ಎಲ್ಲರಿಗು ಗೊತ್ತೈತೋ ಇಲ್ಲೋ ನಮ್ಮಕಡೆ ಗಿರಮಿಟ್... ಈ ಸತಿ ಇಂಡಿಯಾಕ ಹೋದಾಗ್ ನಮ್ಮೂರಿನ ಅಂದ್ರ ಹುಬ್ಬಳ್ಳಿ ದುರ್ಗದ ಬೈಲ್ನ್ಯಾಗ್... ಮಸ್ತ ಬಾಜಾರದಾಗ್ ಸಂತಿ ಮಾಡಿ... ಸಂತಿ ಮಾಡುದು ಹೆಸರಿಗೆ... ನಾನು ಅಲ್ಲಿಗೆ ಹೋಗುದು ಗಿರಮಿಟ್ ತಿನ್ನಕ ರೀ :) ....
ಒಹ್!! ಪಾಪ, ಗಿರಮಿಟ್ ಅಂದರ ಎಲ್ಲರಿಗು ಗೊತ್ತೈತೋ ಇಲ್ಲೋ .. ಏನು ಅಂತಿರಬೇಕು ಅಲ್ಲ...
ನಮ್ಮಕಡೆ ಬಹಳ ಫೇಮಸ್ ಚಾಟ್ ರೀ ಅದು... ಚುಮ್ಮರಿ... ಅಹಹ
OK ಬಾಳ ಕಾಡಸುದು ಬ್ಯಾಡ...
ಚುಮ್ಮರಿ (ಮಂಡಕ್ಕಿ, ಬ್ಹೇಲ) ... ಮಾಡುವ ರೀತಿ ... ಉಳ್ಳಗಡ್ಡಿ (ಇರುಳಿ), ಟೊಮೇಟೊ, ಹಸಿ ಮೆಣಸಿನಕಾಯಿ, ಕೊತಂಬರಿ... ಎಲ್ಲ ಸಣ್ಣಗೆ ಹೆಚ್ಹಿ... ಎಣ್ಣಿ ಕಾಸಿ... ಸಾಸವಿ, ಜೀರಗಿ... ಚಡಪಡಿಸಿ... ಚಟಪಟ ಸಿದಸಿ... ಹೆಚಿದ ಹಸಿಮೆನಸಿನ್ಕೈ... ಉಳ್ಳಗಡ್ಡಿ... ಟೊಮೇಟೊ ಹಾಕಿ ಚೆನಾಗಿ ಗಿರ ಅಂತ ತಿರಗಿಸಿ... ಸ್ವಲ್ಪ ವಗ್ಗರಣಿ ಆರಲಿಕ್ಕೆ ಬಿಟ್ಟು ... ಆಮೇಲೆ ಚುಮ್ಮರಿ ಹಾಕಿ ಮತ್ತ ತಿರಗಿಸಿ ಗಿರ್ರ ಅಂತ... ಪುಟಾಣಿ ಹಿಟ್ಟು... ಕೊತಂಬರಿ ಹಾಕಿ.. ಒಂದು ಹಂಗ ಹಸಿಮೆಣಸಿನಕಾಯಿ.. ಮತ್ತ ಒಂದಿಷ್ಟು ಉಳ್ಳಗಡ್ಡಿ ಮೇಲೆ ಹಾಕಿ.... ಗಿರಮಿಟ್ ತಿಂದ್ರ... ಸತ್ತ ನರ ಎಲ್ಲ ಎದ್ದು ಓಡಾಕ್ ಹತ್ತವ ... ತಲಿಯೋಳಾಗ ಕುಂತ ಪ್ರಶ್ನೆಕ್ಕ, ಪಟಾ ಪಟಾ ಅಂತ ಉತ್ತರ ಸಿಗತಾವರೀ... ಈದಂತು ನನ್ನ ಅನುಭವ... ಹಂಗೆ ೧೫ ದಿವಸದ ಪ್ರವಾಸದಾಗ್ ೫ ಸತೆ ಹೊರಗಿನ ಗಿರಮಿಟ್ ತಿಂದು ತಿಂದು... ನಮ್ಮ ಅವ್ವ... ಧುಳ ಇದ್ದಿದ್ದ ತಿಂದ್ರ ರುಚಿ ಅಂತ ಕಾಣತದ ಅದಕ್ಕ .. ದುರ್ಗದ್ಬೈಲ್ ಹೊಕ್ಕಿರೀ ಅಂತಿದ್ರು... ಮನೇಲೆ ಮಾಡಿದ್ರು ನನಗೇನೋ ಅಲ್ಲಿ ಹೋಗಿ ತಿಂದರೆ ಸಮಾಧಾನ... ಇವತ್ತು ಯಾಕೋ ಆ ದುರ್ಗದ್ಬೈಲ್ ನೆನೆಪಾಗಿ... ಗಿರಮಿಟ್ ಮಾಡಕೊಂಡು ತಿಂದು... ಬರಿಲಿಕ್ಕೆ ಒಂದು ಪ್ರೋತ್ಸಾಹ ಆತು... ನಮ್ಮ ಹುಬ್ಬಳ್ಳಿ ದುರ್ಗದ್ಬೈಲ್ ಗಿರಮಿಟ್ :) ...
ಹುಬ್ಬಳ್ಳಿಗೆ ಹೊದರ ಮರೀದ ಗಿರಮಿಟ್ ತಿನ್ನಬೇಕರೀಪ :)