ಎಸ್ಟೋ ದಿವಸದಿಂದ ಈ ಹಾಡು ಬರೀಬೇಕು ಅನ್ಸಿತ್ತು ಆದರ online ಕೇಳ್ತಾ ಬರಿಲಿಕ್ಕೆ ಕಷ್ಟಾ.. ಮತ್ತ ಯಾವಾಗ್ ಟೈಮ್ ಸಿಗತದೋ ಅಂತ ಕಾಯಕೊಂತ ಕುಂತಿದ್ದೆ... ಇವತ್ತು ಸ್ವಲ್ಪ ಟೈಮ್ ಸಿಕ್ಕತ ಹಂಗ ಕೆಳಕೊಂತ ಬರದೆ...
ಕುಂಜರದ ಗೊಂಬೆ ಕೇಳಿ ನಲ್ಲರ ಜಾಣೆ ಖುಶಲದ ರಂಬೆ ಕೇಳೆ ...
ನಮ್ಮೂರ ಗೌಡನ ಮಗಳು ನಿರಿಗೆ ಹೋಗುವಾಗ ಕಟ್ಟೆ ಕಲ್ಲಾಗಿ ಬಂದು ಅಡಗಿದ್ದಾ ಆ ಹುಡುಗ
ಕಟ್ಟೆ ಕಲ್ಲಾಗಿ ಬಂದು ಅಡಗಿರೋ ಹೊತ್ತಿಗೆ ಹೊನ್ನಾಳಿ ಹೊಳೆಯಾಗಿ ಹರಿದಿದ್ದಲ್ ಆ ಹುಡಗಿ
ಹೊನ್ನಾಳಿ ಹೊಳೆಯಾಗಿ ಹರಿದಿರೋ ಹೊತ್ತಿಗೆ ಅಡ್ಡಯೇರಿ ಆಗಿ ತಡಿದಿದ್ದ ಹುಡುಗ
ಅಡ್ಡ ಏರಿಯಾಗಿ ತಡೆದಿರೋ ಹೊತ್ತಿಗೆ ತೆಂಗಿನ ಮರವಾಗಿ ಬೆಳೆದಿದ್ದಳ ಆ ಹುಡಗಿ
ತೆಂಗಿನ ಮರವಾಗಿ ಬೆಳಿದಿರೋ ಹೊತ್ತಿಗೆ... ಮರವೇರಿ ಎಳೆನೀರ ಕುಡಿದಿದ್ದನ ಆ ಹುಡುಗ
ಮರವೇರಿ ಎಳೆನೀರ ಕುಡಿದಿರೋ ಹೊತ್ತಿಗೆ... ಜೋಳದ ಕಾಳಗಿ ಚಿಮ್ಮಿದ್ದಲ ಆ ಹುಡಗಿ
ಜೋಳದ ಕಾಳಗಿ ಚಿಮ್ಮಿರೋ... ಹೊತ್ತಿಗೆ ಕೋಳಿ ಹುಂಜಾಗಿ ಕುಕ್ಕಿದ್ದನ ಆ ಹುಡುಗ
ಕೋಳಿ ಹುಂಜಾಗಿ ಕುಕ್ಕಿರೋ ಹೊತ್ತಿಗೆ... ಹೆಬ್ಬುಲಿ ಆಗಿ ನಿಂತಿದ್ದಳ ಹುಡಗಿ
ಹೆಬ್ಬುಲಿ ಆಗಿ ನಿಂತಿರೋ ಹೊತ್ತಿಗೆ. .. ಚಿನ್ನದ ಕತ್ತಿನ ಕೋವಿ ಹಿಡಿದು ನಿಂತಿದ್ದನ್ ಆ ಹುಡುಗ
ಚಿನ್ನದ ಕತ್ತಿನ ಕೋವಿ ಹಿಡಿದಿರೋ ಹೊತ್ತಿಗೆ ಮುತ್ತಿನ ಶೆರಗ್ ಒಡ್ಡಿ ಬೇಡಿದ್ದಲ ಹುಡಗಿ
ಕುಂಜರದ ಗೊಂಬೆ ಕೇಳಿ ನಲ್ಲರ ಜಾಣೆ ಖುಶಲದ ರಂಬೆ ಕೇಳೆ ...
17 ಕಾಮೆಂಟ್‌ಗಳು:
ಮಾನಸ,
ಚೆಂದದ ಸಾಲುಗಳು...
maanasa
tumba chennagide ide reeti esto jaanapada haadugaLu namage tiLiyade kaNmareyaagive
ಜಾನಪದ ಹಾಡು ನ೦ಗೂನೂ ಭಾಳ್ ಹಿಡಸ್ತಾವ್ರೀ..ಚೆ೦ದದ ಹಾಡ್ ಓದಿ ಖುಶಿ ಆತು ಕಣ್ರೀ..ಮತ್ತಾ ನಿಮಗ ನನ್ ಕಡಿ೦ದಾ ಥ್ಯಾ೦ಕ್ಸ ರೀ..:)
ಮಾನಸ
ತುಂಬಾ ತುಂಬಾ ಚಂದದ ಸಾಲುಗಳು
ಬಹಳ ಖುಷಿಯಾಯಿತು ಓದಿ
-->Manasa,
ಬಹಳ ಚಂದದ ಜಾನಪದ ಸಾಲುಗಳು..
@ ಸವಿಗನಸು,
ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು :)
@ ಮನಸು
ಹು ರೀ ಆದರೆ ಅದನ್ನ ಉಳಿಸಿ ಬೆಳೆಸೋದು ನಮ್ಮ ಕೈಲಿದೆ
kannadaaudio.com visit ಮಾಡಿ ಈ ಹಾಡುಗಳನ್ನು ಕೇಳಬಹುದು... ಜೇನುಗೂಡು ಅಂತ ಹೆಸರು :)
@ ಮನಮುಕ್ತಾ,
ತುಂಬಾ ಧನ್ಯವಾದಗಳು, ನಿಮಗ ಖುಷಿ ಆಗಿದ್ದು ನೋಡಿ ನನಗು ಇಂತಹ ಹಾಡು ಕೇಳಿ ಬರಿಲಿಕ್ಕೆ ಸ್ಫೂರ್ತಿ ಆಯ್ತು ನೋಡ್ರಿ :)
@ ಸಾಗರದಾಚೆಯ ಇಂಚರ,
ಧನ್ಯವಾದಗಳು ರೀ :)
@ ಜ್ಞಾನರ್ಪನಮಸ್ತು
ನಿಮ್ಮ ಬ್ಲಾಗ್ ಹೆಸರು ಸರಿಯಾಗಿ ಟೈಪ್ ಮಾಡಲಿಕ್ಕೆ ಬರ್ತಿಲ್ಲ.
ತಪ್ಪು ತಿಳಿಯಬೇಡಿ ... ತುಂಬಾ ಧನ್ಯವಾದಗಳು ಪದ ಮೆಚಿದಕ್ಕೆ :)
ನಿಮ್ಮ ಭಾಷೆ ತುಂಬಾ ಖುಷಿ ಕೊಡುತ್ತೆ..:)
@ ಗೌತಮ್ ಹೆಗಡೆ,
ಓದಲಿಕ್ಕೆ ಕಷ್ಟ ಆಗಿರಬೇಕು... ತುಂಬಾ ಥ್ಯಾಂಕ್ಸ್ ಕಾಮೆಂಟ್ ಮಾಡಿದಕ್ಕೆ :)
ಮಾನಸ ; .ಬಹಳದಿನಗಳ ಮೇಲೆ ಒಂದು ಒಳ್ಳೆಯ ಜಾನಪದ ಹಾಡು ಓದಿ ಖುಷಿ ಆಯಿತು .ನಿಮ್ಮ ಧಾರವಾಡದ ಕನ್ನಡ ನನಗೆ ಬಹಳ ಇಷ್ಟ .ಅದರ ಸೊಗಡು ಬೇರೇ.ನಿಮ್ಮ ಬ್ಲಾಗಿನ ಫಾಲೋಯರ್ ಆಗುವುದು ಹೇಗೆಂದು ತಿಳಿಯಲಿಲ್ಲ .ನನ್ನ ಬ್ಲಾಗಿಗೂ ಭೇಟಿ ಕೊಡಿ .ನಮಸ್ಕಾರಗಳು.
ನೀವು ಬರೆದಂತೆ ಜಾನಪದ ಗೀತೆಗಳನ್ನು ಉಳಿಸಿ ಬೆಳೆಸುವುದು ನಮ್ಮ ಕೈಯ್ಯಲ್ಲೆ ಇದೆ. ಚೆನ್ನಾಗಿದೆ
tumba chendad haadu... nimma bariyo shaili tumbaa chenaagide... all most all posts odide... Hubballi hudagi anta odata iddange gottagutte... tumba saraagvaad baraha
ಮನು...ಭಾಳ ಛಲೋ ಐತೆ ಬಿಡ್ರೀ...ಅವ್ನು ಅದು ಆಗಿದ್ದು ಇವ್ಳು ಇದು ಆಗಿದ್ದು..ಅವ್ಳು ಇದು ಆದ್ಲು ಆಂತ ಅವ ಇನ್ನೊಂದು ಆಗಿದ್ದು...ಕಡೀಗ್ ಚಿನ್ನದ ಕತ್ತಿ ಹಿಡ್ದವಂಗ ಸೆರೆಗ್ ಒಡ್ಡಿ ಬೇಡ್ಕೊಂಡಿದ್ದು....ಭಾಳ ಪಸಂದಾಯ್ತು...
ಚೆ೦ದನ್ನ ಜಾನಪದ ಹಾಡ ನೆನಸಿ ಮನಸ ಕುಣಿದ್ಯಾಡಿಸಿಬಿಟ್ಟ್ರೆಲ್ಲ್ರವ್ವಾ! ಭಾಳ ಚಲೊ ಆತು. ಅ೦ದ೦ಗ ತಮ್ಮ ಬ್ಲೊಗ್ನಾಗ ಹೆ೦ಗ್ರಿ ಬೆನ್ನ ಹತ್ತುದು ಅದರ ಖಬರ ಇಲ್ಲಲ್ಲ್ರೆಲ್ಲಾ! ತಾವು ಬರದಿದ್ದು ನಮಗ ಗೊತ್ತಾಗುದು ಹೆ೦ಗ ಮತ್ತ? ಸ್ವಲ್ಪ ಅಲ್ಲಿ ಇಲ್ಲಿ ಕೊ೦ಡಿ ತಡಕ್ಯಾಡಿ ನಿಮ್ಮ ಫ಼ಲೋವರ್ ಅಗುವ೦ತಾ ಆಪ್ಶ್ಯನ್ ಬರುವ೦ಗ ಮಾಡ್ರೆಲ್ಲಾ! ಹೇಳುದು ಆಯ್ತ್ರೀ ಇನ್ನ ನಮಸ್ಕಾರ್ರಿ.
@ DR.ಕೃಷ್ಣಮೂರ್ತಿ D T,ತುಂಬಾ ಥ್ಯಾಂಕ್ಸ್ ಪದ ಮೆಚಿದಕ್ಕೆ .. ಖುಷಿ ಆಯ್ತು ನಿಮ್ಮ ಕಾಮೆಂಟ್ ಓದಿ ... ಫಾಲ್ಲೋವೆರ್ ಆಗೋ ಒಪ್ಶನ್ ನಂಗು ತಿಳಿಯದು ... ಆಡ್ ಮಾಡಿ ಹೇಳ್ತೀನಿree :)
ಮತ್ತ ನಮ್ಮ ಹುಬ್ಬಳ್ಳಿ ಕನ್ನಡ ... ಅದೇ ನನ್ನ ಪರಿಚಯ :)
@ Deepasmitha, ಹು ರೀ ನಮ್ಮ ಕೈಲಿದೆ :) ಥ್ಯಾಂಕ್ಸ್ ಫಾರ್ ದಿ ಕಾಮೆಂಟ್ ...
@ Anaamadheya, ella post odidakke tumbaa thanks :)
hummm hubballi hudagi :)
@ ಜಲಾನಯನ (azadre) , ಕಾಮೆಂಟ್ ಮಾಡಿದಕ್ಕೆ ತುಂಬಾ ಥ್ಯಾಂಕ್ಸ್ ... ಚಿನ್ನದ ಕತ್ತಿ ಹಿಡದ್ಮೇಲೆ ಸೆರಗು ಓದ್ದಲೇ ಬೇಕಲ್ವೆ ;)
@ ಸೀತಾರಾಮ್ K,
ಜಾನಪದ ಹಾಡು ನನಗ ಬಾಳ ಇಷ್ಟ ರೀ ... ತುಂಬಾ ಅರ್ಥಪೂರ್ಣವಾಗಿರುತ್ತೆ ... ನಮ್ಮನ್ನ ಬೆನ್ನ ಹತ್ತೋ ಸಾಹಸ ಮಾದಕತ್ತಿರೀ ಅಂತಾತು ;) ... ಅದೇನೋ ಒಪ್ಶನ್ ಆಡ್ ಮಾಡಬೇಕು ಆಗ್ತಿಲ್ಲ ... so try ಮಾಡ್ತೀನಿ :) ... ಆಮೇಲೆ ಬೆನ್ನು ಹತ್ತುವರಂತೆ :)
ಓದಲಿಕ್ಕೆ ಕಷ್ಟ ಖಂಡಿತ ಇಲ್ಲ.ನೀವು ಹೀಗೆ ಬರೆಯುತ್ತೀರಿ.ನಿಮ್ಮದು ಒಳ್ಳೆಯ ಪ್ರಯತ್ನ.ತಮ್ಮ ತಮ್ಮ ಮನೆಯ ಭಾಷೆಯಲ್ಲಿ ,ಶೈಲಿಯಲ್ಲಿ ಬರೆದರೆ ಬರಹಕ್ಕೆ ವಿಶೇಷವಾದ ಮೆರಗು ಇರುತ್ತೆ.:)
tumba ista aatu ...just paalavi gottittu ...full song gottirla ...thanks
@ Goutam, tumbaa thanks
baraha mechidakke...
@ Ishwar, tumbaa thanks :)
ಕಾಮೆಂಟ್ ಪೋಸ್ಟ್ ಮಾಡಿ