ಕನಸ್ನ್ಯಾಗಿನ ಹುಡುಗ
ಮನಸ್ನ್ಯಾಗಿನ ಮಾತು
ಬಿಚ್ಚಿಹೇಳು ಅಂದ್ರ
ಕಚ್ಚಿ ಹೇಳತಾನ
ಗರತಿ ಗಂಗವ್ವ ಅಲ್ಲ
ಮನಿ ಮಡದಿ ಅಲ್ಲ
ದಾರಿ ಹೋಕ ಹುಡಗೆಲ್ಲ
ಗಾಳ ಹಾಕಲಿಲ್ಲ
ಗಿಳಿ ಶಾಸ್ತ್ರಾ ಕೇಳಲಿಲ್ಲ
ಕಾಳ ಹಾಕಿದರು ಕೋಳಿ ಆಗಂಗಿಲ್ಲ
ಬೇಲಿ ಹಾಕಾಕ್ ಬರಂಗಿಲ್ಲ
ಕೈಯಾಗ ಹಿಡ್ಯಾಕ ಸಿಗಂಗಿಲ್ಲ
ಕಟ್ಟಿ ಹಾಕಾಕ ಹುಲಿ ಅಲ್ಲ
ಕನಸ್ನ್ಯಾಗಿನ ಹುಡುಗಾ
ಮನಸ್ಯಾಗಿನ ಮಾತು
ಬಿಚ್ಚಿ ಹೇಳಲೇ ಇಲ್ಲ
ಮುಚಿಟ್ಟ ಮಾತು
ಬಚಿಟ್ಟ ಪ್ರೀತಿ