ನಮ್ಮೂರ ಕಡಿ ಸೋಬಾನೆ ಪದಾ...
ಮಾಳಿಗೆ ಮನಿ ಬೇಕು
ಜೋಳಿಗೆ ವನ ಬೇಕು
ಬಸವರಾಜ ದೇವರಂತ ಮಗಬೇಕು
ಬಸವರಾಜ ದೇವರಂತಾ ಮಗಬೇಕು
ಈ ಮನಿಗೆ ಕಿತ್ತೂರು ಚೆನ್ನಮ್ಮನಂತಾ ಸೋಸೇಬೇಕು
ಮಗಳು ಹೆಣ್ಣು ಹಡಿಯಲಿ
ಸೊಸೆಯೂ ಗಂಡ ಹಡಿಯಲಿ
ಏಳುರ ಎಮ್ಮಿ ಕರಿಯಲಿ
ಏಳುರ ಎಮ್ಮಿ ಕರಿಯಲಿ
ಈ ಮನಿಗೆ, ಸಡಗರ ನೋಡಾಕ ಶಿವ ಬರಲಿ
ಅಕ್ಕ ನಾಗಮ್ಮನ ವನಕ ತೊಟ್ಟಿಲ ಕಟ್ಟಿ
ಚೆನ್ನ ಬಸವಣ್ಣನಿಟ್ಟು ತುಗಿರಿ