ಭಾನುವಾರ, ನವೆಂಬರ್ 14, 2010

ನಮ್ಮೂರ ಕಡಿ ಸೋಬಾನೆ ಪದಾ

ನಮ್ಮೂರ ಕಡಿ ಸೋಬಾನೆ ಪದಾ...

ಮಾಳಿಗೆ ಮನಿ ಬೇಕು
ಜೋಳಿಗೆ ವನ ಬೇಕು
ಬಸವರಾಜ ದೇವರಂತ ಮಗಬೇಕು
ಬಸವರಾಜ ದೇವರಂತಾ ಮಗಬೇಕು
ಈ ಮನಿಗೆ ಕಿತ್ತೂರು ಚೆನ್ನಮ್ಮನಂತಾ ಸೋಸೇಬೇಕು

ಮಗಳು ಹೆಣ್ಣು ಹಡಿಯಲಿ
ಸೊಸೆಯೂ ಗಂಡ ಹಡಿಯಲಿ
ಏಳುರ ಎಮ್ಮಿ ಕರಿಯಲಿ
ಏಳುರ ಎಮ್ಮಿ ಕರಿಯಲಿ
ಈ ಮನಿಗೆ, ಸಡಗರ ನೋಡಾಕ ಶಿವ ಬರಲಿ

ಅಕ್ಕ ನಾಗಮ್ಮನ ವನಕ ತೊಟ್ಟಿಲ ಕಟ್ಟಿ
ಚೆನ್ನ ಬಸವಣ್ಣನಿಟ್ಟು ತುಗಿರಿ

14 ಕಾಮೆಂಟ್‌ಗಳು:

Unknown ಹೇಳಿದರು...

nce one :)

ಸೀತಾರಾಮ. ಕೆ. / SITARAM.K ಹೇಳಿದರು...

ಚೆಂದದ ಸೋಬಾನೆ ಪದ ಸಂಗ್ರಹಿಸಿದ್ದಿರಾ.. ಧನ್ಯವಾದಗಳು.

Manasa ಹೇಳಿದರು...

@ arya_forU (Vinaya), thank you :)

@ SITARAM.K, thanks kaaka :)

ಕಾಂತೇಶ ಹೇಳಿದರು...

ಭಾಳ ಛಲೋ ಬರ್ದಿರಿ.. ಬರ್ತಾ ಬರ್ತಾ ನಮ್ಮ್ ಜಾನಪದಗೊಳ ಕೆಳಾಕ್ ಸಿಗವಾಲ್ಲುರಿ..ಹಿಂಗ ನಿಮ್ಮಂಥವ್ರು ಬರಿಬೆಕ್ರಿ..

shivu.k ಹೇಳಿದರು...

ಮಾನಸ ಮೇಡಮ್,

ನಿಮ್ಮೂರಿನ ಭಾಷೆಯ ದಮ್ ಅಂದ್ರೆ ಇದೇ ಅಲ್ಲವೇ..ಚೆಂದದ ಸೋಬಾನೆ ಪದವನ್ನು ರಾಗವಾಗಿ ಕೇಳಿದರೆ ಮತ್ತೂ ಖುಷಿಯಲ್ಲವೇ...

KalavathiMadhusudan ಹೇಳಿದರು...

sobaane pada tumba sogasaagide manasaravare.

Manju M Doddamani ಹೇಳಿದರು...

ಏನೋ ಒಂಥರಾ ಚನ್ನಾಗಿದೆ ಇದನ್ನ ನಿಮ್ ಬಾಯಲ್ಲಿ ಕೇಳಿದ್ರೆ ಇನ್ನು ಚನ್ನಾಗಿರುತ್ತೆ :)

V.R.BHAT ಹೇಳಿದರು...

ಜನಪದರು ಕಟ್ಟಿದ ಸೋಬಾನೆ ಹಾಡುಗಳಲ್ಲಿ ದಾಟಿಯೊಂದೇ ಮುಖ್ಯ ವಿನಃ ವ್ಯಾಕರಣ, ಛಂದಸ್ಸು ಪರಿಗಣಿತವಲ್ಲ, ಬಾಯಿಂದ ಬಾಯಿಗೆ ಹಬ್ಬುತ್ತ ಹಾಡಲ್ಪಟ್ಟ, ಹಾಡಿ ಸಂತಸನೀಡಲ್ಪಟ್ಟ, ಇಂದಿಗೂ ಬಳಸಲ್ಪಡುತ್ತಿರುವ ಅದ್ಬುತ ಶೈಲಿಯಲ್ಲಿ ಜನಪದ್ ಶೈಲಿಕೂಡ ಒಂದು, ಕವನ ಚೆನ್ನಾಗಿದೆ, ಇನ್ನಷ್ಟು ಇಂತಹ ಹಾಡುಗಳು ನಿಮ್ಮಿಂದ ಹೊರಬರಲಿ, ಸಾಧ್ಯವಾದರೆ ಧ್ವನಿಮುದ್ರಿಕೆಗಳೊಂದಿಗೆ ಬರಲಿ, ಹಾರ್ದಿಕ ಶುಭಕಾಮನೆಗಳು, ನಮಸ್ಕಾರ

Unknown ಹೇಳಿದರು...

ಚೆಂದದ ಸೋಬಾನೆ ಪದ...

ಜಲನಯನ ಹೇಳಿದರು...

ಸೋಬಾನ ಸೋಬಾನ್ ಸೋಬಾನವೇ
ಸೋಬಾನ ಎಂಬೋದು ಸಿರಿ ಗೌರಿಗೆ....
ಮಾನಸಾ..ಏನು? ಸಂ-ಶೋಧನೆ ಬಿಟ್ಟು ಸೋಬಾನ ಪದ ಕಳೀತಿದೀಯಾ...?? ಸರಿಹೋಯ್ತು...
ಆದ್ರೂ ಸೂಪರ್ ಪದಗಳು..ಇನ್ನೂ ಹಾಕು ಒಂದಷ್ಟು..

Manasa ಹೇಳಿದರು...

@ಕಾಂತೇಶ್, ಮರೆಯಾಗುತ್ತಿರುವ ನಮ್ಮ ಸಂಸ್ಕೃತಿ ಯನ್ನು ಮರಳಿ ತರುವುದರಲ್ಲಿ ನನ್ನದೊಂದು ಚಿಕ್ಕ ಪ್ರಯತ್ನಾ ಅಸ್ಟೇ.. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ :)

@ ಶಿವೂ ಕೆ, ಹು ಸರ್, ನಾ ಇಂಡಿಯಾ ಹೋದಾಗೆಲ್ಲ ಅಲ್ಲಿ ಇಲ್ಲಿ ಕೇಳಿ ಆದಷ್ಟು ಸಂಗ್ರಹಿಸಲು ಪ್ರಯತ್ನಿಸುತ್ತೇನೆ, ಅಷ್ಟಾಗಿ ನನಗೆ ಜನಪದ, ಸೋಬಾನೆ ಎಲ್ಲವು ತುಂಬಾ ಇಸ್ತಾ... ಹಾಗೆ ನಮ್ಮೂರ ಭಾಷೆ, ನಿಜಾ ಈ ಸಾರಿ ಬಂದಾಗ ರಾಗ ಸಮೇತ ಹಿಡಿಯಲು ಯತ್ನಿಸುವೆ .ತುಂಬಾ ಥ್ಯಾಂಕ್ಸ್ ನಿಮ್ಮ ಸಲಹೆಗೆ:)

@ ಕಲರವ, ಧನ್ಯವಾದಗಳು :)

@ Doddamanimanju, ಹು, ಪ್ರಯತ್ನಿಸುವೆ ಮಂಜು ಅವರೇ ;)

@ವಿ ಆರ್ ಭಟ್, ಸರ್, ರಾಗ ಮತ್ತೆ ಅರ್ಥ ತುಂಬಾ ಇರತ್ತವೆ ಸೋಬಾನೆ ಪದಗಳಲ್ಲಿ... ಬಾಯಿಂದಾ ಬಾಯಿಗೆ ಹಬ್ಬಲಪಟ್ಟ ಈ ಹಾಡುಗಳು ಭಾಷೆ ಕೂಡಾ ಬದಲಿಸುತ್ತ ಹೋಗುತ್ತವೆ. ಕೇಳೋಕೆ ತುಂಬಾನೇ ಹಿತವಾಗಿರುತ್ತವೆ. ನೋಡಬೇಕು ರಾಗ ಸಮೇತಾ ಹಾಕಲು ಯಾವಾಗ ಆಗುತ್ತೋ.. ತುಂಬಾ ಧನ್ಯ ವಾದಗಳು ನಿಮ್ಮ ಅನಿಸಿಕೆ ಮತ್ತು ಸಲಹೆಗೆ :)

@ Vasudhesh, thanks :)

@ ಜಲನಯನ, ಅಜದರೆ, ಇದು ಹಾಗೆ ಸ್ವಲ್ಪ ನನಗೆ ಹವ್ಯಾಸ ಜನಪದ ಮತ್ತೆ ಸಂಸ್ಕೃತಿ ಮೆರೆಸುವ ಸೋಬಾನೆ ಪದಗಳು... ನೆನಪಿದಸ್ಟು ಕೆಲಿದಸ್ತು ಬರೆದಿರುತ್ತೇನೆ :)

Ishwar Jakkali ಹೇಳಿದರು...

Good one ...
BaLa chenda aiti sobana pada ..

Manasa ಹೇಳಿದರು...

@ Ishwar, thank you :)

ಅನಾಮಧೇಯ ಹೇಳಿದರು...

nice song great