ಮನ್ಯಾಗ ಮಾಡವರು ಬ್ಯಾರೆ ಯಾರು ಇಲ್ಲ, ಆಕಿನ ಹೊಡೆದ ತಪ್ಪಿಗೆ... ಅಡುಗೆ ಮಾಡುದು, ಭಾಂಡೆ ತೊಳಿದು, ಬಟ್ಟೆ ಒಗಿದು... ಮತ್ತ ಕಸಾ ಸಹಿತ ನಾನ ಗುಡಸಬೇಕಾತು. ಇಸ್ಟೆಲ್ಲಾ ಮಾಡಿದರು ನನ್ನ ಸಿಟ್ಟೇನು ಮುಗಿದಿರಲಿಲ್ಲ. ಮೂರನೆ ದಿವಸಕ್ಕ ಹಾಸಿಗಿ ಬಿಟ್ಟು ಎದ್ದಲು, ಎಂದಿನಂತೆ ತನ್ನ ಕೆಲಸಾ ಸುರು ಮಾಡಿದ್ಲು... ಇದೊಂದ ಕಾರಣಕ್ಕಾ ಇಬ್ಬರಲ್ಲೂ ಮಾತು ಕಡಿಮೆ ಆಗಿತ್ತು. ನಾ ಹೊಡದೇ ಅನ್ನೋ ಸಿಟ್ಟು ಆಕಿಗೆ, ಸುಳ್ಳು ಹೇಳಿ ಮದುವೇ ಮಾಡಿದರು, ಓದು ಬರದ ಹೆಡ್ಡಿ ನನ್ನ ಕೊರಳಿಗೆ ಹಾಕಿದರು ಅನ್ನೋ ಸಿಟ್ಟು ನನಗ.
ಅಡಗಿ ಮಾಡಿಟ್ಟು, ಹುಂ ಊಟ ಅಂತಾ ಅಕಿ ಅನ್ನಕಿ... ಆ ಮಾತು ಕೇಳದಾಗೆಲ್ಲ, ನಾ ಮತ್ತೆ ಹಿಂದಿನ ದಿನಗಳನ್ನ ನೆನೆಸಿಕೊಳತಿದ್ದೆ... ಏನ್ರಿ, ಏನ್ ಕೆಲ್ಸಾ ಮಾದತಿದ್ದಿರಿ, ಊಟದ ಟೈಮ್ ನ್ಯಾಗ, ಮೊದಲು ಊಟ ಮಾಡಬಾರದಾ, ಆರಿದರ ಅಡುಗಿ ರುಚಿಸಂಗಿಲ್ಲ. ಅಂತಾ ಗದುರೋದು ಆ ಪ್ರೀತಿ ದ್ವನಿಲಿ ಆಕಿ ಕರೆದಾಗ, ಇದ್ದ ಕೆಲ್ಸಾ ಬಿಟ್ಟು ಓಡಿ ಬಂದು ಊಟಕ್ಕೆ ಕುಡತಿದ್ದೆ.
ಮಾತಿರಲಿಲ್ಲ , ನಾ ಬಂದು ಕೂತು ಬರೋಬ್ಬರಿ ತಿಂದು ಮತ್ತು ಗುಂಡ ಕಲ್ಲಂತೆ ಇದ್ದೆ. ಆಕೆಗೆ ನನ್ನ ಮೇಲೆ ಸಿಟ್ಟು ಇದ್ದರು, ಅಡುಗೇಲಿ ಆಕಿ ವ್ಯತ್ಯಾಸ ಮಾಡಿರಲಿಲ್ಲ... ಅದೇ ರುಚಿ ರುಚಿ ಆದ ಅಡಗಿ, ಅದೇ ಪ್ರೀತಿ ಲೇ ಬಡಸಾಕಿ. ನನಗು ಒಂದು ಸಾರಿ ಹೊಡೆದದ್ದು ತಪ್ಪು ಅನ್ನಿಸಿದರು, ಎಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬರುತ್ತೋ ಅಂತಾ... ತಲೆ ಮ್ಯಾಲೆ ಎತ್ತದೆ... ಉಂಡು, ಆಕಿ ಉಂಡಳೋ ಇಲ್ಲವೋ ಏನು ಕೇಳದೆ. ಮತ್ತೆ ನನ್ನ ಕೆಲ್ಸಕ್ಕೆ ಹೊರಡಲು ಅಣಿಯಾದೆ,
ಹೊರಡ್ತಾ, ಬಾಗಿಲಿಗೆ ಹಾಕಿದ ರಂಗೋಲಿ, ತುಳಸಿ ಗಿಡಾ ನೋಡಿ, ಆಡಿದ ಮಾತುಗಳು ಅಕಿ ಮನಸನ್ನು ಯಾವ ರೀತಿ ಘಾಸಿ ಗೊಳಸೇತಿ ಅನ್ನುದು ಅದರಲ್ಲಿ ತೋರತಿತ್ತು.... ಸಹನೆ ಅನ್ನೋದು ಆಕೆಲಿ ಎದ್ದು ಕಾಣೋ ಗುಣ ಅನ್ನಬಹುದು ನೋಡ್ರಿ. ಯಾರೆನಂದರು ಆಕಿ ತನ್ನ ತಪಸ್ಸು ಕೇಡಸ್ಕೂತಿರಲಿಲ್ಲ ... ಹಿಂದಿನ ದಿನಗಳನ್ನ ಮತ್ತ ನೆನಸ್ಕೊಂಡೆ...
ಆಕೆ ಅಲ್ಲಿ ನಿಂತು ತುಳಸಿ ಗಿಡಕ್ಕ ನಮಸ್ಕರಿಸಿ, ಮಾಂಗಲ್ಯ ಕಣ್ಣಿಗೆ ಒತ್ತಿಕೊಂಡು, ತುಳಸಿಗೆ ಏರಿಸಿದ ಹುವನ್ನ ತಲೆಗೆ ಮುಡಿತಾ, ಈ ಸೌಭಾಗ್ಯ ಆ ದೇವರು ನನ್ನ ಕಡೆ (ಕೊನೆ) ಉಸಿರಿರೋವರೆಗೂ ವದಗಿಸಲಿ ಅಂತಾ ಬೇಡಿ ಕೊಳ್ಳೋಳು. ಹಾಗೆ ಬರ್ತಾ ಎರಡು ತುಳಸಿ ದಳ ತಂದು ನನ್ನ ಬಾಯಿಗೆ ಹಾಕೊಳು.
ವಾಪಸ್ ಹೋಗಿ, ನೋವು ಹೆಂಗಯ್ತಿ, ಸಿಟ್ಟಿ ನ್ಯಾಗ ಹೊಡದೇ... ಯಾಕ ನನಗ ನೀನು ನಿಮ್ಮ ಅಪ್ಪ ಮೋಸ ಮಾಡಿದ್ರಿ ಅಂತಾ ಕೇಳಬೇಕು ಅಂತಾ ಮನಸ್ಸಿಗೆ ಬಾಳ ಅನ್ಸಾಕತ್ತತು... ಮತ್ತದೇ, ಸ್ವಾಭಿಮಾನ... ಇಕಿ ಆದರು ನನಗ ಹೇಳಬಾರದಿತ್ತ, ಇಷ್ಟುದಿನಾ ನನಗ ಸುಳ್ಳು ಹೆಲಿದ್ದಲ್ಲದ, ಈಗ ನಾ ಆಕಿ ಮಾಡಿರೋ ತಪ್ಪಿಗೆ ಶಿಕ್ಷೆ ಕೊಟ್ಟರ ನನ್ನ ಕೂಡ ಮಾತ ಬಿಟ್ಟಳ, ಇದ್ಯಾವ ನ್ಯಾಯ... ಇದನ್ನ ಗೊಣಗತಾ ಕೆಲಸಕ್ಕ ಹೋದಾ...
ಪಾಪ ಇಕೆ ಇಲ್ಲಿ ಮನೆಲಿ ಅವನನ್ನೇ ನೆನಸ್ಕೊಂತಾ... ನಾ ಅಡುಗಿ ಮಾಡುವಾಗ ಕಾಳಜಿಯಿಂದಾ ಬಂದು ನನ್ನ ವಿಚಾರಸೋರು, ಅದೊಂದು ಸುಳ್ಳಿಗೆ ಇಬ್ಬರು ಇಷ್ಟು ಮನಸ್ಸು ನೋಯಸ್ಕೊಳೋದು... ನನಗಂತೂ, ಇವರದ್ದು ಅತಿ ಆಯ್ತು ಅನ್ಸತೆತಿ.. ಏನ್ ಗಂಡಸರೋ ಏನೋ... ನಾ ಇವರಿಗೆ ಇಷ್ಟು ದಿನಾ ತೋರಸಿದ ಪ್ರೀತಿ ಮುಂದ ಇದೊಂದು ಸುಳ್ಳು ಎದ್ದು ಕಾಣಾಕ ಹತ್ತೆತಿ ಇವರಿಗೆ...ಆದರು ನಾ ಇವರಿಗೆ ಸುಳ್ಳು ಹೇಳಬಾರದಿತ್ತು, ಟೈಮ್ ಇದ್ದಾಗ ಹೇಳಿ ಬಿಡಬೇಕಿತ್ತು. ಅವರಿಗೂ ಆಸೆ, ವಿದ್ಯಾವಂತರು ಇವರು, ಅವರಿಗೆ ತಕ್ಕಂತೆ ಹುಡಗಿ ಹುಡಕೊಂದು ಮದುವಿ ಮಾಡಕೊತಿದ್ದರು... ನಮ್ಮ ಅಪ್ಪ ಅವ್ವಗ ಮತ್ತ ಅತ್ತಿ ಮಾವನವರಿಗೆ ಕರಸಿ ಏನಾರು ದಾರಿ ಮಾಡಬೇಕು ಇಲ್ಲ ಎಷ್ಟು ದಿನಾ ಅಂತಾ ಇಬ್ಬರು ಹಿಂಗ ಒಬ್ಬರಿಗೆ ಒಬ್ಬರು ಮಾತಾಡದಂಗ ಜೀವನ ಮಾಡುದು... ಇವರು ಈ ರೀತಿ ಆಡುದು ನೋಡಿದರ ಎಲ್ಲಿ ನನ್ನ ಬಿಟ್ಟು ಬಿಡ್ತಾರೋ... ಅಯ್ಯೋ, ಸಿಟ್ಟನ್ಯಾಗ ಹೋಡದಾರ ಅಸ್ಟ, ನನ್ನೇನು ಬಿಡಂಗಿಲ್ಲ, ಸುಮ್ಮನ ಇರಾಕಾಗದ ನಾನು... ಹುಮ್ಮ್, ಮಧ್ಯಾನ ಊಟಕ್ಕ ಬರ್ತಾರೋ ಇಲ್ಲೋ, ಇತ್ತಿತ್ತಲಾಗ, ಫೋನ್ ಮಾಡುದು ಬಿಟ್ಟಾರ...
ಪೋಸ್ಟ್ ಆಫೀಸಿಗೆ ಹೋಗಿ ಊರಿಗೆ ಒಂದು ತಾರು (ಪತ್ರಾ) ಮಾಡಿದರಾತು, ವಿಷಯ ತಿಳಕೊಂಡು ಅವರು ಬಂದರ ಸಮಸ್ಯೆ ಬಗಿಹರಿಸ ಬಹುದು. ಪೋಸ್ಟ್ಮನ ಅಣ್ಣ, ನಮ್ಮೂರಿಗೆ ಮತ್ತ ನನ್ನ ಗಂಡನ ಮನಿಗೆ ತಾರ ಕಳಸಬೇಕಿತ್ತರಿ, ಒಂಚೂರು ಯಾರಾರು ಕಾಲಿ ಇದ್ದರ ಬಂದು ಬರದು ಕೊಡತಿರೆನು. ಕಾಲಿ ಇದ್ದರು ತಲಿ ಕೆಳಾಗ ಹಾಕೊಂಡು ಊರವರ ಕೆಲ್ಸಾ ಎಲ್ಲ ಇವರ ಮಾದಕತ್ತರೆನು ಅನ್ನೋಹಂಗ ಕೂತಿದ್ದರು ಪೋಸ್ತಮನ ಅಣ್ಣಂದಿರು, ಇಕಿ ಕರೆದದ್ದು, ಕೇಳಿದ್ದು ಯಾವದು ಇವರ ಕಿವಿಗೆ ಬಿದ್ದೆ ಇಲ್ಲ ಅನ್ನುಹಂಗ ಇದ್ದರು...
ಇರು ತಾಯಿ ನಾ ಕಾಲಿ ಇದ್ದೀನಿ ಅಂತಾ ಅಲ್ಲಿದ್ದ ಹಿರೆ (ಸೀನಿಯರ್ ) ಪೋಸ್ಟ್ಮನ ಬಂದು, ಹೇಳವ್ವ, ಆರಮಿದ್ದಿಯ, ಗಿಡಮೂಲಿಕೆ ತರಸ್ಕೊಬೇಕಿತ್ತೆನು ತವರಿಂದಾ... ಇಲ್ಲ ಅಜ್ಜ, ಅಜ್ಜಿ ಆಗತಿದ್ದಿರಿ ಅಂತಾ ಏನಾರು ಹೊಸಾ ಸುದ್ದಿ ಮಾಡಿರಿ... ಏನ್ ಬರಿಲಿ, ಮನಸ್ಸು ಇದನೆಲ್ಲ ಕೇಳಿ ಆಕೆಗೆ, ಹೌದು ಸಿಹಿ ಸುದ್ದಿ ಕಾಕೊಂಡು ಕುತಿರೋ ನಮ್ಮ ನನ್ನ ಮನ್ಯಾಗ ನಾ ಹಿಂಗ ಆಗೆತಿ ಅಂತಂದರ ಎಲ್ಲರಿಗು ಎಷ್ಟು ನೋವಾಕೆತೋ ಏನೋ...ಯಾಕವ್ವ, ಸೊರಗಿದೆ, ಎಲ್ಲ ಸರಿ ಹೊಂತೆತಿಲ್ಲೋ ಅಂತಾ ಪೋಸ್ಟಮನ ಅಣ್ಣ ಕೆಳುದಕ್ಕ... ಅಸ್ಟರಾಗ (ಅಸ್ಟರಲ್ಲಿ) ಅಕಿ ಗಂಟಲು ಬಿಗದು, ಮಾತು ಕುತಗಿಲೆ ಸಿಕ್ಕೊಂಡು ಎರಡು ಕಣ್ಣಿನಿಂದಾ ಕಣ್ಣಿರು, ಕಪಾಳಕ್ಕೆ (ಕೆನ್ನೆಗೆ) ಹರಿದಿದ್ದವು ....
ಮುಂದುವರಿಯುವದು....
ಮಂಗಳವಾರ, ಡಿಸೆಂಬರ್ 21, 2010
ಸಣ್ಣ ಕಥೆಗಳು ಭಾಗ ೧
ನಾ ಕನ್ಯಾ ನೋಡಾಕ ಹೋದಾಗ ಹುಡಗಿಗೆ ಎಲ್ಲ ಬರತೆತಿ ಅಂತ ಹೇಳಿದರು ನೋಡ್ರಿ, ಹತ್ತನೇ ಕ್ಲಾಸ್ ಓದ್ಯಾಳ, ಅಸ್ಟಿಸ್ಟು ಇಂಗ್ಲಿಷ್ನು ಬರತೆತಿ ಅಂತಂದರು, ನಾನು BA ಮುಗಸೆನಿ ಇಬ್ಬರಿಗೂ ಒಳ್ಳೆ ಜೋಡಿ ಆತು ಅಂತ, ಹು ಅಂದೇ. ಹಂಗ ಲಗ್ನಾ ನು ಮಾಡಕೊಂಡೆ. ದಿನಾ ಇಬ್ಬರು ಕೂತು ಟಿವಿ ನೋಡತಿದ್ದವಿ, ಮನೆತನದ ಬಗ್ಗೆ ಮಾತು, ನಮ್ಮ ಮನೆಯವರನೆಲ್ಲ ಆಕಿಗೆ ನನ್ನ ಮಾತಿಂದಾ, ಆಕಿ ತನ್ನ ಮಾತಿನ್ದಾನೆ ಪರಿಚಯ ಮಾಡಿಸಿದ್ಲು. ಹಿಂಗ ಒಬ್ಬರಿಗೊಬ್ಬರು ಮನೆಕೆಲಸದಲ್ಲೂ ಆಸರೆ ಆಗಿದ್ದವಿ. ಗಿಡಮೂಲಿಕೆ ಔಷದಿ ಮಾಡೋದರಲ್ಲಿ ಆಕಿದು ಎತ್ತಿದ ಕೈ ಬಿಡ್ರಿ, ಹಿಂತಾ ಸೊಪ್ಪು ಇದಕ್ಕೆ ಉಪಯೋಗ ಅಂತಾ ನೋಡಿದಕುಡಲೇ ಹೇಳಾಕಿ. ನನಗ ಆಕಿ ಅಸ್ಟು ತಿಳಕೊಂಡಿದ್ದು ನೋಡಿದರ ಸೋಜಿಗ ಆಗುದು. ಊರಿನವರಿಗೆಲ್ಲ ಔಷದಿ ಮಾಡಾಕಿ ಗಿಡಮೂಲಿಕೆ ಇಂದಾನೆ.
ನಾ ಅಂತು ಬಹಳ ಸಂತೋಷದಲ್ಲಿದ್ದೆ ನೋಡ್ರಿ, ಎಲ್ಲ ಭಾಗ್ಯ ನನಗೆ ಸಿಕ್ಕತು ಅಂತಾ...ಹಂಗ ಅಡಗಿ ಮಾಡುದರಾಗು ಎತ್ತಿದ ಕೈ ಆಕಿದು, ನಾನಾ (ಬಗೆ ಬಗೆಯ) ತರದ ಅಡಗಿ ಮಾಡಾಕಿ, ಉಂಡು ನಾ ಅಂತು ಗುಂಡ ಕಲ್ಲು ಆಗಿದ್ದೆ. ಉಂಡ ಕೈ ಮುಸಿ ನೋಡಿ ಕೊಂಡರ, ಮತ್ತ ಹೊಟ್ಟಿ ಹಸಿದು.
ಹಿಂಗ ಒಂದು ದಿನಾ ವಿಚಾರ ಮಾಡ್ತಿದ್ದೆ, ಎಲ್ಲ ಸೈ, ಇಕಿ ತನ್ನ ಸಾಲಿ ಬಗ್ಗೆ ಎಂದು ಮಾತ ಆಡಂಗಿಲ್ಲ, ಎಲ್ಲರು ಹೇಳಕೊತಾರ, ನನ್ನ ಗೆಳತಿಯರು ಹಂಗ, ಮಾಸ್ತರು ಇವರಿದ್ದರು, ಆ ಕುಣಿತಾ, ಈ ಆಟಾ ನಾ ಭಾಗ ವಹಿಸಿದ್ದು, ಪ್ರಶಸ್ತಿ ಸಿಕ್ಕಿದ್ದು... ಇಕಿ ಅದರ ಬಗ್ಗೆ ಏನು ಹೇಳಂಗೆ ಇಲ್ಲ. ಮತ್ತ ನಾ ದಿನಾ ಪೇಪರ್ ಓದಬೇಕಾರ, ನನ್ನಿಂದಾನೆ ಅಲ್ಲಿ ಏನಾತು, ಇಲ್ಲಿ ಏನಾತು ಅಂತಾ ತಿಳಕೊತಾಳ, ತಾ ಎಂದು ಪೇಪರ್ ಹಿಡಕೊಂಡು ಅಥವಾ ನಾ ಪೇಪರ್ ಓದಬೇಕಾರ ಆಕಿ ಎಂದು ಬಂದು ಹಣಿಕಿ ಹಾಕ್ತಿರಲಿಲ್ಲ. ಹಾಗೆ ಇರೋದು ಹೆಣ್ಣ ಮಕ್ಕಳ ಸ್ವಭಾವನ ಅಲ್ಲಾ ಬಿಡ್ರಿ ಮತ್ತ... ಹಿಂಗ ಒಂದಿನಾ ನಾ ಬಾ ಇಲ್ಲೇ, ಏನೋ ಮನಿ ಮದ್ದು ಅಂತಾ ಔಷದಿ ಬಗ್ಗೆ ಕೊಟ್ಟಾರ ಪೇಪರ್ನ್ಯಾಗ (ಪೇಪರ್ ನಲ್ಲಿ) ಒಂದು ಬುಕ್ ತುಗೊಂಡು ಬಂದು ಎಲ್ಲಾನು ಪಟ್ಟಿ ಮಾಡ್ಕೋ, ನಮಗ ಉಪಯೋಗಾ ಆಕೆತಿ ಅಂತಂದ್ಯ ( ಅಂತಾ ಹೇಳದೆ). ಹುಂ, ಬಂದೆ ತಡಿರಿ ಅಂತಾ ಅಡಗಿ ಮನಿಗೆ ಹೋದ್ಲು, ನಾನು ಬರತಾಳೇನು ಅಂತಾ ಕಾಯಕೊಂತ ಮತ್ತ ಮತ್ತ ಪೇಪರ್ ತಿರವಿ ಹಾಕ್ತಿದ್ದೆ... ಚಹಾ ಹಿಡಕೊಂಡು ಬಂದ್ಲು.
ನಾ ಬುಕ್ ತುಗೊಂಡು ಬಾ ಅಂದ್ರ, ನಿ ಚಹಾ ತಂದು ಕೊಟ್ಟಿ, ಪೇಪರ್ ರದ್ದಿಗೆ ಹೊದರ ಮತ್ತ ಬರಕೊಳಾಕ ಸಿಗಂಗಿಲ್ಲ ಅಂತಂದೆ. ಎಷ್ಟು ದಿನಾ ಅಂತಾ ಸುಳ್ಳು ಹೊರಗೆ ಬರದೆ ಇರತೆತಿ. ಆಕಿ ತನ್ನ ಸಣ್ಣ ದ್ವನಿಲೇ... ಇಲ್ಲನೋಡ್ರಿ, ನನಗ ಓದಾಕ, ಬರಿಯಾಕ ಬರಂಗಿಲ್ಲ, ನಮ್ಮ ಅಪ್ಪ ನಿಮಗ ಸುಳ್ಳು ಹೇಳ್ಯಾರು ಅಂದ್ಲು... ಗುಡ್ಡ ಕಡಕೊಂಡು ತಲಿ ಮ್ಯಾಲೆ ಬಿದ್ದಂಗ ಆತು. ಸಾಕಷ್ಟು ಹೊಡದೇ, ಹೆಣ್ಣು ಏನ್ ಮಾಡಿತು ಹೋಡಸ್ಕೊಂಡು, ಎರಡ ದಿನಾ ಹಾಸಗಿ ಹಿಡದ್ಲು.
ಮುಂದುವರೆಯುವುದು....

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)