ಬುಧವಾರ, ಜೂನ್ 9, 2010

ಕನಸು ಮನಸು ಮಾತು

ಕನಸ್ನ್ಯಾಗಿನ ಹುಡುಗ 
ಮನಸ್ನ್ಯಾಗಿನ ಮಾತು
ಬಿಚ್ಚಿಹೇಳು ಅಂದ್ರ
ಕಚ್ಚಿ ಹೇಳತಾನ

ಗರತಿ ಗಂಗವ್ವ ಅಲ್ಲ
ಮನಿ ಮಡದಿ  ಅಲ್ಲ
ದಾರಿ ಹೋಕ ಹುಡಗೆಲ್ಲ

ಗಾಳ ಹಾಕಲಿಲ್ಲ
ಗಿಳಿ ಶಾಸ್ತ್ರಾ ಕೇಳಲಿಲ್ಲ
ಕಾಳ ಹಾಕಿದರು ಕೋಳಿ ಆಗಂಗಿಲ್ಲ

ಬೇಲಿ ಹಾಕಾಕ್ ಬರಂಗಿಲ್ಲ
ಕೈಯಾಗ ಹಿಡ್ಯಾಕ ಸಿಗಂಗಿಲ್ಲ
ಕಟ್ಟಿ ಹಾಕಾಕ ಹುಲಿ ಅಲ್ಲ


ಕನಸ್ನ್ಯಾಗಿನ ಹುಡುಗಾ
ಮನಸ್ಯಾಗಿನ ಮಾತು
ಬಿಚ್ಚಿ ಹೇಳಲೇ ಇಲ್ಲ

ಮುಚಿಟ್ಟ ಮಾತು
ಬಚಿಟ್ಟ ಪ್ರೀತಿ

13 ಕಾಮೆಂಟ್‌ಗಳು:

ಸ್ವಗತ.... ಹೇಳಿದರು...

ಇದೊಂಥರ ನಮ್ ಕಡೆ ಒಗಟು ಇದ್ದ ಹಂಗ ಐತಿ ನೋಡ್ರಿ....ಉತ್ತರ ಮಾತ್ರ ನಂಗ ಗೊತ್ತಾಗೊವಲ್ದು....
ಸಣ್ಣವಿದ್ದಾಗ ನಾ ಅಲ್ಲೇ ಅಕ್ಕ ಪಕ್ಕ ಮನಿ ಬಾಜುಕ ಇಂಥ ಒಗಟ ಕೇಳ್ತಿದ್ದ್ಯಾ ...ಮರತೂ ಬಿಟ್ಟಿದ್ದ್ಯಾ....ನೀವು ಮತ್ತ ನೆನಪ ಮಾಡಿ ಕೊಟ್ರಿ...ಚೊಲೋ ಮಾಡಿದ್ರಿ ನೋಡ್ರಿ....

ಸೀತಾರಾಮ. ಕೆ. / SITARAM.K ಹೇಳಿದರು...

???
nanna taligenu ilililla

ಸವಿಗನಸು ಹೇಳಿದರು...

ಮುಚಿಟ್ಟ ಮಾತು
ಬಚಿಟ್ಟ ಪ್ರೀತಿ...ಹೇಳೋಕೆ ಆಗೂಲ್ಲ...
ಚೆನ್ನಾಗಿದೆ..

ಸಾಗರದಾಚೆಯ ಇಂಚರ ಹೇಳಿದರು...

ಮಾನಸ,
ಚೆನ್ನಗೈತ್ರಿ
ನಿಮ್ಮ ಕವನದ ಭಾಸ್ಷೆ ಭಾಳ ಸೊಗಸಾಗೈತ್ರಿ
ಕನಸ್ನ್ಯಾಗಿನ ಹುಡುಗಂದೆ ನೆನಪು :)

Manasa ಹೇಳಿದರು...

@ ಸ್ವಗತ್,
ನಾನು ಒಡಪು, ಒಡಗತಿ ಓದಿ ಓದಿ.. ಕೇಳಿ.. ಕೇಳಿ... ಬರದದ್ದು...
ಆದರ ಇದು ಒಗಟು ಅಲ್ಲರೀ... ಥ್ಯಾಂಕ್ಸ್ ಕಾಮೆಂಟ್ ಮಾಡಿದಕ್ಕೆ :)

@ ಸೀತಾರಾಂ ಸರ್,
ನೀವು ಕಾಮೆಂಟ್ ಮಾಡಿರೋದು ಏನು ಅಂತ ತಿಳಿವಲತಿರಿಪಾ

@ ಸವಿಗನಸು (ಮಹೇಶ್ ಅವರೇ),
ಹೌದು ಕಣ್ರೀ ಹೇಳೋಕಗೊಲ್ಲ :)
ಥ್ಯಾಂಕ್ಸ್ ಕಾಮೆಂಟ್ಗೆ

@ ಸಾಗರದಾಚೆಯ ಇಂಚರ (ಗುರುಅವರೆ),
ಭಾಷೆಯ ಸೊಗಡು ಮೆಚಿದಕ್ಕೆ ತುಂಬಾ ಧನ್ಯವಾದ...
ಕನಸ್ಯಗಿನ ಹುಡಗನ್ ನೆನಪಲ್ಲರೀ...
ಸುಮ್ನೆ ಹೀಗೊಂದು ಪ್ರಯತ್ನ :)

© ಹರೀಶ್ ಹೇಳಿದರು...

ಒಂದ್ ತರಾ ಚನ್ನಾಗಿದೆ.
ಆದರೆ ನೀವು ಈ ಕವನದಲ್ಲಿ ವರ್ಕ್ ಮಾಡಿದ್ರೆ ಸ್ವಲ್ಪ ಚನ್ನಾಗಿರುತ್ತೆ.

ಕನಸ್ನ್ಯಾಗಿನ ಹುಡುಗಾ
ಮನಸ್ಯಾಗಿನ ಮಾತು
ಬಿಚ್ಚಿ ಹೇಳಲೇ ಇಲ್ಲ
ಮುಚಿಟ್ಟ ಮಾತು
ಬಚಿಟ್ಟ ಪ್ರೀತಿ

ಮೇಲಿನ ಸಾಲುಗಳು ತುಂಬಾನೆ ಚನ್ನಾಗಿದೆ.ಮುಂದಿನ ಕವನದಲ್ಲಿ ಒಳ್ಳೆ ಒಳ್ಳೆ ಪದಗಳ ಜೋಡಣೆ ಬರಲಿ ಮಾನಸರವರೆ.

ಹೊನ್ನ ಹನಿ
http://www.honnahani.blogspot.com/

ಸೀತಾರಾಮ. ಕೆ. / SITARAM.K ಹೇಳಿದರು...

ನನ್ನ ತಲಿಗೇನೂ ಇಳೀಲಿಲ್ಲಾ! ಅ೦ದರ ಇದು ವಗಟಾ- ಒಡಪಾ-ನಿಮ್ಮ ಕವನಾನ? ಆದ್ರೂ ಒದ್ತಾ ಇದ್ರ ಮನಸ್ಸಿಗೆ ಖುಶಿ ಆಯ್ತ್ರೀ.

Manasa ಹೇಳಿದರು...

@ ಹರೀಶ್, ನಿಮ್ಮ ಸಲಹೆಗಳಿಗೆ ತುಂಬಾ ಥ್ಯಾಂಕ್ಸ್ :)

@ ಸೀತಾರಾಂ ಸರ್,
ಒಗಟು, ಒದಪು, ಯಾವದು ಅಲ್ಲ.. ನನ್ನ ಕವನ ಹೌದು :)
ಓಡಾಟ ನಿಮ್ಮ ಮನಸ್ಸಿಗೆ ಖುಷಿ ಆಗಿದ್ದು ಓದಿ ನನಗು ಸಂತೋಷ ಆಯ್ತು :)

!! ಜ್ಞಾನಾರ್ಪಣಾಮಸ್ತು !! ಹೇಳಿದರು...

Manasa ,

ನಂಗ ನಿಮ್ಮ ಬ್ಲಾಗ್ ನೋಡ್ದ ಅಂದ್ರ ಏನೋ ಹಿತ ಅನ್ಸುತ್ತೆ..
ನಿಮ್ಮ ಭಾಷಿ ಬಾಳಾ ಚಲೋ ಐತಿ ನೋಡ್ರಿ..

ಜಲನಯನ ಹೇಳಿದರು...

wow....sooper Manasa...nimma manada maatu....hahahah

Manasa ಹೇಳಿದರು...

@ Manasina mane, tumbaa thanks namma bhashe mechidakke.. nimma protsahakke :)

@Jalanayana (Azadare), India dallidaru blog odi comment maadidakke hrutpuravaka abhinandanegaLu :)

ಅನಂತರಾಜ್ ಹೇಳಿದರು...

ಖರೇ ಅ೦ದ್ರೂ..ಛಲೋ...ಬರಿದೀರಿ..
ಮುಚಿಟ್ಟ ಮಾತು
ಬಚಿಟ್ಟ ಪ್ರೀತಿ
ಎರಡೂ ನಿಲ್ವಲ್ದ್ರಿ..ಅವು ಬ೦ದೇ ಬರ್ತಾವು..ಹೊರಗ..

ಶುಭಾಶಯಗಳು
ಅನ೦ತ್

Manasa ಹೇಳಿದರು...

@ Anantaraj sir, tumbaa thanks comment ge :)