ಇಲ್ಲಿ ಆಗತಿರೂ ಜನಾಂಗಿಯ ದಾಳಿ ಬಗ್ಗೆ.. ಓದಿ, ಕೇಳಿ, ನೋಡಿ, ಇತ್ತೀಚಿಗೆ ನನಗು ಕೂಡ ಹೆದರಿಕೆ ಆಗಿದೆ....
ಮೊದಲ ನಾನಿರತಿರೂ ಜಾಗ ಸುರಕ್ಷಿತ ವಾಗಿತ್ತು, ಈಗೀಗ ಬಂದಿರೋ ಜಾಗ ಸ್ವಲ್ಪ ಶಾಂತವಾಗಿರೋ ಮತ್ತು ೬ ಗಂಟೆಮೇಲೆ ಯಾರು ಹೊರಗಿರೋಲ್ಲ...
ಹೀಗೆ ಒಂದು ರಾತ್ರಿ 7.30 ಆಗಿತ್ತು, ಆದಿನಾ ತುಂಬಾ ಕತ್ತಲು, ಮೋಡಾ ಬೇರೆ ಕಪ್ಪು.. ಮಳೆ ಆಗೋ chances ಇದೆ ಅದಕ್ಕೆ ಮೋಡಾ ಎಲ್ಲ ಕಪ್ಪು ಅನ್ಕೊಂಡು, ಚುಕ್ಕಿ ಬೇರೆ ಕಾಣ್ತಿಲ್ಲ... ಮೋಡಾ ಆಗಿರೋವಾಗ ಚುಕ್ಕಿ ಎಲ್ಲಾ ಎಲ್ಲ ಕಾನಸಬೇಕು ನನ್ನ ಹುಚು ಕಲ್ಪನೆ ಏನೆಲ್ಲ ಯೋಚಿಸ್ತಿದ್ದಿನೀ... ಅನ್ಕೊಂಡು ಬಸ್ ಈಳದು... ಆಚೆ, ಈಚೆ ನೋಡದೆ ಯಾರು ಇರಲಿಲ್ಲ... ಸ್ವಲ್ಪ ಹೀಗೆ ಎರಡು ಹೆಜ್ಜೆ ನಡದೇ... ಇಬ್ಬರು ಹುಡಗರೂ ನನ್ನ ಹಿಂದೆ ಬರೋಕ್ ಶುರು ಮಾದದ್ರು... ಸ್ವಲ್ಪ ಸ್ವಲ್ಪವಾಗಿ ಭಯ ನನ್ನನ ಆವರಸೋಕ್ ಶುರು ಮಾಡ್ತು...
ಮುಂದೆ ಹೋಗಿ ಸ್ವಲ್ಪ ನಿಂತರೈತು, ಹಿಂಬಾಲಕರು ಸ್ವಲ್ಪ ಮುಂದೆ ಹೋದಮೇಲೆ ನಾನು ನಡದ್ರಯತು ಅನ್ಕೊಂಡು, ಸುಮ್ನೆ ಹೀಗೆ ಹಾಡು ಕೇಳ್ತಾ ಇರೋ ಹಾಗೆ ನನ್ನ ಮೊಬೈಲ್ ತೆಗದು ಅಲ್ಲೇ ಒಂದು ಮೂಲೆಯಲ್ಲಿ ನಿತಕೊಂಡೆ... ಆ ಹುಡಗರೂ ಕೂಡ ಅಲ್ಲೇ ನಿಂತು, ನೋಡಲಿಕ್ಕೆ ಶುರು ಮಾಡಿದ್ರು... ಏನಪ್ಪಾ ಮಾಡೋದಿಗಾ, ನಾನೇನಾದ್ರು ಓಡಲಿಕ್ಕೆ ಶುರು ಮಾಡದರೆ, ಎಲ್ಲಿ ಬೆನ್ನು ಹತ್ತರೋ ಅನ್ನೋ ಭಯ, ಅಲ್ಲೇ ನಿಂತರೆ???? ಹೀಗೆಲ್ಲ ಏನೇನೊ ಪ್ರಶ್ನೆ, ಉತ್ತರ, ಉತ್ತರ ಪ್ರಶ್ನೆ....
ಧರ್ಯ ಮಾಡಿ ನಡಿತಾ ಹೋದೆ... ಹಿಂದೆ ಹುಡಗರೂ ನಾನು ಹೋಗೋ ದಾರಿನೆ ಹಿಂಬಾಲಿಸುತ್ತ, ಬರಲಿಕ್ಕೀ ಶುರು ಮಾಡಿದ್ರು... ಅವರ ನೋಡೋ ದೃಷ್ಟಿ ನೋಡಿ... ಇವತ್ತು ನನ್ನಮೇಲೆ ಹಲ್ಲೆ ಆಗೋ ಹಾಗಿದೆ... ಮನೆಲ್ಲಿ ಎಷ್ಟು ಹೇಳಿದ್ರು ವಾಪಸ್ ಬಂದು ಬಿಡು ಅಂತ, ಎಷ್ಟು ಮೊಂಡು ಧರ್ಯ ನಂದು ಎಲ್ಲರಿಗೂ ವಾದ ಮಾಡಿ ಇಲ್ಲೇ ಓದ ಬೇಕು ಅಂತ ಬಂದೆ (ಈ ಎಲ್ಲಾ ಭೂತ, ಭವಿಷ್ಯ ಕಾಲ ಎಲ್ಲಾ ಯೋಚಿಸ್ತಾ)..ಆದದ್ದಾಯಿತು, ಅಂತ ಹಿಂದೆ ನೋಡದೆ ಹೋಗ್ತಾನೆ (ಸ್ವಲ್ಪ ಜೋರಾಗಿ) ಇದ್ದೆ...
ಆ ಹುಡಗರು ಜೋರಾಗಿ ನನ್ನ ಹತ್ತರನೇ ಬರೋ ಹಾಗೆ ಅನಸ್ತು..
ಅಯ್ಯೋ ದೇವರೇ ಅನ್ಕೊಂಡು ನನ್ನ ಎರಡು ಕೈಗಳಿಂದ ಗಟ್ಟಿಯಾಗಿ ಕಿವಿ ಹಿಡದು ಅಲ್ಲೇ ನಿಂತು ಬಿಟ್ಟೆ... ಆ ಹುಡಗರು ಓಡಿ ಹೋಗಿ taxi ಹಿಡದರು... ಅವರಿಗೂ ನಾನು ಹೆದರಿರೋ ವಿಷಯ ಗೊತ್ತಿತ್ತೇನೋ.. We are not attackers sweety!!! ಅಂತೇಳಿ ಹೋದರೂ :P ... ಅಯ್ಯೋ ಹುಚ್ಚು ಜೀವವೆ, ಎಷ್ಟು ಜೀವನದ ಮೇಲೆ ಆಸೆ ಅನ್ಕೊಂಡು, ಮನೆಗೆ ಬಂದೆ... ಹೆದರಿಕೆ ಅನ್ನೋದು ಎಷ್ಟು ಆಳವಾಗಿ ಮನದಲ್ಲಿ ಮೂಡಿದೆ ಅಂದ್ರೆ, ಈವಾಗ ೬ ಗಂಟೆಕೆಲ್ಲ ಮನೆ ಸೇರತಿನೀ...
ಸೋಮವಾರ, ಫೆಬ್ರವರಿ 22, 2010
ಭಾರತೀಯರ ಮೇಲೆ ಜನಾಂಗೀಯ ದಾಳಿ
ನಾನಿಲ್ಲೋರೋದು ಎಲ್ಲರಿಗೂ ಒಂದು ಚಿಂತೀ ಅಗೆತ್ರೀ... ದಿನ ದಿನ ಇಲ್ಲಿ ಭಾರತೀಯರ ಮ್ಯಾಲೆ ನಡಿತಿರು ಹಲ್ಲೆನೋಡಿ, ನಮ್ಮ ಅಪ್ಪಾಜಿ, ಅವ್ವ , ಸ್ನೇಹಿತರು , ಸಂಬಂಧಿಕರು... ವಾಪಸ್ ಬಾರವ, ಓದಿದ್ದು ಸಾಕು, ದಿನ TV, ಪೇಪರ್ ನೋಡಿ ನಮಗ ಹೆದರಿಕಿ ಆಗೆತಿ... ಜಿವಕ್ಕಿನ ಹೆಚಿಂದ್ ಏನ್ ಅದ, ಓದು ಇಲ್ಲೇ ಪೂರ್ತಿ ಮಾಡುವಂತಿ...
ಇಲ್ಲಿತನ ನಾನು... ಇಲ್ಲರೀ ನಮಲ್ಲೇನು ಹಂಗ ಆಗಿಲ್ಲ.... ನಾನಿರುದು ಅಸ್ಟ್ ದೊಡ್ಡ ಊರಲ್ಲ, ಎಲ್ಲ ಆರಾಮಐತಿ... ಅಂತಾ ಹೇಳ್ತಿದ್ದೆ, ಅದರ ಇಲ್ಲಿನು ಹಲ್ಲೆ ಶುರು ಆಗೆತಿ ನೋಡ್ರೀ...
ನನ್ನ ಕೇಳಿದ್ರ, ತಪ್ಪು ಎರಡು ಕಡಿಯಿಂದ್ ಆಗಕತ್ತವರೀ... ನಾನ್ ಹೇಳುದು ಸಲ್ಪ ಕಾರ್ ಅನಸಬಹುದು, ಆದರ್ ಯಾರು ಇದನ್ನ ತೀರ ತಲಿಗೆ ತುಗೊಂಡು... ಹಂಗೆಂಗ, ನೀವ ಹೇಳಿದ್ದ ಕರೆಯೇನು, ಅಂತ ನಿಮ್ಮಗು ಅನಸಬೋದು... ಈದನ್ನ ಓದಿದ ಮ್ಯಾಲೆ ನಿಮಗ ಏನ್ ಅನಸ್ತದು ಅದನ್ನ ಕೇಳ್ರೀ...
TV ಮತ್ತ ಪೇಪರ್ ನೋಡಿ, ಎಲಾರಿಗೂ ಬಾಳ ಬ್ಯಾಸರ ಆಗೆತಿ ಅಂತ ನನಗು ಗೊತ್ತರೀ.. ಇಲ್ಲಿ ಪರಿಸ್ತಿತಿ ಮಾಧ್ಯಮದವರು ಹೇಳದಂಗ...
ಭಾರತಿಯರ್ ಮ್ಯಾಲೆ ಅಸ್ಟ ಯಾಕ ಹಲ್ಲೆ ನಡ್ಯಕುಂತೆತಿ?
ಅದು ಬರೆ ಹುಡಗರ್ ಮ್ಯಾಲೆ ಯಾಕ?
ದಕ್ಷಿಣ ಭಾರತದ ಹುಡುಗರ ಮ್ಯಾಲೆ ಯಾಕ ಹಲ್ಲೆ ಆತು ಮೆಲ್ಬೌರ್ನೆನ್ಯಗ?
ದಕ್ಷಿಣ ಭಾರತದ ಹುಡುಗುರು ಯಾಕ ಕತ್ತಲಗುವರಿಗೂ ಹೊರಗ ಇರತಾರು?
ರೈಲು ನಿಲ್ದಾಣದಲ್ಲಿ ದಕ್ಷಿಣ ಭಾರತದ ಹುಡುಗರ ಮೇಲೇನೆ ಯಾಕ ಹಲ್ಲೆ ಆತು?
ಕೊನೆಯ ಪ್ರಶ್ನೆಯಿಂದ ಉತ್ತರ ಕೊದತಹೊಗತೀನಿ
ಆಸ್ಟ್ರೇಲಿಯಾ ರೈಲು ನಿಲ್ದಾಣಗಳು ರಾತ್ರಿ ಹೊತ್ತನ್ಯಾಗ ಅರಕ್ಷಿತ ಜಾಗಗಳು... ಆಸ್ಟ್ರೇಲಿಯಾ ಅಂತ ಅಸ್ಟ ಅಲ್ಲ ಯಾವದೇ ದೊಡ್ಡ ಊರಿಗೆ ಹೋದರು ರೈಲು ನಿಲ್ದಾಣಗಳು ಹಿಂಗ ಇರತಾವು... ಇಲ್ಲಿಯವರು ಸತೆಕ್ ರಾತ್ರಿ ರೈಲ್ನ್ಯಾಗ ಹೋಗಂಗಿಲ್ಲ. ಹೆಚಾನು ಹೆಚ್ಹು ಮಂದಿ ಯಾರು ಸರಕಾರಿ ವಾಹನಗಳ ಮ್ಯಾಲೆ ಅವಲಂಬಿತರಗೆರೋ ಅವರೆಲ್ಲ ಕತ್ತಲ ಆಗುದ್ಕಿಂತ ಮೊದಲ ಮನಿ ಸೇರಕೊತಾರು ಅಂದ್ರ ೬ ಗಂಟೆಕೆಲ್ಲ ಮನಿಯೋಳಗಿರತಾರು. ಇಲ್ಲಿಯರು ಕೆಲಸದ ವೇಳೆನ ಹಂಗೈತರೀ... ಮುಂಜೇನೆ ೭.೩೦ ಇಂದ ಸಂಜಿಕ್ ೪.೩೦ ತನಾ ಕೆಲಸ. ಮತ್ತ ಹೆನಮಕ್ಕಳು ಯಾರು ರಾತ್ರಿ ಹೊತ್ತು ಅದ್ಯಾದಂಗಿಲ್ಲ. ೬ ಗಂಟೆ ಮ್ಯಾಲೆ ಹೆಚಾನು ಹೆಚ್ಹು ಹೋಗವರಂದ್ರ ಒಪ್ಪತ್ತಿನ ಕೆಲಸ ಮಾಡು ಹುಡಗರು ಇಲ್ಲಂದ್ರ ಸುಮ್ನ ಹೊತ್ತ ಕಳ್ಯಕ ಬರವರು/ನಿಶಚರಿಗಳು/ ಸರ್ಕಾರದ ರೋಕ್ಕದ್ದ ಮ್ಯೇಲಿರು ಮಂದಿ!
ಇಗಿಗೆ ಆಗಿರು ಹಲ್ಲೆ ಅಂದ್ರ ಮುಂಜೇನೆ ೧.೨೦ ಕ್ಕ ಆಗಿರುದು ಅದು ಐತ್ವಾರ ಮುಂಜೇನೆ... ಆಸ್ಟ್ರೇಲಿಯಾ ಮಂದಿ ವಾರಾಂತ್ಯ ಯಾರು ಕೆಲಸ ಮಾಡಂಗಿಲ್ಲ ಮತ್ತ ಆಗಿರೋ ಹಲ್ಲೆ ಎಲ್ಲ ನಿಶಚಾರಿಗಳು/ದಂಡಪಿಂಡಗಳು ಅಂದ್ರು ಅನ್ನಬಹುದು (ಕೆಲಸ ಮಾಡದ ಸರಕಾರೀ ರೊಕ್ಕದ ಮ್ಯಾಲೆ ಜೀವನ ನದಸವ್ರು) ಮಾಡಿದ್ದೂ, ಈ ದಂಡಪಿಂಡಗಳು...ಶುಕ್ರವಾರ ರಾತ್ರಿಯೀಂದ ಹಿಡದು ಐತವಾರ ರಾತ್ರಿ ವರಿಗೂ ಅವರ ಲೋಕನ ಬ್ಯಾರೆ ಇರತೆತಿ, ಕುಡಿದು, ಕುಣಿದು, ಅವರಿಗೆ ಗೊತ್ತಿಲ್ದಂಗ ಎಲ್ಲಂದರ ಅಲ್ಲಿ ಬಿದ್ದಿರತಾರ್ ರೀ... ಜಾಸ್ತಿ ಹಿಂತ ನಿಶಾಚಾರಿ ಮಂದಿ ಅಸ್ಟ ವಾರಾಂತ್ಯದಾಗ (ರಾತ್ರಿಹೊತ್ತೋ) ರೈಲ್ನ್ಯಾಗ ಹೋಗವರು... ಅವರಿಗೆ ಕುಡಿಲಿಕ್ಕೆ ರೊಕ್ಕ ಬೇಕು, ಅದಕ್ಕ ಅವರು ಏನ್ ಮಾಡಕು ಹೇಸಂಗಿಲ್ಲ, ಯಾಕಂದ್ರ ಕುಡಿಯೋ ಚಟ ಅಂದರ ಹಂಗಿರತದರೀ (ನನ್ನ ಅನುಭವ ಏನ್ ಅಲ್ರೀ , ಕೇಳಿ ತಿಳಕೊಂಡದ್ದು :) )... ಯಾದಾರ ನಿಲ್ದಾಣ ದಾಗ್ ಈಳದಕುದಲೇ , ರೊಕ್ಕ ಇದ್ದವರು ಅಂತ ಗೊತದರ್ ಅವರನ್ನ ಬೆನ್ನಹತ್ತಾರು ಈ ನಿಶಚರಿಗಳು, ಅವನು ಯಾವದೇ ದೇಶದವನಾಗಿರಲಿ... ಅದಕ್ಕ ನಾನೇನು ಅನ್ನದು ಅಂದ್ರ, ನಾವು ಇರೋದು ಬ್ಯಾರೆಯವರ್ ದೇಶದಾಗ್, ಯವಗಿದ್ದರು, ಬಾಜು ಮನಿಯವರು ಒಳ್ಳೆದವ್ರು ಅಂತ ನಂಬದವರು... ಆದರ ಅದು ಹಂಗಿಲ್ಲರೀ...
ಸುಮ್ನ ನಮ್ಮ ಕೆಲಸ ನೋಡಕೊಂಡು ಹೋಗತಿರಬೇಕರಿ... ದೆಹಲಿ ಮತ್ತ ಮುಂಬಯಿ ಅಂತ ದೊಡ್ಡ ಊರಗು ಕತ್ತಲ ಆದಮೇಲೆ ರೈಲ್ನ್ಯಾಗ್ ಅಥವಾ ರೈಲ್ ನಿಲ್ದಾನ್ದಾಗ್ ಯಾರು ಜಾಸ್ತಿ ಮಂದಿ ನೋಡಾಕ ಸಿಗಂಗಿಲ್ಲ ... ಆದರ್ ಇಲ್ಲಿ ಬಂದಿರು ದಕ್ಷಿಣ ಭಾರತದ ಹುಡುಗುರು ಅಸ್ಟ್ ಹೊತ್ತಗುವರಿಗೂ ಹೆಂಗ ಧೈರ್ಯದಿಂದ ಹೊರಗ ಅದ್ಯಾದತಾರು ನನಗ ಇನ್ನುವರಿಗೆ ತಿಳಿದಿಲ್ಲ... ನನಗೇನ್ ಭಾರತದಾಗ ಜನ ಅಸ್ಟ ರಾತ್ರಿ ಆಗುವರಿಗೂ ಜನ ಓದ್ಯದತಾರು ಅನಸಂಗಿಲ್ಲ ರೀ...
ಈ ಹುಡಗರು ಮತ್ತ ಪಂಜಾಬ್ ಹುಡಗ್ಯರು ಅದೆನ ಹುಚ್ಚು ಸಾಹಸ/ಧರ್ಯ ನೋ ರಾತ್ರಿ ಜೋರಾಗಿ ಹಾಡ ಕೆಲಕೊಂತ. ಕುನಕೊಂತ ಮನಿಗೆ ಬರಿದು...
ನಾನು ಸತೆಕ್ ಲೇಟ್ ಆಗಿನ ಬರತೆನಿ ಆದರ ಇಲ್ಲಿ ನಮಗ ಅನುಕೂಲ ಅಗುವಂಗ ಎಲ್ಲ ವಿಶ್ವವಿಧ್ಯಾಲಯಗಳು, ಸೆಕ್ಯೂರಿಟಿ ಈರತಾರರೀ... ಲೇಟ್ ಆದ ಕೂಡಲೇ ಒಂದು ಫೋನ್ ಮಾಡಿ ನೀವು ಇರೋ ಜಾಗ ಅಂದ್ರ ವಿಶ್ವವಿಧ್ಯಲಯದೊಳಗ ಯೆಲ್ಲದಿರೀ ಅಂತ ಹೇಳಿದ್ರ ಸಾಕು ಅವರು ಬಂದು ಬಾಗಲ್ನ್ಯಾಗ ನಿಂತಿರತ್ತರ್... ಅಮ್ಯಲೇ ಬಂದು ಹೆಲ್ಪ್ ಮಾಡಿ ಸಿಟಿ ತನ ಇಲ್ಲಂದರ ಬಸ್ ಸ್ಟಾಪ್ ವರಿಗೂ ಡ್ರಾಪ್ ಮಾಡತಾರು...
ಮೇಲ್ಬೌರ್ನೆ ದೊಡ್ಡ ಊರು, ನಾಗರೀಕತೆ ಇರು ಊರು ಅದರೂ ಸಹಿತ ಮರಿಜೋನ ಅಂತ ಜಾಗ ಯಾವಾಗಲು ಸೇಫ್ ಅಲ್ಲ...
ಆಸ್ಟ್ರೇಲಿಯಾ ಮಂದಿ ಜಲ್ದಿ ಅಂದ್ರ ೮ ಗಂಟೆ ಅಂದ್ರ ಮಲಗ್ಬಿದತಾರ್... ಆದರ್ ಈ ಹುಡಗರು ರಾತ್ರಿ ೧೨ ಗಂಟೆಕೆಲ್ಲ ಹಾದಿ ಒಳಗ ಜೋರ ಹಾಡ ಹಚಕೊಂದು ಕುನಕೊತ್ ಹೋದ್ರ ನಿದ್ದಿ ಮಾಡು ಮಂದಿ ಎದ್ದ ಬೈಯದ ಏನ್ ಮಾಡ್ತಾರ್ ಹೇಳ್ರೀ... ನಾವ ಇಲ್ಲಿರುವಾಗ್ ಇಲ್ಲಿ ಜನ ಹೆಂಗಿರತಾರು ಹಂಗ ಹೊಂದಕೊಂದು, ಅಮಲೇ ಅವರಿಗೆ ನಮ್ಮಿಂದ ಯಾವ ತರಾನು ತ್ರಾಸ್ ಅಗಲಂಗ ನೋದಕೊಬೇಕರೀ.. ನಾವಿಲ್ಲುರುದು ಕೆಲಸ ಅಥವಾ ಓದಲಿಕ್ಕೆ ಬಂದವರು ನಮ್ಮ ನಮ್ಮ ಕೆಲಸ ಮುಗಸ್ಕೊಂದು ಹೋಕ್ಕಿರಬೇಕರೀಪ...
ಹಂಗಂತ ಅವರ ಮಾಡಿದೆಲ್ಲ ಸಹಿಸ್ಕೊಳಬೇಕು ಅಂತೇನು ಇಲ್ಲ... ಅವರ ನಮ್ಮ ಮ್ಯಾಲೆ ಹಂಗೆಲ್ಲ ಮದಬೇಕಂದ್ರ ಅವರ ತೆಲಿಯೋಳಗ ಏನ್ ಹುಳ ಯೆಳತಿರಬೇಕು... ನಾವ ಇಲ್ಲಿ ಬಂದು ಅವರ ಕೆಲಸ ಹೋದಕೊಂಡಿರಬೇಕಾರ್ ಅವರಿಗೆ ಒಳಗಿಂದ ಎಷ್ಟು ತ್ರಾಸ್ ಆಗಕತ್ತಿರ್ಬಾರದು... ಅದನ್ನ ಹೊರಗ ಹಾಕಲಿಕ್ಕೆ ಹಿಂಗೆಲ್ಲ ಮಾಡತಾರ ರೀ ....
ಈಗ ನಮಲ್ಲೇ, ಈ ಮಂದಿ ಇಟಿಟ ಅರಬಿ ಹಾಕ್ಕೊಂಡು ಓಡ್ಯದುದು ನೋಡಿ ನಮಗೆಲ್ಲ ಒಂತರ ಅನಸತಾದ್ ಅದನ್ನ ನೋಡಿ ನಾವು ಅವರ್ನ ಏನ್ ಸಂಸ್ಕಾರ ಇಲ್ಲದಿರೋ ಮಂದಿ ಅಂತೆಲ್ಲ ಅನ್ತೆವಿ...
ಆದರ ಇಲ್ಲಿ ಸತೆಕ್ ಒಳೆ ಮಂದಿ ಅದಾರೀ, ನಮ್ಮ ದೇಶದ್ದ ಆಚಾರಾ, ವಿಚಾರಾ ಎಲ್ಲ ನೋಡಿ ನಾವು ಹಿಂಗ ಇರಬೇಕು ಅಂತ ಅನ್ಕೊಂತಾರ್ ರೀ... ಭಗವದ್ಗೀತಾ ನಮಕಿಂತ ಚುಲೋ ಗೊತ್ತೈತಯ್ರೀ ಇವರಿಗೆ, ಯೋಗಾಸನ ಕಲಿಲಿಕ್ಕೆ ಎಷ್ಟು ಆಸೆ ಪಡತಾರು, ನಾವೆನಾರು ಸ್ವಲ್ಪ ಗೊತಿದ್ದವ್ರು ಇದ್ದರು... ಈಲ್ಲಿ ಜನ ಅದನ್ನ ಜೀವನದ ಒಂದು ದಾರಿ ಅಂತ ಅನ್ಕೊಂದವ್ರು...
ಇದೆಲ್ಲ ಒಂದು ರೀತಿ ಜಗತ್ತಿಗ್ಗೆ ತಪ್ಪ ಸಂದೆಷಾ ಅಗೆತ್ರೀ... ತಂದೆ ತಾಯಿ ಗಂತೂ ದಿನಾ ಎದ್ದರ ಚಿಂತೀ, ಏನ ಆಗಲಿಕ್ಕತ್ತೆತೋ ಏನು ಅಂತ... ಎಸ್ಟೋ ಕಲಿ ಹುಡಗರು, ಹುಡಗ್ಯರು, ತಮ್ಮ ಜೀವನ ಈ ರಿತೇ ಕಳಕೊಂಡರ, ಕೇಳಿ ಬಹಳ ಬ್ಯಾಸರ ಆಕೀತಿ...ನನ್ನ ಕಳೆ ಕಳೆ ವಿನಂತಿ ಅಂದ್ರ... ಮನಿಗೆ ಜಲ್ದಿ ಹೋಗ್ರೀ, ಇಲ್ಲಂದ್ರ ನಿಮ್ಮ ಮುಂಜಾಗ್ರತೆ ಸಲ್ವಾಗಿ, taxi ಹಿಡಕೊಂಡು ಹೋಗುದು ಒಳೆದು. ರೊಕ್ಕ ಆಮೇಲು ಗಳಸಬಹುದ ರೀ ಆದರ, ಮನುಷ್ಯ ಜೀವನ ಅನ್ನುದು ಬಹಳ ಅಮೂಲ್ಯ ವಾದ್ದು... ಅದನ್ನ ಕಾಪಾಡೋದು ನಮ್ಮ ಕೈಯಾಗ ಅದ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)