ಭಾನುವಾರ, ಜುಲೈ 11, 2010

ಅಲೆಮಾರಿ ಜೀವನಾ

ಮನಿ ಹುಡಕಾಕ ನಾ ಹೊಂಟೆ  
ಎಲ್ಲಿಯೋ ಬಸ್ ಸ್ಟಾಪ್
ಎಲ್ಲಿಯೋ ಆ ಮನೆ

ಮೈಲಿ ದೂರ ನಡಕೊಂತ
ದಾರಿ ಹೊಕರನ್ನ ಕೆಳಕೊಂತ

ಎಲ್ಲ್ರಿ ಈ ಮನಿ
ಕೈ ತೋರಿಸಿ ಅಲ್ರಿ ಅಂದರು
ಅಲ್ಲಿ ಅಂದಿದ್ದು ಅಲ್ಲೆಲ್ಲೋ

ಬೇಸತ್ತರು ಕೇಳವರಿಲ್ಲ
ಬ್ಯಾಸರಾದರ ಬಿಡಂಗಿಲ್ಲ
ಯಾವದಪ್ಪ ನಮ್ಮ ಮನಿ
ಎಲ್ಲದು ಬರಿ ಸುಮ್ಮನೆ
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ

ತುತ್ತು ಅನ್ನ ತಿನ್ನೋಕೆ
ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಗಿರೋಕೆ

ಹಾಡು ಏನೋ ಬರೋಬ್ಬರಿ... ತುತ್ತು ಅನ್ನ.. ಹುಮ್ಮ್.. ಸಾಕಾಗಂಗಿಲ್ಲ ಬಿಡ್ರಿ.... ಬೊಗಸೆ ನೀರು.. ಅದು ಓಕೆ... ತುಂಡು ಬಟ್ಟೆ... ಅದು ಬಿಪಾಶಾಗ ಅಸ್ಟ..... ಅಂಗೈ ಅಗಲ ಜಾಗ... ಇದು ಸ್ವಲ್ಪ ಮಟ್ಟಿಗೆ ಸೈ ಅನಬಹುದು...

15 ಕಾಮೆಂಟ್‌ಗಳು:

ಸವಿಗನಸು ಹೇಳಿದರು...

ಬರೋಬ್ಬರಿ ಹಾಡಿಗೆ ತಕ್ಕಂತೆ ನಿಮ್ಮ ಅಲೆಮಾರಿ ಜೀವನಾ ಓದಿ ಬೇಸರವೆನಿಸಿತ್ತು....
ನಿಮಗೆ ಬೇಗ ತ್ರಾಸಿಲ್ಲದೆ ಮನೆ ಸಿಗಲಿ....

ಸೀತಾರಾಮ. ಕೆ. / SITARAM.K ಹೇಳಿದರು...

:-))
ಕವನ ಚೆನ್ನಾಗಿದೆ.
ಹೊಸ ಮನೆ ಹರುಷ ತರಲಿ.
ಅಂಗೈ ಅಗಲನು ಸಾಕಾಗೊಲ್ಲಾರೀ!

!! ಜ್ಞಾನಾರ್ಪಣಾಮಸ್ತು !! ಹೇಳಿದರು...

Manasa ,
ನೀವು ಹೇಳಿದರೆ ಆಗುವುದೇ..?!
ತುತ್ತು ಅನ್ನವೇಕೆ ಅದೂ ಇಲ್ಲದ ಮಂದಿ ನೂರಾರು..
ತುಂಡು ಬಟ್ಟೆ ಬಿಪಾಶಾಗೆ ಮಾತ್ರವೇ.. ಹಾಗಾದರೆ ನಮ್ಮಲ್ಲಿ ಎಷ್ಟೊಂದು ಬಿಪಾಶರಿದ್ದರೆ ಬೀದಿಬೀದಿಯ ತುಂಬೆಲ್ಲ..
ಚೆನ್ನಾಗಿದೆ.

ಅನಂತರಾಜ್ ಹೇಳಿದರು...

ಚೆ೦ದ ಬರಿದೀರ್ರಿ..ಎಲ್ರ ಬದುಕಿನ ಹಾದೀನೂ ಹಿ೦ಗಾ ಅಲ್ಲೇನ್ರಿ..ಎಲ್ಲಾ ಬರೋಬ್ಬರಿ ಆತು..ಆದ್ರ...ಕವನದ ಕಡೀಗೆ ಬಿಪಾಶಾ ಗಿಪಾಶ ಅ೦ದು ಹಾದಿ ತಪ್ಪಿಸ್ ಬಿಟ್ರಲಾ..
ಹಹಾ..
accent ಛಲೋ ಅದನ..ಹೀ೦ಗಾ ಮು೦ದುವರಸ್ರೆಲಾ ಮತ್ತ..!

ಶುಭಾಶಯಗಳು
ಅನ೦ತ್

ಸಾಗರದಾಚೆಯ ಇಂಚರ ಹೇಳಿದರು...

ಏನ್ರಿ
ಮನಿ ಹುಡುಕಿ ಸುಸ್ತಾದರ
ಕುಡಿಯೋಕೆ ಏನಾದ್ರು ಬೇಕಾ :)
ಚೆನ್ನಾಗಿದೆ ಮನಿ ಪುರಾಣ

M@he$h ಹೇಳಿದರು...

*********************************
http://bhuminavilu.blogspot.com/
*********************************

M@he$h ಹೇಳಿದರು...

manasa avre ,,nim kannada tumba interesting aagide.. odoke chennagide,,,

Dr.D.T.K.Murthy. ಹೇಳಿದರು...

ಮನೆ ಹುಡುಕುವ ತ್ರಾಸು ಪ್ರಾಸಬದ್ಧವಾಗಿ ಕವನವಾಗಿ ಬಂದಿದೆ.ಮಾನಸ,ಅನುಭವಗಳನ್ನು ಕವನವಾಗಿಸುವ ಪ್ರಯತ್ನ ಮುಂದುವರೆಸಿ.

Manasa ಹೇಳಿದರು...

ಎಲ್ಲರ ಕಾಮೆಂಟಗೆ ತುಂಬಾ ಧನ್ಯವಾದಗಳು,
@ ಸವಿಗನಸು (ಮಹೇಶರೆ), ಅಯ್ಯೋ ಏನ್ ಬ್ಯಾಸರಾಮಾಡಕೋ ಬ್ಯಾಡರಿ, ದೇಶಾ ಬಿಟ್ಟು ಬಂದ್ ಮೇಲೆ ಅದು ಅಲೆಮಾರಿ ಜೀವನಾನೆ!!
@ ಸೀತಾರಾಂ ಸರ್, ಧನ್ಯವಾದಗಳು ಹಾರೈಕೆಗೆ... ಹು ನಿಜಾ ಅಂಗೈ ಅಗಲ ಜಾಗಾನು ಸಾಕೊಗೋಲ್ಲ...
@ ಗುರು (ಮನಸಿನಮನೆ), ಹೇ ಹೇ ಹೇ ನಿಮ್ಮ ಕಾಮೆಂಟ್ ಒಪ್ಪಬೇಕಾದ್ದೆ!!
@ ಅನಂತರಾಜ್ ಸರ್, ಎಲ್ಲರು ಬದುಕಿನ ಹಾದಿನು ಹಂಗ ಬಿಡರಿ... ಉತ್ತರ ಕನ್ನಡ ಭಾಷೆ ಮೆಚಿದಕ್ಕೆ ಅನಂತ ಧನ್ಯವಾದಗಳು :)
@ ಸಾಗರದಾಚೆಯ ಇಂಚರ( ಗುರುಅವರೆ), ಹು ರೀ, ಸ್ವಲ್ಪ ಬಿಸಿ ಬಿಸಿ ಕಾಫಿ ಕೊಟ್ಟರೆ ಒಳ್ಳೇದು :)
@ ಮಹೇಶ್, ತುಂಬಾ ಥ್ಯಾಂಕ್ಸ್ ಉತ್ತರ ಕನ್ನಡ ಭಾಷೆ ಮೆಚಿದಕ್ಕೆ :)
@ Dr.D.T.K Murthy ಸರ್, ತುಂಬಾ ಥ್ಯಾಂಕ್ಸ್ ನಿಮ್ಮ ಪ್ರೋತ್ಸಾಹಕ್ಕೆ :)

ಜಲನಯನ ಹೇಳಿದರು...

ಮಾನಸ, ಮನೆ ಹುಡುಕೋದೂ ಒಂದು ಪಿಎಚ್.ಡಿ. ರಿವ್ಯೂ ಅಫ್ ಲಿಟರೇಚರ್ ಇದ್ದಂಗೆ...ಅದು ನೋಡಿಲ್ಲ ..ಇದು ಹಾಗಿರ್ನೇಕಿತ್ತು..ಇದು ನನಗೆ ಸೆಟ್ ಆಗೊಲ್ಲ...ಹೀಗೆ....ಅಂತೂ ಪಿ.ಎಚ್.ಡಿ.ಗೆ ಮುಂಚೆ ಈ ದಿಕ್ಕಿನಲ್ಲಿ ರೀಸರ್ಚ್ ಮಾಡಿದ್ದು ಮತ್ತೊಂದು ರೀತಿಯ ಅನುಭವ......ಚನ್ನಾಗಿದೆ ..ನಿಮ್ಮ ಹುಡುಕಾಟದ ಕವನ.

Deepasmitha ಹೇಳಿದರು...

ತುಂಡು ಬಟ್ಟೆ ಈಗಿನ ಅನೇಕ ನಟೀಮಣಿಯರಿಗೆ ಸಾಕು. ದಪ್ಪ ಆಗುತ್ತೇನೆ ಎಂದು ಹೆದರಿ ಅರೆ ಹೊಟ್ಟೆ ಉಣ್ಣುವವರಿಗೆ ತುತ್ತು ಅನ್ನ ಸಾಕು. ಹ ಹ!!!

Manasa ಹೇಳಿದರು...

@ ಆಜದರೆ, ನಿಜಾ... ಪಿ ಹೆಚ್ ಡಿ ಮಾಡದಂಗೆ, ಸರಿಯಾದ ಟಾಪಿಕ್ ಸಿಗೋವರೆಗೂ ಹುಡುಕಾಟವೇ... ಸರಿಯಾದ ಮನೆ ಸಿಗೋವರೆಗೂ ಹುಡುಕಾಟವೇ :)

@ ದೀಪಸ್ಮಿಥ, ಸರಿಯಾಗಿ ಹೇಳಿದ್ದಿರಿ, ಅರೆ ಹೊಟ್ಟೆ ಉಂಡು ಹೊಟ್ಟೆಮೇಲೆ ಹೊಡೆಯುವವರಿಗೆ :)
ಅಯ್ಯೋ ಈ ಪಾಪಿ ನನ್ನ ಹೊಟ್ಟೆ ಮೇಲೆ ಹೊಡಿತಾಳೆ ಅಂತ ಹೊಟ್ಟೆ ಹಿಡಿ ಶಾಪ ಹಾಕತಿರುತ್ತೆ ;)

Vinay Hegde ಹೇಳಿದರು...

chaloo bandaitreee kavana... bhaarii meaning aitriii nim kavanadaage.... nange bhaari ista aatriii... :)

ಮನಮುಕ್ತಾ ಹೇಳಿದರು...

ಭಾಳ್ ಚೊಲೊ ಕವ್ನಾ ಬರ್ದೀರಿ ಬಿಡ್ರೀ...ನಿಮಗಾ..ಭಾಳ್ ಚೊಲೊ ಮನಿ.. ಬ್ಯಾಗ್ನೆ ಸಿಕ್ಲಿ ಅ೦ತೀನ್ರಿ.

Manasa ಹೇಳಿದರು...

@ ವಿನಯ್ ಹೆಗಡೆ, ತುಂಬಾ ಧನ್ಯವಾದಗಳು...
@ ಮನಮುಕ್ತಾ,
ಥ್ಯಾಂಕ್ಸ್ ಕಣ್ರೀ, ನಿಮ್ಮ ಹಾರೈಕೆಯಂತೆ ಮನೆ ಸಿಕ್ಕತು :)