ಸೋಮವಾರ, ಅಕ್ಟೋಬರ್ 25, 2010

ಮಾತಿನಲ್ಲಿ ಜಗವ ಗೆಲ್ಲುವ

ಕಾಡುವ ಹುಡುಗಿಯ ಕೇಳಿ ನೋಡು
ಅವಳ ಮುನಿಸಿಗೆ
ನಿನ್ನ ಅನಿಸಿಕೆ ಏನು

ಕಿತ್ತಾಡಿ ಜಗಳಘಂಟ ಅನ್ನಿಸಿಕೊಬ್ಯಾಡಾ
ತುಂಟಾಟದಿ ಮನ ಗೆದ್ದು ನೋಡು

ಸೀರೆ ತರದಿದ್ದರೂ
ನನ್ನುಸಿರೇ ಎಂದು ಕರೆದು ನೋಡು

ಸಿಡುಕು ಹೆಣ್ಣಿಗೆ
ಸಿಂಗಾರಿ ಎಂದು ನೋಡು

ಜಗಳಕ್ಕಿಳಿದರೆ
ಚೆನಮ್ಮ ಎಂದು ನೋಡು

ಸಿಟ್ಟಾದರೆ
ಮಾರಿಯಂತೆ ಹೊಳೆವ ಕಣ್ಣು ಎಂದು ನೋಡು

ಪ್ರೀತಿ ಮಾತಿಗೆ ಸೋಲದವರಿಲ್ಲ
ಮಾತಿನಲ್ಲಿ ಜಗವ ಗೆಲ್ಲುವ
ಮಾತಿನ ಮಲ್ಲನಾಗಿ ನೋಡು