ಮಂಗಳವಾರ, ಡಿಸೆಂಬರ್ 21, 2010

ಸಣ್ಣ ಕಥೆಗಳು ಭಾಗ ೧

ನಾ ಕನ್ಯಾ ನೋಡಾಕ ಹೋದಾಗ ಹುಡಗಿಗೆ ಎಲ್ಲ ಬರತೆತಿ ಅಂತ ಹೇಳಿದರು ನೋಡ್ರಿ, ಹತ್ತನೇ ಕ್ಲಾಸ್ ಓದ್ಯಾಳ, ಅಸ್ಟಿಸ್ಟು ಇಂಗ್ಲಿಷ್ನು ಬರತೆತಿ ಅಂತಂದರು, ನಾನು BA ಮುಗಸೆನಿ ಇಬ್ಬರಿಗೂ ಒಳ್ಳೆ ಜೋಡಿ ಆತು ಅಂತ, ಹು ಅಂದೇ. ಹಂಗ ಲಗ್ನಾ ನು ಮಾಡಕೊಂಡೆ. ದಿನಾ ಇಬ್ಬರು ಕೂತು ಟಿವಿ ನೋಡತಿದ್ದವಿ, ಮನೆತನದ ಬಗ್ಗೆ ಮಾತು, ನಮ್ಮ ಮನೆಯವರನೆಲ್ಲ ಆಕಿಗೆ ನನ್ನ ಮಾತಿಂದಾ, ಆಕಿ ತನ್ನ ಮಾತಿನ್ದಾನೆ ಪರಿಚಯ ಮಾಡಿಸಿದ್ಲು. ಹಿಂಗ ಒಬ್ಬರಿಗೊಬ್ಬರು ಮನೆಕೆಲಸದಲ್ಲೂ ಆಸರೆ ಆಗಿದ್ದವಿ. ಗಿಡಮೂಲಿಕೆ ಔಷದಿ ಮಾಡೋದರಲ್ಲಿ ಆಕಿದು ಎತ್ತಿದ ಕೈ ಬಿಡ್ರಿ, ಹಿಂತಾ ಸೊಪ್ಪು ಇದಕ್ಕೆ ಉಪಯೋಗ ಅಂತಾ ನೋಡಿದಕುಡಲೇ ಹೇಳಾಕಿ. ನನಗ ಆಕಿ ಅಸ್ಟು ತಿಳಕೊಂಡಿದ್ದು ನೋಡಿದರ ಸೋಜಿಗ ಆಗುದು. ಊರಿನವರಿಗೆಲ್ಲ ಔಷದಿ ಮಾಡಾಕಿ ಗಿಡಮೂಲಿಕೆ ಇಂದಾನೆ.

ನಾ ಅಂತು ಬಹಳ ಸಂತೋಷದಲ್ಲಿದ್ದೆ ನೋಡ್ರಿ, ಎಲ್ಲ ಭಾಗ್ಯ ನನಗೆ ಸಿಕ್ಕತು ಅಂತಾ...ಹಂಗ ಅಡಗಿ ಮಾಡುದರಾಗು ಎತ್ತಿದ ಕೈ ಆಕಿದು, ನಾನಾ (ಬಗೆ ಬಗೆಯ) ತರದ ಅಡಗಿ ಮಾಡಾಕಿ, ಉಂಡು ನಾ ಅಂತು ಗುಂಡ ಕಲ್ಲು ಆಗಿದ್ದೆ. ಉಂಡ ಕೈ ಮುಸಿ ನೋಡಿ ಕೊಂಡರ, ಮತ್ತ ಹೊಟ್ಟಿ ಹಸಿದು.

ಹಿಂಗ ಒಂದು ದಿನಾ ವಿಚಾರ ಮಾಡ್ತಿದ್ದೆ, ಎಲ್ಲ ಸೈ, ಇಕಿ ತನ್ನ ಸಾಲಿ ಬಗ್ಗೆ ಎಂದು ಮಾತ ಆಡಂಗಿಲ್ಲ, ಎಲ್ಲರು ಹೇಳಕೊತಾರ, ನನ್ನ ಗೆಳತಿಯರು ಹಂಗ, ಮಾಸ್ತರು ಇವರಿದ್ದರು, ಕುಣಿತಾ, ಆಟಾ ನಾ ಭಾಗ ವಹಿಸಿದ್ದು, ಪ್ರಶಸ್ತಿ ಸಿಕ್ಕಿದ್ದು... ಇಕಿ ಅದರ ಬಗ್ಗೆ ಏನು ಹೇಳಂಗೆ ಇಲ್ಲ. ಮತ್ತ ನಾ ದಿನಾ ಪೇಪರ್ ಓದಬೇಕಾರ, ನನ್ನಿಂದಾನೆ ಅಲ್ಲಿ ಏನಾತು, ಇಲ್ಲಿ ಏನಾತು ಅಂತಾ ತಿಳಕೊತಾಳ, ತಾ ಎಂದು ಪೇಪರ್ ಹಿಡಕೊಂಡು ಅಥವಾ ನಾ ಪೇಪರ್ ಓದಬೇಕಾರ ಆಕಿ ಎಂದು ಬಂದು ಹಣಿಕಿ ಹಾಕ್ತಿರಲಿಲ್ಲ. ಹಾಗೆ ಇರೋದು ಹೆಣ್ಣ ಮಕ್ಕಳ ಸ್ವಭಾವನ ಅಲ್ಲಾ ಬಿಡ್ರಿ ಮತ್ತ... ಹಿಂಗ ಒಂದಿನಾ ನಾ ಬಾ ಇಲ್ಲೇ, ಏನೋ ಮನಿ ಮದ್ದು ಅಂತಾ ಔಷದಿ ಬಗ್ಗೆ ಕೊಟ್ಟಾರ ಪೇಪರ್ನ್ಯಾಗ (ಪೇಪರ್ ನಲ್ಲಿ) ಒಂದು ಬುಕ್ ತುಗೊಂಡು ಬಂದು ಎಲ್ಲಾನು ಪಟ್ಟಿ ಮಾಡ್ಕೋ, ನಮಗ ಉಪಯೋಗಾ ಆಕೆತಿ ಅಂತಂದ್ಯ ( ಅಂತಾ ಹೇಳದೆ). ಹುಂ, ಬಂದೆ ತಡಿರಿ ಅಂತಾ ಅಡಗಿ ಮನಿಗೆ ಹೋದ್ಲು, ನಾನು ಬರತಾಳೇನು ಅಂತಾ ಕಾಯಕೊಂತ ಮತ್ತ ಮತ್ತ ಪೇಪರ್ ತಿರವಿ ಹಾಕ್ತಿದ್ದೆ... ಚಹಾ ಹಿಡಕೊಂಡು ಬಂದ್ಲು.

ನಾ ಬುಕ್ ತುಗೊಂಡು ಬಾ ಅಂದ್ರ, ನಿ ಚಹಾ ತಂದು ಕೊಟ್ಟಿ, ಪೇಪರ್ ರದ್ದಿಗೆ ಹೊದರ ಮತ್ತ ಬರಕೊಳಾಕ ಸಿಗಂಗಿಲ್ಲ ಅಂತಂದೆ. ಎಷ್ಟು ದಿನಾ ಅಂತಾ ಸುಳ್ಳು ಹೊರಗೆ ಬರದೆ ಇರತೆತಿ. ಆಕಿ ತನ್ನ ಸಣ್ಣ ದ್ವನಿಲೇ... ಇಲ್ಲನೋಡ್ರಿ, ನನಗ ಓದಾಕ, ಬರಿಯಾಕ ಬರಂಗಿಲ್ಲ, ನಮ್ಮ ಅಪ್ಪ ನಿಮಗ ಸುಳ್ಳು ಹೇಳ್ಯಾರು ಅಂದ್ಲು... ಗುಡ್ಡ ಕಡಕೊಂಡು ತಲಿ ಮ್ಯಾಲೆ ಬಿದ್ದಂಗ ಆತು. ಸಾಕಷ್ಟು ಹೊಡದೇ, ಹೆಣ್ಣು ಏನ್ ಮಾಡಿತು ಹೋಡಸ್ಕೊಂಡು, ಎರಡ ದಿನಾ ಹಾಸಗಿ ಹಿಡದ್ಲು.

ಮುಂದುವರೆಯುವುದು....

3 ಕಾಮೆಂಟ್‌ಗಳು:

Unknown ಹೇಳಿದರು...

ಚೆನ್ನಾಗಿದೆ ನಿಮ್ಮ ಸಣ್ಣ ಕಥೆ ,ಬದುಕಿನ ತಿರುವುಗಳನ್ನ ಹೇಳಹೊರಟಿದ್ದಿರಿ.ಹಾಗೆ ಕಥೆಗೂ ಒಳ್ಳೆಯ ತಿರುವು ಮುಂದಿನ ಭಾಗದಲ್ಲಿ ಸಿಗಲಿದೆ ಅಂದುಕೊಳ್ಳುತ್ತೇನೆ.ಮುಂದುವರೆದ ಭಾಗದ ನಿರೀಕ್ಷೆಯಲ್ಲಿ

ಸೀತಾರಾಮ. ಕೆ. / SITARAM.K ಹೇಳಿದರು...

kathe kutuhalavaagide. munduvareyali...

ಕಾಂತೇಶ ಹೇಳಿದರು...

ಕಥಿ ಮಜಾ ಐತ್ರಿ.. plz ಉಳಿದಿದ್ದು ಲಗುಟ ಬರ್ದು post ಮಾಡ್ರಿ.. :)