ಬುಧವಾರ, ಫೆಬ್ರವರಿ 24, 2010

ಮದುವೆಯ ಈ ಬಂದ!!

ಲಗ್ನ ಮಾಡ್ಕೋ ಲಗೂನ... ಹಿಂಗ ಊದ್ದಕ್ಕ ಓದಕೊಂತ ಹೊದರ ವಯಸ್ಸ ಹೋಗಿ ಮುದ್ಕಿ ಆದಮ್ಯಲೇ ಯಾರ್ ಪರದಾಡಬೇಕು!!

ಇಲ್ಲ ಬೇ ಇನ್ನೆನ ಬಾಳ ದೀನ ಊಳದಿಲ್ಲ... ಇನ್ನೊಂದು ೬ ತಿಂಗಳಾ... ಅದಾದ್ ಮ್ಯಾಲೆ ಓದುದು ಮುಗಿತೆತಿ, ಅಮ್ಯಲೇ ವಿಚಾರ ಮಾಡುನಂತ...


ಇನ್ನ ೬ ತಿಂಗಳ ಆಂತೆತಲ್ಲ ಹುಡಗಿ ಇದು... ಇನ್ನೊಂದು ೬ ತಿಂಗಳಕ್ಕ ೬ ತಿಂಗಳ ಮತ್ತ ವಯಸ್ಸ ಯೆರತೆತೆ...
ಈಗಿಂದ ಗಂಡ ನೋಡಾಕ ಶುರು ಮಾಡಿದ್ರ ಆತು, ೨ ತಿಂಗಳದಾಗ್ ಬಂದ್ ಇಳೆ (Engagement ) ಮಾಡ್ಕೊಂಡು ಹೋಗು ಆಮ್ಯಾಲೆ ಓದುದು ಮುಗದ ಕೂಡಲೇ, ಲಗ್ನ ನೆಮಸಿದ್ರಾತು.

ಓದು, ಮಣ್ಣು, ಮಸಿ ಅಂತೇಳಿ ಎಲ್ಲರಿಗೂ ಗುಳಗೀ ಹಾಕಿ ಈ ಸರೇ ಬಂದಾಗ್ ತಪ್ಪಿಸಕೊಂಡಿ... ಆದರ ನಿಮ್ಮ ಮನ್ಯಗೂ ಎಲ್ಲರೂ ಇದನ್ನ ಅನಕತ್ತರ್... ಅದಸ್ಟ ಲಗೂನ ಲಗ್ನ ಮಾಡಿದ್ರಾತು ಅಂತ...

ಅತ್ತಿ, ಯಾಕ್ ಅಸ್ಟ ಚಿಂತೀ ಮಾಡತಿರೀ... ಎಂದಲ್ಲ ಒಂದ್ ದಿನಾ ಆಗಲೇ ಬೇಕಲ್ಲ , ಅಕ್ಕೆನಿ ಬಿಡ್ರೀ...

ಅಯ್ಯ ನಮ್ಮವ್ವ, ಹಂಗತ ಜೀವನ ಪೂರ್ತಿ, ಒಂದಲ್ಲ ಒಂದು ದೀನ ಆಕೀತಿ ಅಂತ ಕುಂತರ, ಆಗು ಮಾತಲ್ಲ ತಂಗಿ...
ಈಗ ಒಂದು ಚುಲೋ ಮನತನ ಬಂದೆತಿ... ಹುಡಗಿ ಫೋಟೋ ಕಳಸರೀ ಅಂತ ಕೇಳ್ಯರ್.

ಹುಡಗೀ ಫೋಟೋ ಕೆಲ್ಯಾರೆನರೀ ಸರೀ ನಿಮ್ಮದ ಕಳಸರೀ :) ... ಹೇ ಹೇ ಹೇ
ನಾನೇನ ನಿಮಗತೆನ ಕಾನಸ್ತೆನಿ ಅಂತ ಎಲ್ಲರೂ ಅಂತಾರ್ ...
ಅಯ್ಯೋ ಕೊಡಿ!! ತಲಿ ಹರಟಿ !!!

ಚುಲೋದು ಒಂದು ಚೂಡಿದಾರ್ ಮ್ಯಾಲಿಂದು ಫೋಟೋ ಕಳಸು, ನಿಮ್ಮ ಮಾಮಾ ಮುಂದಿನ ವಾರದಾಗ್ ಆ ಊರ ಹಾದಿ ಮ್ಯಾಲೆ ಹೊಂಟಾರ... ಹೋಗ್ತಾ ಕೊಟ್ಟ ಹೊಕ್ಕರ...

ಹಾಂ, ಅಲ್ಲಿ ಹಕ್ಕೊಂದಿರತಿಯಲ್ಲ...ಹರದದ್ದ ಜೇಂಸ್, ಎಣ್ಣಿ ಹಚದಿರೂ ಕುದಲಾ.... ನಮ್ಮನೀ ಕೆಲಸದವರಂಗ, ಹಂತಾವೇಲ್ಲ ಕಳಸಬ್ಯಾದ ಮತ್ತ...

ಒಹ್! ನಿಮ್ಮನೀ ಕೆಲಸದವರೂ ಜೇಂಸ್ ಹಾಕತಾರೆನ್ರೀ ಅತ್ತಿ, ಅಡ್ಡಿ ಇಲ್ಲರೀ ಬಾಳ ಸುದಾರಸ್ಯಾರು ಕೆಲಸವದವರು ಈಗ....
ಹುಡಗ ಏನಾಮಾದತಾನ್ರೀ ಅತ್ತಿ, ಈಗ ಯೆಲ್ಲಿರುದೋ, ನೋಡಾಕ ಹೆಂಗ???

ಸ್ವಲ್ಪ ಕುತೂಹಲ ತೋರಸ್ದೆ, ಮತ್ತ ಅವರಿಗೂ ಅನ್ಸಬಾರದು ನೋಡ್ರೀ, ನಾವೆಲ್ಲ ಇಷ್ಟ ಕಷ್ಟ ಪಟ್ಟು ಹುಡಗನ್ನ ನೋಡ್ಲಿಕತ್ತೆವಿ... ಈ ಹುಡಗಿ ನೋಡಿದ್ರಾ ಏನು ಹೇಳಂಗಿಲ್ಲ.... ಅಂದ ಗಿಂದಾರು ಅಂತ ಹಗರಕ ಕೇಳಿದೆ...

ಹುಡಗಾ ಈಗ ಇಲ್ಲೇ ಚಿಕ್ಕೋಡಿಗೆ ಬಂದಾನ್, ಅಮೆರಿಕಾದಾಗ್ ಕೆಲಸ ಮಾದತಾನ್, ಹುಡಗೀ ನೋಡಕೊಂಡು, ಮದವಿ ಮಾಡಕೊಂಡು, ಹೋದರಾತು ಅಂತ ಸುಟೀ ತುಗೊಂಡು ಬಂದಾನ ತಂಗಿ.... ಇಂಜಿನಿಯರ್ ಅಂತ ವಾ, ನಾವೇನು ಮತ್ತ ಹಂತ ಹಿಂತಾ ಹುಡಗನ್ನ ನೋಡಿಲ್ಲ, ನಿನ್ನ ಓದಿದ್ದ ತಕ್ಕಂಗ ನೋಡೆವೀ... ನಿಮ್ಮ ಮಾಮ ಸತೆಕ್, ನಿನ್ನ ಓದೀನ ಬಗ್ಗೆ ಬಾಳ ಹೇಳತಾರ್...

ಹೌದ್ರೀ ಅತ್ತೀ, ಮತ್ತ ಹುಡಗಾ ಹೆಂಗ ಅದನಂತ ಹೇಳಲಿಲ್ಲರೀ (ಸಣ್ಣ ದನೀ ಮಾಡಿ ಕೇಳಿದೆ)...
ಅದ ಹೇಳಿದ್ನಲ್ಲ ತಾಯಿ, ಬೇಶಅದಾನಂತ, ಯೆತ್ತರಾ ಗಿತ್ತರಾ ಎಲ್ಲಾ ಚುಲೋ ಅಯತಿ ಅಂತ...

 ಅಂತ... ಅಲ್ಲರೀ ಅತ್ತಿ... ನಿವ ನೋಡೀರೇನು???
ಇಲ್ಲವ್ವ, ನಿಮ್ಮ ಮಾಮ ನೋಡ್ಯರ, ಸ್ವಲ್ಪ ಬಣ್ಣ ಕಡಮೀ, ಅಡ್ಡಿ ಇಲ್ಲ ಅಂದ್ರೂ...
ಎತ್ತರ ಅಂತಂದ್ರು ಅದನ್ನ ಮದಲ ಹೇಳಿದ್ನಲ್ಲ,

ನೋಡ ತಂಗಿ, ಬಣ್ಣ ಗಿಣ್ಣ ಎಲ್ಲಾ ಏನ್ ಮಾಡುದು ತೊಳಕೊಂಡು ಕುಡ್ಯಕಾ???? ರೊಕ್ಕ ಚುಲೋ ಗಳಸ್ಯನಂತ, ಅಲ್ಲೇ ಅಮೆರಿಕಾದಾಗ್ ಸ್ವಂತ ಮನಿ, ಕಾರು, ಎಲ್ಲಾ ಅಯತಂತ... ಹಂಗಂತ ನಾವೇನು ನೀನ್ ಈದ ಹುಡಗನ್ನ ಮಾಡ್ಕೋ ಅಂತೇನಿಲ್ಲ...
ನೀನು ಒದದಕೀ ಅದೀ, ವಿಚಾರ ಮಾಡೀ, ನಿದಾನಕ್ಕ ಮಾತಾಡಿದ್ರತು....

ನಿನ್ನ ಹಳೆ ಫೋಟ ನೋಡೀ ಹುಡಗಾ ಒಪ್ಪ್ಯಾನ, ಸುಮ್ನ ಹೊಸ ಫೋಟೋ ಕಳಸು ಅಂದೇ... ಮತ್ತ ಇನ್ನೊಂದೆರಡು ಮನತನಾ ಅದಾವ... ನೀ ಬಂದಮ್ಯಲೇ ಮತ್ತ ಇನ್ನೊಂದಿಬ್ರು, ಬ್ಯಾರೆ ದೇಶದಿಂದ ಬರವರ ಅದಾರ್... ನೋಡೀ ಈ ಸರೀ ಲಗ್ನ ಹುದೀಡರಾತು.
ಲಗುನ್ ಟಿಕೆಟ್ ಮಾಡ ಮತ್ತ...

ಸರೀ ರೀ ಅತ್ತಿ ನಾನೀಗ ಮಕ್ಕೊಬೇಕರೀ.. ಇಲ್ಲೇ ಬೆಳಗೀನ ೧೨ ಗಂಟೆ ಆಗೆತರೀ...

ಹೌದೆನವ್ವ, ನಮಗಿನ್ನು ೭.೩೦ ಆಗೆತೀ ನೋಡು, ನಮಗ ಸಂಜೀ ಆಗೆತೀ... ನಿನಗ ಆಗಲೇ ಬೆಳಕಾಗೆತೀ...
ಮಕ್ಕೋ ರವ್ವ... ಮುಂಜೇನೆ ಮತ್ತ ಕಾಲೇಜ್ ಹೋಗು ಹುಡಗೀ... ನಾನ್ ಹೇಳಿದ್ದ ಲಕ್ಷದಾಗ್ ಇರಲೀ ಮತ್ತ...
ಆಯತರೀ ಅತ್ತಿ... ಮಾಮಾರಿಗೆ ನಾನ್ ಕೇಳಿದೆ ಅಂತ ಹೇಳ್ರೀ, ಹಂಗ ನನ್ನ ನಮಸ್ಕಾರ ನಿವ ಮಾಡ್ರೀ... ಹೇ ಹೇ ಹೇ ಹೇ

ಇಸ್ಟೆಲ್ಲಾ ಹೇಳಿ ಅವರ ತಲಿಯೊಳಗಿನ ಹುಳ, ನನ್ನ ತಲಿಗೆ transfer  ಮಾಡಿದರೀ... ನಿದ್ದಿನ ಬರಲಿಲ್ಲ ನೋಡ್ರೀ... ನಮ್ಮ ಅತ್ತಿ ಹಾಕಿದ್ದು ಒಂದೆರಡು ಹುಳ... multiply ಆಗಿ ರಾತ್ರಿ ಎಲ್ಲಾ ಗೊಂದಲದಾಗ್ ಬಿಳುಹಂಗ ಮಾಡತ್ರೀ...