ಭಾನುವಾರ, ಜುಲೈ 11, 2010

ಅಲೆಮಾರಿ ಜೀವನಾ

ಮನಿ ಹುಡಕಾಕ ನಾ ಹೊಂಟೆ  
ಎಲ್ಲಿಯೋ ಬಸ್ ಸ್ಟಾಪ್
ಎಲ್ಲಿಯೋ ಆ ಮನೆ

ಮೈಲಿ ದೂರ ನಡಕೊಂತ
ದಾರಿ ಹೊಕರನ್ನ ಕೆಳಕೊಂತ

ಎಲ್ಲ್ರಿ ಈ ಮನಿ
ಕೈ ತೋರಿಸಿ ಅಲ್ರಿ ಅಂದರು
ಅಲ್ಲಿ ಅಂದಿದ್ದು ಅಲ್ಲೆಲ್ಲೋ

ಬೇಸತ್ತರು ಕೇಳವರಿಲ್ಲ
ಬ್ಯಾಸರಾದರ ಬಿಡಂಗಿಲ್ಲ
ಯಾವದಪ್ಪ ನಮ್ಮ ಮನಿ
ಎಲ್ಲದು ಬರಿ ಸುಮ್ಮನೆ
ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ

ತುತ್ತು ಅನ್ನ ತಿನ್ನೋಕೆ
ಬೊಗಸೆ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚೋಕೆ
ಅಂಗೈ ಅಗಲ ಜಾಗ ಸಾಕು ಹಾಯಗಿರೋಕೆ

ಹಾಡು ಏನೋ ಬರೋಬ್ಬರಿ... ತುತ್ತು ಅನ್ನ.. ಹುಮ್ಮ್.. ಸಾಕಾಗಂಗಿಲ್ಲ ಬಿಡ್ರಿ.... ಬೊಗಸೆ ನೀರು.. ಅದು ಓಕೆ... ತುಂಡು ಬಟ್ಟೆ... ಅದು ಬಿಪಾಶಾಗ ಅಸ್ಟ..... ಅಂಗೈ ಅಗಲ ಜಾಗ... ಇದು ಸ್ವಲ್ಪ ಮಟ್ಟಿಗೆ ಸೈ ಅನಬಹುದು...