾ ಅಲ್ಲೇ ಕೂತು ಬಿಟ್ಟೆ.

ತಲೆ ಎಲ್ಲ ಯೋಚನೆಗಳು, ನೋವಿಂದಾಗಿ ಅಲ್ಲ... ಆ ವ್ಯಕ್ತಿಯ ಜೀವನದ ಬಗ್ಗೆ. ಎಲ್ಲದಕ್ಕೂ ಮತ್ತೊಬರನ್ನು ಅವಲಂಬಿಸುವ ಜೀವನ ಎಷ್ಟು ಕಷ್ಟಾ, ಕೇವಲ ೫ ನಿಮಿಷದಲ್ಲಿ ನನಗಾದ ನೋವು ಏನು ಅನ್ನಿಸಿರಲಿಲ್ಲ ... ಸಿಟ್ಟಿನಲ್ಲಿ ನಾ ಏನಾರು ಅಂದಿದ್ದರೆ, ಸತ್ಯಾ ತಿಳಿದಮೇಲೆ ಜೀವನ ಪೂರ್ತಿ ನನ್ನ ನಾ ಕ್ಷಮಿಸುತ್ತಿರಲಿಲ್ಲ... ಆ ಕ್ಷಣ ನಾ ಯೋಚಿಸದೆ ಏನಾರು ಅಂದಿದ್ದರೆ, ಪಾಪ ಅವನ ಮನಸ್ಸಿಗೆ ಎಷ್ಟು ನೋವಾಗಿರೋದು ನನ್ನಿಂದಾಗಿ.

7 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಮಾನಸ
ನಿಜ,
ಕೆಲವೊಮ್ಮೆ ನಾವು ಬೇರೆಯವರ ಬಗ್ಗೆ ಒಂದು ಕ್ಷಣ ಮನಸಿಸ್ಗೆ ಬಂದಂತೆ ತಿಳಿದುಕೊಳ್ಳುತ್ತೇವೆ.
''ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು'' ಎಂಬಂತೆ ಎಲ್ಲವನ್ನೂ ವೋಮರ್ಶಿಸದೆ ನಿರ್ಧಾರಕ್ಕೆ ಬರುವುದು ಕೆಲವೊಮ್ಮೆ ತುಂಬಾ
ಅಪಾಯಕಾರಿ

ತುಂಬಾ ಒಳ್ಳೆಯ ಬರಹ

Kantesh ಕಾಂತೇಶ ಹೇಳಿದರು...

ಹೌದು, ಪ್ರತ್ಯಕ್ಷ್ ಕಂಡರೂ ಪ್ರಮಾಣಿಸಿ ನೋಡಬೇಕು.

prabhamani nagaraja ಹೇಳಿದರು...

ಕತ್ತಲಲ್ಲಿ ಇರಲೇ ಭಯ ಪಡುವ ನಾವು ಜೀವನ ಪೂರ್ತಿ ಕತ್ತಲಲ್ಲಿಯೇ ಕಳೆಯಬೇಕಾದ ಅವರ ಬಗ್ಗೆ ಯೋಚಿಸುವಾಗ ಎಷ್ಟು ನೋವೆನಿಸುತ್ತದೆ ಅಲ್ಲವೇ. ಉತ್ತಮ ಅನುಭವ ಲೇಖನ ಮಾನಸ.

arya_forU ಹೇಳಿದರು...

touching

shivu.k ಹೇಳಿದರು...

ಕುರುಡನ ಬಗ್ಗೆ ಲೇಖನ ಮನತಟ್ಟಿತು..ಸೊಗಸಾದ ಬರಹ.

Manasa ಹೇಳಿದರು...

@ಸಾಗರದಾಚೆಯ ಇಂಚರ (ಗುರು ಸರ್ ) ಮತ್ತೆ ಕಾಂತೇಶ್, ನನಗೆ ಆ ಕ್ಷಣದಲ್ಲಿ ಅನಿಸಿದ್ದು ಹಾಗೆ... ಹೇಳಿದ್ದು, ಕೇಳಿದ್ದು, ನೋಡಿದ್ದು ಮೂರೂ ಸುಳ್ಳಾಗಬಹುದು. ನಿಧಾನಿಸಿ ಯೋಚಿಸೋ ಶಕ್ತಿ ನಮದಾಗಿರಬೇಕು. ಪ್ರತಿಕ್ರಿಯೆಗೆ ಧನ್ಯವಾದಗಳು :)

@ಪ್ರಭಾಮಣಿ ನಾಗರಾಜ, ಹೌದು ನೋಡಿ, ಅನುಭವ ಭಯಂಕರವೇ ಆಗಿರುತ್ತದೆ, ಧನ್ಯವಾದ ಪ್ರತಿಕ್ರಿಯೆಗೆ :)

@arya_for U(ವಿನಯ),thanks for the comment :)

@Shivu K, ಧನ್ಯವಾದಗಳು ಸರ್ ಪ್ರತಿಕ್ರಿಯೆಗೆ :)

vijayhavin ಹೇಳಿದರು...

yochane madabekada vichara

good one... :)