ಮಂಗಳವಾರ, ಆಗಸ್ಟ್ 3, 2010

ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ

ಇತ್ತೀಚಿಗೆ ನನ್ನ ಭಾರತೀಯ ಗೆಳೆಯ ಒಬ್ಬ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ, ಅವನ ಮತ್ತು ಮತ್ತಿಸ್ಟು  ಜನಾ ಫಾರೆನ್ ಫ್ರೆಂಡ್ಸ್ ಜೊತೆ ಆದ ಸಂಭಾಷಣೆಯನ್ನ, ಆಡು ಭಾಷೆಯಲ್ಲಿ ಭಾರತದಲ್ಲಿರೋವರ ಪಾಶ್ಚಾತ್ಯ ಸಂಸ್ಕೃತಿ, ಸ್ವಚತೆ ಬಗ್ಗೆ ಆಡೋ ಮಾತುಗಳು ಕೂಡಾ ಮಿಕ್ಸ್ ಮಾಡಿ ಬರೆದಿದ್ದೇನೆ....

ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ...
ಅಯ್ಯೋ!! foreigners ಬಾಳ ಮುಂದ ಬಿಡ್ರಿ... ಏನೆಲ್ಲಾ ಕಂಡು ಹಿಡದಾರಿ, ಹೆಂಗೆಲ್ಲ ಮನಿ ಕಟಕೊಂಡಾರಿ... ಅಬ್ಬಬ್ಬಬ್ಬ!!! ಬ್ಯಾಸಗ್ಯಾಗ ತಣ್ಣನ ಗಾಳಿ, ಚಳಿಗಾಲದಾಗ ಬೆಚ್ಚಗೆ ಇರುಹಂಗೆ... ಏನೆಲ್ಲಾ ವ್ಯವಸ್ತೆ, ಏನ್ ಸ್ವಚತಾ... ಮೇಚ ಬೇಕರಿ... ಏನ್ ಶಾಣೆ ಅಂತಿರಿ...
ನಮಲ್ಲೆನರಿ ಮಂದಿ ಅಜ್ಞ್ಯಾನಿಗಳು... ಏನ್ ತಲಿನ ಇಲ್ಲ ಬಿಡ್ರಿ...

ಅಲ್ಲಿಯವರು ಮಕ್ಕಳಿಗೆ ಶಿಸ್ತು ಕಲಸೋದು ಅಂದರ ಮೆಚಬೇಕರಿ... ಏನ್ ನೀಟ್ ಅಂತಿರಿ ನಮ್ಮನಿಗೆ ಇತ್ತಿತಲಾಗ foreignನ್ಯಾಗ್ ಇದ್ದ ಬಂದ ಇಬ್ಬರು ಗಂಡಾ ಹೆಂಡತಿ ಅವರ ಮಕ್ಕಳನ್ನ ಕರಕೊಂಡು ಬಂದಿದ್ರು... ನಮ್ಮ ತಮ್ಮನ ಮಕ್ಕಳಿಗೂ ಅವರಿಗೂ ಹೊಲಸಿದರ... ಆ foreign ಮಕ್ಕಳು (ಆ ಜೋಡಿಗೆ ಇರೋ ಮಕ್ಕಳು) ಅವು foreign ಮಕ್ಕಳು ಆಗೊದವು ಮಾತಾಡ್ತಾ ಹೊಗಳ್ತಾ...ಛೆ ಛೆ ಛೆ ಏನ್ ನಾಜೂಕು, ಏನ್ ಕತಿ...

ಫಾರೆನ್ ಸಂಸ್ಕೃತಿ ನಮ್ಮದಾಗಿಸ್ಕೊಲಿಕ್ಕೆ ಬಾಳ ಹೊತ್ತೇನು ಹಿಡಿಯುದಿಲ್ಲ ಬಿಡ್ರಿ. ಅದ ಅವರಿಗೆ ನಮ್ಮ ಸಂಸ್ಕೃತಿ ಬಗ್ಗೆ ಓದಿ ತಿಳಕೊಂಡು ಅನ್ವಯಿಸಬೇಕು ಅಂದ್ರ ಒಂದು ಯುಗಾ ಕಳಿಬೇಕು. ನಾನೇನು ಅವರ ಸಂಸ್ಕೃತಿ ಬಗ್ಗೆ ಕೀಳರಿಮೆ ಮುಡಸ್ತಿಲ್ಲ. ಅವರದು ಸರಳ ಜೀವನ, ಯಾರ್ ಬೇಕಾದರೂ ಸರಳವಾಗಿ ಪಾಲಿಸಬಹುದು ಅಂತಾ. ಆತ್ಮೀಯತೆ ಕಡಿಮೆ, ಅವರ ಮನೆಗೆ ಹೋಗಬೇಕಿದ್ದರೆ ಮೊದಲೇ ಒಂದು ವಾರ ಮುಂಚೆ ಹೇಳಿ ಫ್ರೀ ಇದ್ದೀರಾ ನಾವು ಬರಬೇಕು ಅಂತಾ ಮಾಡಿದ್ವಿ ಅಂತೆಲ್ಲ ಕೇಳಿ/ಹೇಳಿ permission ತುಗೊಂಡು ಹೋಗಬೇಕು.

ದೂರದ ಬೆಟ್ಟ ನುಣ್ಣಗೆ... ಎಲ್ಲ ಕಡೆನು, ಅವರದೇ ಆದ ಸಂಸ್ಕೃತಿ... ಅಲ್ಲಿಯವರಿಗೆ ನಮ್ಮ ಸಂಸ್ಕೃತಿ ಬಗ್ಗೆ ಹೇಳಿ ನೋಡ್ರಿ. ಎಲ್ಲಿಲ್ಲದ ಆತ್ಮೀಯತೆ, ಪರಿಚಯ ಇಲ್ಲದಿದ್ದರೂ, ಬಾಗಿಲು ತಟ್ಟಿದಾಗ್ ಬಾಗಲ ತೆಗದು, ನೀರು ಬೇಕಿತ್ತೆನರಿ, ಎಲ್ಲಿಯವರು, ಎಲ್ಲಿ ಹೊಂಟಿದ್ರಿ... ವಿಚಾರಿಸಿ ಅವರ ತೋರಸೋ ಅಕ್ಕರೆ ಮುಂದೆ. ಇದ್ಯಾವ ಲೆಕ್ಕ... ಫೇಮಸ್ ಬರಹಗಾರ Francois Gautier ಭಾರತ ಬಗ್ಗೆ ಬರೆದಿರುವ ಲೇಖನಗಳು ಸೂಪರ್. ಸಮಯಾ ಸಿಕ್ಕಾಗ ಓದಿ ನೋಡಿ...

ನಮ್ಮಲ್ಲೇ ಹಿಂತಾ ಹಾಯ್ ಫಾಯ ಲೈಫ್ ಬೇಕು ಅವರಂಗ ಇರಬೇಕು, ಅದು ಸರಿ ಇಲ್ಲ, ಇದು ಸರಿ ಇಲ್ಲ... ಎಲ್ಲದಕ್ಕೂ ಸರಿ ಇಲ್ಲ... ಅದ ಇದ್ದಿದ್ರ ಮಸ್ತ ಇರ್ತಿತ್ತು... ಅದಕಿಂತಾ... ನಾವೇ ಅನುಸರಿಸ್ಕೊಂಡು ಹೋದರೆ, ಎಷ್ಟು ಚುಲೋ ಇರತೆತಿ ಅಲ್ಲವಾ... ನಿಜಾ ಜನಸಂಖೆ ಸಮಸ್ಯಯಿಂದಾ ಎಲ್ಲ ರೀತಿ ವ್ಯವಸ್ತೆ ಮಾಡೋದು, ಮಾಡಿದರು ಪಾಲಸೋದು ಎಷ್ಟು ಕಷ್ಟಾ.

ತಂದೆ ತಾಯಿಯನ್ನ ವಯಸ್ಸಾದ ಕೂಡಲೇ ವೃದ್ದಾಶ್ರಮಕ್ಕ ಸೇರಿಸಿ ಫಾರೆನ್ ಬಂದು ಇರೋದು ಸರಳ ಅನಿಸದವರಿಗೆ. ಅವರ ಜೊತೆ ಇದ್ದು, ಅವ್ವನ ಕೈ ಅಡುಗೆ, ಅಪ್ಪನ ಸಲಹೆ. ಮಕ್ಕಳಿಗೆ ಅಜ್ಜ, ಅಜ್ಜಿ ಪ್ರೀತಿ ಕೊಟ್ಟು ನೋಡಿ... ತಂದೆ, ತಾಯಿಯನ್ನ ವೃದ್ದಾಶ್ರಮಕ್ಕ ಸೇರಸಿ, ನಾನು ಇಷ್ಟು ದುಡ್ಡು ಕಳಸ್ತಿನಿ, ಯಾವದಕ್ಕೂ ನಮ್ಮನ್ನ ನೆನಸಿರಬಾರದು ಎಲ್ಲ ಅನುಕುಲಾನು ಮಾಡಿ ಬಂದೇನಿ... ವಯಸ್ಸಾದಾಗ ಅವರಿಗೆ ಬೇಕಾಗಿರೋದು ಆಸರೆ, ದುಡ್ಡಲ್ಲ... ನಮಗಾಗಿ ಅವರು ಪಟ್ಟ ಪರಿಶ್ರಮ, ನೋವಿದ್ದರೂ ಎಲ್ಲಿ ನಮ್ಮ ಓದಿಗೆ ಎಫೆಕ್ಟ್ ಆಗುತ್ತೋ ಅಂತ ಸಮಸ್ಯ ಅನ್ನೋದು ನಮ್ಮ ಕಡೆ ಸುಳಿಯದ ಹಾಗೆ ನೋಡಕೊಂಡು. ಎಲ್ಲ ಬೇಕುಗಳನ್ನು ಇಡೆರಸೋದು. ಅಬ್ಬ!! ಬರಿತಾ ಹೋದರೆ ಒಂದೇ ಎರಡೇ. 

ನಿಜಾ ಫಾರೆನ್ ನಾವು ಬಂದಿರೋದು ಒಂದು ಒಳ್ಳೆ ವಿಧ್ಯಾಭ್ಯಾಸಕ್ಕೋ ಅಥವಾ ದುಡ್ಡು ಮಾಡುದುಕ್ಕೋ. ಆದರೆ ಅದೇನೇ ಇದ್ದರು 'ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ'.

16 ಕಾಮೆಂಟ್‌ಗಳು:

ಮನದಾಳದಿಂದ............ ಹೇಳಿದರು...

ಮಾನಸ ಮೇಡಂ,
ನಿಮ್ಮ ಮಾತು ನಿಜ, ಹೆತ್ತವರ ಪ್ರೀತಿ, ತನ್ನವರ ಬಂಧ, ಪ್ರೀತಿ ಅನುಭಂಧ ಯಾವುದರ ಬಗ್ಗೆಯೂ ಯೋಚಿಸದೆ ಕೇವಲ ತಾನಾಯಿತು ತನ್ನ ಕೆಲಸವಾಯಿತು ಎಂದು ಸುಮ್ಮನಿರುವ ವಿದೇಶಿ ಸಂಸ್ಕೃತಿ ಅದೇನು ಚಂದಾನೋ ಏನು ಕರ್ಮಾನೋ!
ನೀವೇನೋ ಅಲ್ಲಿದ್ದೀರಾ, ಆದರೆ ಅಲ್ಲಿ ಸಂಸ್ಕೃತಿಗೆ ಮಾರು ಹೋಗಬೇಡಿ:)
ಚಂದದ ಬರಹ....

ಸವಿಗನಸು ಹೇಳಿದರು...

ಸೂಪರ್ ಬರಹ....
ದೂರದ ಬೆಟ್ಟ ನುಣ್ಣಗೆ....

PARAANJAPE K.N. ಹೇಳಿದರು...

chennaagide

Manasa ಹೇಳಿದರು...

ಮನದಾಳದಿಂದಾ ಪ್ರವೀಣ ಸರ್, ನಾನು ಮಾರು ಹೋಗಿದ್ದಾರೆ ಈ ಲೇಖನ ಹೊರಬರುತಿರಲಿಲ್ಲ...
ನಮ್ಮ ಸಂಸ್ಕ್ರುತಿಯಬಗ್ಗೆ ಅರಿವು ಮುಡಿಸಿ ಭಲೇ ಭಾರತೀಯರು ಎನಿಸಿಕೊಂಡಿದ್ದೇವೆ :)

@ ಸವಿಗನಸು ಮಹೇಶ ಅವರೆ, ತುಂಬಾ ಧನ್ಯವಾದಗಳು ಪ್ರತಿಕ್ರಿಯೆಗೆ :)

@ ಪರಾಂಜಪೆ ಅವರೆ, ಧನ್ಯವಾದಗಳು ಬ್ಲಾಗ್ ವಿಸಿಟ್ ಮಾಡಿ ಪ್ರತಿಕ್ರಿಯಿಸಿದಕ್ಕೆ :)

ಮನಮುಕ್ತಾ ಹೇಳಿದರು...

ನೀವು ಬರ್ದಿದ್ದು..ಖರೆ.. ಅದ..ಚೊಲೋ ಬರ್ದಿರ್ರಿ..

ಸಾಗರದಾಚೆಯ ಇಂಚರ ಹೇಳಿದರು...

ಮಾನಸ,

ಸುಂದರ ಬರಹ ರೆ
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ

ನಿಜ ನಿಜ

ಮನಸಿನಮನೆಯವನು ಹೇಳಿದರು...

ನಿಜಾರೀ..!

ಸೀತಾರಾಮ. ಕೆ. / SITARAM.K ಹೇಳಿದರು...

ಭಾಳ ಖುಷಿ ಆತ ನೋಡವ್ವಾ ಓದಿ!

Manasa ಹೇಳಿದರು...

@ ಮನಮುಕ್ತಾ, ತುಂಬಾ ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ... ನೀವು ಅಲ್ಪ ಸ್ವಲ್ಪ ನಮ್ಮ ಕಡಿ ಕನ್ನಡ ಮಾತಾಡ್ಲಿಕತ್ತಿರಿ ;)
@ಸಾಗರದಾಚೆಯ ಇಂಚರ (ಗುರುಅವರೆ), ತುಂಬಾ ಥ್ಯಾಂಕ್ಸ್ ಕಾಮೆಂಟ್ ಗೆ.
@ ಕತ್ತಲೆ ಮನೆ, ಕನಸಿನ ಮನೆ, ಮುಂದೆ ಯಾವ ಮನೆ ಆಗತಿರೋ... ತುಂಬಾ ಥ್ಯಾಂಕ್ಸ್ ಕಾಮೆಂಟ್ ಗೆ :)
@ ಸೀತಾರಾಂ ಸರ್, ನಿಮಗೆ ಖುಷಿ ಆಗಿದ್ದು ಓದಿ ನನಗು ಖುಷಿ ಆತು ನೋಡ್ರಿ... ಧನ್ಯವಾದಗಳು ಕಾಮೆಂಟ್ ಗೆ :)

V.R.BHAT ಹೇಳಿದರು...

ಬಾಳಾ ಚೆನ್ನಾಗೈತ್ ಬಿಡ್ರಿ ನೀವು ಹೇಳಿದ್ದು, ನಾನೇನೋ ನಿಮ್ ಬ್ಲಾಗ್ ಗ ಹೊಸಬ ಏನ್ ಅಲ್ಲ ಅನ್ನಸ್ತೆತಿ, ಧಾರವಾಡ್ಡ ಕಡಿ ಮಾತು ಸಲ್ಪು ಅಭ್ಯಾಸ ಐತ್ರಿ ಏನ್ರಪಾ ! ನಿಮ್ ಮಾತ್ ಮಾತ್ರ ಖರೇ ಅದ ತಗೋರಿ! ಶರಣ್ರೀ ನಿಮ್ಗ

ಜಲನಯನ ಹೇಳಿದರು...

ಮಾನಸಾ..ನಿಜ ನಿನ್ನ ಮಾತು...ದೂರದ ಬೆಟ್ಟ ನುಣ್ಣಗೆ ಅನ್ನೋದು...ಅಲ್ಲದೇ..ಗೊತ್ತೇ ಇರೊಲ್ಲ ಏನು ಮಾತನಾಡ್ತಾರೆ ಆ ಅಂಧನಂಬಿಕೇಯಲ್ಲಿ...ಒಬ್ಬರು ಸುಮಾರು ವಿದ್ಯಾವಂತರೇ..ಸುಮಾರು ೨೦-೨೫ ವರ್ಷದಿಂದ ಅಮೇರಿಕಾದಲ್ಲಿರೋವರ ೧೦ ವರ್ಷದ ಮಗು ಗಳ-ಗಳ ಇಂಗ್ಲೀಷಲ್ಲಿ ಮಾತನಾಡಿದ್ದು ನೋಡಿ..."ಅಲ್ಲಾ ಆ ಸಣ್ಣ ಮಗು ಅಷ್ಟು ನಿರರ್ಗಳವಾಗಿ ಇಂಗ್ಲೀಷನಲ್ಲಿ ಮಾತನಾಡುತ್ತಲ್ಲ...ನಮ್ಮ ಹುಡ್ಗ ಪಿಯೂಸಿ ಮುಗ್ಸಿ ಕಾಲೇಜ್ ಸೇರಿದ್ದಾನೆ ನೆಟ್ಟಗೆ ನಾಲ್ಕು ವಾಕ್ಯ ಹೇಳೋಕಾಗೊಲ್ಲ...." ಎಲ್ಲಿಂದೆಲ್ಲ್ಲಿಯ ಹೋಲಿಕೆ...ಕುಂತ್ರೆ ನಿಂತ್ರೆ ಇಂಗ್ಲೀಷ್ಮಯ ಪರಿಸರ ಎಲ್ಲಿ....ಇಂಗ್ಲೀಷ್ ಮೀಡಿಯಂ ಆದ್ರೂ ಕನ್ನಡದಲ್ಲಿ ಅರ್ಥ ಹೇಳ್ತಾ ಸೈನ್ಸ್ ಕಲಿಸೋ ನಾವೆಲ್ಲಿ..ಅಷ್ಟಕ್ಕೂ ಸೈನ್ಸ್ ಕನ್ನಡದಲ್ಲಿ ಕಲೀಯೋಕೆ ಸಾಧ್ಯವೇ ಇಲ್ಲ ಅಂತ ಕುರುಡು ನಂಬಿಕೆಯಿರೋ ನಮಗೆ..ಎರಡೂ ಭಾಷೆ ಕಡೆಗೆ ಪರಕೀಯ ಆಗುತ್ವೆ...ಚನ್ನಾಗಿದೆ ಲೇಖನ...

Manasa ಹೇಳಿದರು...

ಆಜದರೆ, ಫಾರೆನ್ ಅಂತೇಳಿ... ನಮ್ಮಲ್ಲಿ ಭಿಕ್ಷದವನು ಇಂಗ್ಲಿಷ್ ನಲ್ಲೆ ಮಾತಾಡೋದು ಅಂತಾ ಇತ್ತೀಚಿಗೆ ವಿದೇಶಕ್ಕೆ ಹೋಗಿ ಬಂದಿರೋರು ಹೇಳಿದ್ದು ಕೇಳಿ... ನಕ್ಕು ನಕ್ಕು... ಸಾಕಾಗಿತ್ತು... ಅದರ ಆಧಾರಿತವಾಗಿ ಬರೆದದ್ದು ... ನಿಮ್ಮ ಅನಿಸಿಕೆಗೆ ತುಂಬಾ ಧನ್ಯವಾದಗಳು :)

Manasa ಹೇಳಿದರು...

@ V R Bhat, sir... namma bhashe adeno ondu khushi kodutte nanage barilikke... tumbaa thanks... comment ge :)

Badarinath Palavalli ಹೇಳಿದರು...

ಬರಹ ಮನಮುಟ್ಟುವಂತಿದೆ. ಹೊರ ನಾಡಿನಲ್ಲಿದ್ದೂ ಇನ್ನೂ ಕನ್ನಡದಲ್ಲೇ ಬರೆಯುವ ನಿಮ್ಮ ಪ್ರೀತಿಗೆ ಶರಣು.

ನನ್ನ ಬ್ಲಾಗಿಗೂ ಬನ್ನಿ ಮೇಡಂ.

Manasa ಹೇಳಿದರು...

@ Bhadarinath Palavalli,

dhanyawaadagaLu nimma pratikriyege... east or west India is the best :)

Rajesha V S ಹೇಳಿದರು...

Really nice nim bashe chennagide..