ಬಾ ಗೆಳೆಯ ಹೋಗುನು ಹೂವಿನ ತೋಟಕ್ಕ
ಹೂವು ಬಾಡ್ಯವು ನೀರಿಲ್ಲದ
ನೀ ಇಲ್ಲದ ನಾ ಬಾಡಿದಂಗ
ನೀರು ಬೇಕು ಹೂವಿಗೆ
ಹೂವಿನ ನಗುವಿಗೆ
ನೀನು ಬೇಕು ನನಗೆ
ನನ್ನ ನಗುವಿಗೆ
ಹೂವು ಕೇಳಿತು ಅಂದು ನೀ ಯಾಕೆ ಬಾಡಿರುವೆ?
ನಾನಂದೆ ಹೂವೆ...
ನೀನು ಬಾಡಿರುವೆ ನೀರಿಲ್ಲದ
ನಾನು ಬಾಡಿರುವೆ ಗೆಳೆಯನಿಲ್ಲದೆ
12 ಕಾಮೆಂಟ್ಗಳು:
Aa huveege neeru sigali, nimage nalmeya geLeya sigali ...hoovinante neevu, nimmante hoovu nagata nagata iri ....
beautiful lines ..
ಏನು ನಿಮ್ಮ ಭಾಷೆ ಕಲಬೆರಕೆ ಆಗಿದೆ ?:) ನಿಮ್ಮ ಎಂದಿನ ಭಾಷೆ ಎಲ್ಲಿ ? :)
ನೀರು ಬೇಕು ಹೂವಿಗೆ
ಹೂವಿನ ನಗುವಿಗೆ
ನೀನು ಬೇಕು ನನಗೆ
ನನ್ನ ನಗುವಿಗೆ
Tumba istavaada saalugaLu.
ಮಾನಸ...ಯಾಕೆ ನೆನಪು ಭಾಳ ಆಗ್ಲಿಕ್ಕಹತ್ತೈತಿ..? ನೀರಿಗೆ ಹಾತೊರೆಯೋ ಹೂವು ಸ್ನೇಹಕ್ಕೆ ಎದುರುನೋಡೋ ಸ್ನೇಹಪರ....ಚನ್ನಾಗಿವೆ ಸಾಲುಗಳು.
ನೀರಿನಿಂದ ಹೂ ಅರಳಲಿ....
ಗೆಳೆಯನಿಂದ ನಿಮ್ಮ ನಗು ಚಿಮ್ಮಲಿ...
ಚೆಂದದ ಸಾಲು....
ಮೇಡಂ,
ತಮ್ಮದು ಉತ್ತರ ಕರ್ನಾಟಕವೇ? ಭಾಷೆ ನೋಡಿ ಹಾಗನಿಸಿತು.
"ಹೂವು ಕೇಳಿತು ಅಂದು ನೀ ಯಾಕೆ ಬಾಡಿರುವೆ?
ನಾನಂದೆ ಹೂವೆ...
ನೀನು ಬಾಡಿರುವೆ ನೀರಿಲ್ಲದ
ನಾನು ಬಾಡಿರುವೆ ಗೆಳೆಯನಿಲ್ಲದೆ "
ಹೀಗೆ, ಶೈಲಿ ಸರಳವಾಗಿದ್ದರೂ ಒಪ್ಪಿಸುವ ಪರಿ ಸೊಗಸಾಗಿದೆ.
ಮತ್ತೆ ಮತ್ತೆ ನಿಮ್ಮ ಬ್ಲಾಗಿಗೆ ಇಣುಕಿ ಹಳೇ ಪೋಸ್ಟ್ಗಳನ್ನು ಓದುತ್ತೇನೆ.
ನನ್ನ ಬ್ಲಾಗಿಗೂ ಒಮ್ಮೆ ಬನ್ನಿ ಮಾನಸ ಅವರೇ.
- Badarinath Palavalli
Sr. Cameraman / Kasthuri Tv / Bengaluru
Please visit my Kannada Poetry blog:
www.badari-poems.blogspot.com
Your valuable comments are path finder for me
ಮಾನಸ ಯಾವಾಗಲೂ ನಕ್ಕೊತಾನಾ ಇರ್ರಿ .ಕವನ ಛಂದ ಐತಿ.ಅಣ್ಣಾವ್ರ ಹಾಡ ನೆಪ್ಪು ಬಂತು.ತಪ್ ತಿಳೀ ಬ್ಯಾಡ್ರಿ ಮತ್ತ.
'ಬಾಳಬೇಕಾದ ಹೂವಾ ,ಬಾಡೋ ಆಸೀ ಎದಕಾ'ನಮಸ್ಕಾರ.
@ ಈಶ್ವರ್,
ನಿಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು :)
@ ಗೌತಮ್ ಹೆಗಡೆ ,
ಸುಮ್ನೆ ಹೊಸದೊಂದು ಪ್ರಯತ್ನ .. ನನ್ನ ಎಂದಿನ ಭಾಷೆಗೆ ಮರಳಿ ಬರ್ತೀನಿ :)
@ ತೇಜಸ್ವಿನಿ ಹೆಗಡೆ
ಥ್ಯಾಂಕ್ಸ್ ಸಾಲು ಮೆಚಿದಕ್ಕೆ :)
@ ಜಲಾನಯನ (ಆಜಾದರೆ ),
ಎನಿಲ್ಲರೀ ... ಸುಮ್ನೆ ಕವನ ಟ್ರೈ ಮಾಡೋಣ ಅಂತ ... ಕಲ್ಪನೆ ಇಂದ ಬರದದ್ದು :) ಥ್ಯಾಂಕ್ಸ್ ಕಾಮ್ಮೆಂಟ್ಗೆ
@ ಸವಿಗನಸು (ಮಹೇಶ್ ಅವರಿಗೆ ),
ಥ್ಯಾಂಕ್ಸ್ ಫಾರ್ ದಿ ಕಾಮೆಂಟ್...
@ ಬದರಿನಾಥ್ ಪಳವಲ್ಲಿ ,
ಹೌದ್ರೀ ನನದು ಉತ್ತರ ಕರ್ನಾಟಕ . ಬ್ಲಾಗ್ ವಿಸಿಟ್ ಮಾಡಿದಿ ನಿಮ್ಮ ಅನಿಸಿಕೆ ತಿಲಸಿದ್ದಕ್ಕೆ ತುಂಬಾ ಥ್ಯಾಂಕ್ಸ್ :)
@ ಡಾ.ಕೃಷ್ಣಮೂರ್ತಿ ಹೆಗಡೆ ,
ತಪ್ಪ ಯಾಕ್ರೀ ತಿಳಕೋಲಿ ... ಕವನ ಮೆಚಿದಕ್ಕೆ ಧನ್ಯವಾದಗಳು :)
Manasa.,
ಮಧುರವಾಗಿದೆ..
.. ಅದಕ್ಕೆ ಹೂವೆಂದಿತು ಕೇಳೆ ಕುಸುಮ ನಾ ಕೂಡ ಬಾಡಿರುವುದು ನಿನ್ನಂತೆ ವಿರಹದಲಿ.."
GnanarpaNamastu, OH ho, good nimma eradu saalu kuda chenaagide :)
ಭಾಳ ಚೆ೦ದ ಅದವ್ವ ಪದ್ಯಾ!
ಪುರಾ ನಮ್ಮ ಭಾಶ್ಯಾಗ ಬ೦ದಿದ್ರ ಭೇಷ ಇರ್ತಿತ್ತ!!
ಸೀತಾರಾಂ ಸರ್,
ಒಂದು ಸಣ್ಣ ಪ್ರಯತ್ನ, ನನಗು ನಮ್ಮಕಡೆ ಕನ್ನಡದಲ್ಲೇ ಬರಿಬೇಕಂತಿತ್ತು...
ಥ್ಯಾಂಕ್ಸ್ ಬರಿಲಿಕ್ಕೆ ಟ್ರೈ ಮಾಡ್ತೀನಿ :)
ಕಾಮೆಂಟ್ ಪೋಸ್ಟ್ ಮಾಡಿ