ಆಸರೆ ಅಲ್ಲದಿದ್ದರೂ ನಂಬೋ ಜೀವ...
ನದಿಯಲ್ಲಿ ಮುಳಗುತಿರುವಾಗ.. ಮುಗಿಯಿತು ಜೀವನ ಅನ್ನೋಅಸ್ಟರಲ್ಲಿ... ಒಂದು ಸಣ್ಣದಾದ್ ಗಿಡ/ಬಳ್ಳಿ ಸ್ವಲ್ಪ ಬೇರು ಬಿಟ್ಟು ನಿಂತಿದೆ ಅಂದ್ರೆ, ಅದನ್ನೇ ಹಿಡಕೊಂಡು... ಬದುಕಿದೆ ಬಡ ಜೀವವೇ ಅಂತಿವಿ... ಅದು ಗಟ್ಟಿ ಅಲ್ಲ ಅನ್ತಿದ್ರುನು ಸ್ವಲ್ಪ ಕಾಲ ಜೀವ ನಿಡತು... ಶಾಶ್ವತ ಅಲ್ಲ ಅಂತ ಗೊತ್ತಿದ್ರನು...ಸ್ವಲ್ಪ ಕಾಲ ಬದುಕೋದಕ್ಕೆ ಆಸರೆ ಆಯಿತು...
ಹಿಂಗೆ ಯಾರನ್ನೋ ಭೇಟಿಯಾಗಿರತಿವಿ, ಅವರು ನಮ್ಮೊಂದಿಗೆ ಬರೋಲ್ಲ ಅಂತ ಗೊತ್ತಿದ್ರು.. ಸ್ವಲ್ಪ ಸಮಯದಲ್ಲೇ ಅವರಿಗೆ ನಮ್ಮ ಬಗ್ಗೆ ಪರಿಚಯಿಸಿಕೊಂಡು... ಅವರಬಗ್ಗೆನು ತಿಳಕೊಳು ಕುತೂಹಲ ತೋರಿಸ್ತಿವೀ... ಅದಕ್ಕೆ ಏನೋ ಮನುಷ್ಯ ಸಂಘ ಜೀವಿ ಅನ್ನೋದು.
ಬಸನಲ್ಲೋ, ಟ್ರೈನಲ್ಲೋ, ವಿಮಾನ ದಲ್ಲೋ, ಇಲ್ಲ ಒಂದೇ ದಾರಿಯಲಿ ನಡಿತಾ ಹೋಗತಿರ್ತಿವಿ... ಕೆಲವೊಬ್ರು ಆತ್ಮಿಯವಾಗತಾರೆ... ಕೆಲವೊಬ್ರು ಮೊದಲ ಪರಿಚಯದಲ್ಲೇ ನಾವು ಜೊತೆಗೆ ಇನ್ನು ದೂರ ಹೋಗಲಾರೆವು ಅನ್ನೋ ಸೂಚನೆ ಕೊಟ್ಟಿರ್ತಾರೆ... ಮನಸ್ಸು ಅನ್ನೋದು ಹುಚ್ಚು... ಅವರು ನಮ್ಮವರಲ್ಲ ಅಂತಿದ್ರುನು. ಸ್ವಲ್ಪ ಕಾಲ್ವಾದರೂ ನಮ್ಮೊಂದಿಗೆ ಜೊತೆಗಾರರಾಗಿ ನಮ್ಮ ಜೊತೆ ಬಂದ್ರಲ್ಲ ಅನ್ನೋ ಸಮಾಧಾನ... ಅವರು ಆ ಕ್ಷಣದಲ್ಲಿ ಆಡಿರುವ ಎರಡು ಮಾತುಗಳು... ಅವನ್ನೇ ಜೀವನ ಪೂರ್ತಿ ಮೆಲಕ ಹಾಕತಿರತಿವಿ... ಮತ್ತೆ ಸಿಕ್ಕೆ ಸಿಗ್ತಾರೆ ಅನ್ನೋ ಭಾವನೆ. ಇನ್ನಿಲ್ಲಂದ್ರೆ ಎಂದಾದ್ರೂ ಒಂದು ದಿನ ಸಿಕ್ಕೆ ಸಿಗ್ತಾರೆ... ಮತ್ತೆ ಭೇಟಿ ಆಗೇ ಆಗತಿವಿ ಅನ್ನೋ ಬರವಸೆ... ಬರವಸೆ ಅಲ್ಲದಿದ್ರೂ ನಮ್ಮನ್ನ ನಾವು ಸಮಾಧಾನ ಮಾಡಕೊಳು ರೀತಿ... ಇದು ಮನಸನ್ನ ಸಮಾಧಾನ ಪಡಿಸೋ ರೀತಿ...
ಒಂದಲ್ಲ ಒಂದು ದಿನಾ ಸಿಕ್ಕೆ ಸಿಗತಿವಿ ಬಿಡಿ... ವರ್ಲ್ಡ್ ಇಸ್ ರೌಂಡ್ ಯಾರ್ :)
4 ಕಾಮೆಂಟ್‌ಗಳು:
nice write up ....
so true and so meaningul...
It reminds of me of lines of "Is mod se jaate hai jo"
Aandhi Ki Tarha Ud Kar Ik Raah Guzarti Hai
Sharmaati Huwi Koyi Qadmo Se Utarti Hai
In Reshmi Raaho Mein Ik Raah To Woh Hogi
Tum Tak Jo Pahonchti Hai Is Mod Se Jaati Hai
Is Mod Se Jaate Hain
Ishwar,
Many thanks for the comment :)
nice!
World s round!
Sitaram sir,
Thanks :)
ಕಾಮೆಂಟ್ ಪೋಸ್ಟ್ ಮಾಡಿ