ಬುಧವಾರ, ಜೂನ್ 9, 2010

ಕನಸು ಮನಸು ಮಾತು

ಕನಸ್ನ್ಯಾಗಿನ ಹುಡುಗ 
ಮನಸ್ನ್ಯಾಗಿನ ಮಾತು
ಬಿಚ್ಚಿಹೇಳು ಅಂದ್ರ
ಕಚ್ಚಿ ಹೇಳತಾನ

ಗರತಿ ಗಂಗವ್ವ ಅಲ್ಲ
ಮನಿ ಮಡದಿ  ಅಲ್ಲ
ದಾರಿ ಹೋಕ ಹುಡಗೆಲ್ಲ

ಗಾಳ ಹಾಕಲಿಲ್ಲ
ಗಿಳಿ ಶಾಸ್ತ್ರಾ ಕೇಳಲಿಲ್ಲ
ಕಾಳ ಹಾಕಿದರು ಕೋಳಿ ಆಗಂಗಿಲ್ಲ

ಬೇಲಿ ಹಾಕಾಕ್ ಬರಂಗಿಲ್ಲ
ಕೈಯಾಗ ಹಿಡ್ಯಾಕ ಸಿಗಂಗಿಲ್ಲ
ಕಟ್ಟಿ ಹಾಕಾಕ ಹುಲಿ ಅಲ್ಲ


ಕನಸ್ನ್ಯಾಗಿನ ಹುಡುಗಾ
ಮನಸ್ಯಾಗಿನ ಮಾತು
ಬಿಚ್ಚಿ ಹೇಳಲೇ ಇಲ್ಲ

ಮುಚಿಟ್ಟ ಮಾತು
ಬಚಿಟ್ಟ ಪ್ರೀತಿ