ಗುರುವಾರ, ಏಪ್ರಿಲ್ 1, 2010

bharata pravaas

ಮಾರ್ಚ್ ೫, ೨೦೧೦, ಮುಂಜೇನೆ ೪ ಘಂಟೆ... ಆಸ್ಟ್ರೇಲಿಯದಿಂದ ಬೆಂಗಳೂರು...  ಕೆಲಸ ಎಲ್ಲ ಮುಗನ್ಸೊಂಕುದು ಏನು ಬಾಕಿ ಬಿಡಲಂಗ, ೧೫ ದಿನ ರಜಾ ತುಗೊಂಡು... ಬ್ರಿಸ್ಬನೆ ಇಂದ ಸಿಂಗಪೋರ್ ಅಲ್ಲಿಂದ ದುಬೈ ಮತ್ತೆ ಬೆಂಗಳೂರು... ಹೋಗತಿದ್ದಂಗ ನಮ್ಮ ಅಣ್ಣ ವಿಮಾನ ನಿಲ್ದಾಣ ದಾಗ ನನ್ನ ದಾರಿ ನೋಡಕೊಂತ ನಿಂತಿದ್ದ... ಹೋಗತಿದ್ದಂಗ ನೋಡಿ ನನಗಂತೂ ಬಾಳ ಖುಷಿ ಆತು... ಹಂಗ ಇಬ್ಬರು ಸ್ವಲ್ಪ ಹೊತ್ತು ಮಾತಾದಕೊಂತ... ಅಲ್ಲೇ ವಿಮಾನ ನಿಲ್ದಾಣ ದಾಗ್ ಕಾಫಿ ಕುಡದು, ಅಲ್ಲಿಂದಾ ಸಿದಾ ಮುಂಜೆನಿ ೬ ಘಂಟೆ ಗಾಡಿ ಹಿಡಕೊಂಡು ಹುಬ್ಬಳ್ಳಿಗೆ....
  
ಹುಬ್ಬಳ್ಳಿ ರೈಲ್ವೆ ಸ್ಟೇಷನ್ ಸಮೀಪ ಬರತಿದ್ದಂಗ ಕರ್ಫು ಹಾಕಿದ್ದು ಗೊತ್ತಾತು ನೋಡ್ರೀ... ಈಗ ಮನಿಗೆ ಹೆಂಗ ಹೋಗುದು, ಅಣ್ಣ ಮತ್ತ ನಾನು ಇನ್ನು ಹುಬ್ಬಳ್ಳಿ ಬರಾಕ್ ೧ ತಾಸ ಇತ್ತು, ಏನ್ ಮಾಡುನು ಅಂತ ಇಬ್ಬರು ಮಾತಾಡಕೊಂತ ಕೂತಿದ್ವಿ... ನಮ್ಮ ಬಾಜು ಕುಂತ ಒಬ್ಬ ಹೆಣಮಗಳು ತನ್ನ ಮಗನಿಗೆ (ಸುಮಾರು ೫ ವರ್ಷದವ ಇರಬಹುದು)... ಇಲ್ಲೇ ಏನರ ತಿನ್ನು ಹುಬ್ಬಳ್ಳಿಗೆ ಹೊದರ ಏನು ಸಿಗಂಗಿಲ್ಲ ಕರ್ಫು ಹಾಕ್ಯರ, ಅವನೋ ಏ ಯೆನಬೆ ನೀನು ನನಗ ಹಸದಿಲ್ಲ ಅಂತ ನಾ ಅಂದ್ರ ಎಷ್ಟು ಜೋರ ಮಾಡತಿ, ಆಮೇಲೆ ಏನಾರ ಕೇಳ ನೋಡು ಅಂತ ಆ ತಾಯಿ. ನಾವಿಬ್ಬರು ಅವರ ಮಾತು ಕೇಳ್ತಾ ಅಲ್ಲೇ ಮುಸು ಮುಸು ನಕ್ಕೊಂತ, ಹಂಗ ಸ್ವಲ್ಪ ಆಕಡೆ ಹೋದರಾತು ಅಂತ ಹೊಂಟವಿ, ಅಲ್ಲಿ ಇನ್ನೊದು, ಏನ್ ಹುಬ್ಬಳ್ಳಿ ರೀ ದಾಂದಲೆ ಊರು, ಶಾಂತಿ ಅನ್ನೋದು ಇಲ್ಲ ನೋಡ್ರೀ, ಯಾರೋ ಇನ್ನೋಬರು ಅನ್ನೋದು ಕೇಳಸ್ತು ... ನನಗೋ ಇಲ್ಲದ ಸಿಟ್ಟು ಬಂತ್ ನೋಡ್ರೀ.. ಬಂದಿರುದು ೧೫ ದಿನ ಅದರಾಗ್ ಹಿಂಗ ಕರ್ಫು ಹಾಕೊಂಡು ಕುಂತರ ಏನ್ ಮಾಡೋದು, ಎಲ್ಲಿ ಹೋಗಲಿಕ್ಕು ಆಗಂಗಿಲ್ಲ, ಫ್ರೆಂಡ್ಸ್ ಭೇಟಿ ಆಗಬೇಕು, ಒಂದು ರೌಂಡ್ ನನ್ನ ಹಳೆ ಸ್ಕೂಲ್, ಕಾಲೇಜ್ ಎಲ್ಲಾ ನೋಡಾಕ್ ಹೋಗಬೇಕು ಏನೆಲ್ಲ ಆಸೆ ಇಟಕೊಂದು ಬಂದೀನಿ, ಏನಾಗುತ್ತೋ ಏನೋ... ಮನಸನ್ಯಾಗ ಹಂಗ ನೂರ ಎಂಟು ವಿಚಾರ... ಊರ ಸಮೀಪ ಬಂತು... ರಿಕ್ಷ ಎಲ್ಲ ಬಂದ... ಸ್ಟೇಷನ್ನಿಂದ ಹೊರಗ  ಬಂದ್ವಿ... ಅಲ್ಲೇ ಭಾವ ಆಗಲೇ ಬಂದು ನಿಂತಿದ್ರು... ಜೀಪ್ ಅಲ್ಲೇ ಇತ್ತು, ಸಿಪಿಐ ಇದ್ದದರಿಂದ ಹುಬ್ಬಳ್ಳಿ ಕರ್ಫು ಆಗಿದ್ದರಿಂದ ಅವರ ಡ್ಯೂಟಿ ಅಲ್ಲೇ ಹಾಕಿದರು... ನೋಡಿ ಬಾರಿ ಖುಷಿ ಆತು... ಸಿಪಿಐ ಭಾವ ನನ್ನ ಬರಮಾಡಕೊಲಕ ಸ್ಟೇಷನ್ಗೆ ಬಂದಾರು... ತಾವು ಮುಂದ ಕೂತು...ಹಿಂದಿನ ಸೀಟು ನಮಗೆ ಕೊಟ್ಟರು , ನಾನು ತಲೆ ತಿನ್ನೋಕ್ ಶುರು ಮಾಡಿದೆ.. ಅಲ್ರಿ  ಮಾಮಾರ, ನಿಮದು ರಾಯಭಾಗ್ ಪೋಸ್ಟ್ ಅದರ ಇಲ್ಲಿ ಹೆಂಗ ಹಾಕಿದರು, ಮತ್ತ ನಾನು ಬರು ಸುದ್ದಿ ನಿಮಗ್ಹೆಂಗ ಗೂತ್ತ ರೀ? ಅಕ್ಕ ಏನಾರು ಹೇಳಿದ್ಲೆನರೀ? ಮತ್ತ ಎಲ್ಲ ಆರಾಮ ರೀ? 

ಯಾವದಕ್ಕ ಉತ್ತರ ಮೊದಲ ಹೇಳಲಿ ನನ್ನ ನಾದಿನಿ?
ಮುದ್ದಾದ ನಾದಿನಿ ಬಳಿಗೆ ಬಂದರೆ ಅವಳ ಚೆಲುವು ನನ್ನ ಕಣ್ಣ ತುಂಬಿದೆ.... ನೂರಾರು ಬಂನನದ ಆಸೆ ಹಕ್ಕಿಯು ಎದೆಯ ಒಳಗೆ ರೆಕ್ಕೆ ಬೀಚಿ ಹಾರಿದೆ ... ಹಾಡೋಕೆ ಶುರು ಮಾಡಿದ್ರು... ನಾನು ಒಂದು ಸ್ಮೈಲ್ ಕೊಟ್ಟೆ  :) ...

ಅದೇ ಇವಾಗ್ ಇಂತದ್ದೆ ಊರು ಅಂತಿಲ್ಲ ಹೀಗೆ ಬೆಳಗಾವಿ, ರಾಯಭಾಗ, ಸುತ್ತಲು ಇವಾಗ್ ಡ್ಯೂಟಿ ಅಂದ್ರು... ಸರಿ ಬಿಡ್ರೀ ನನಗ ಚುಲೋ  ಆಯ್ತು ಮನೆಗೆ ಹೆಂಗ ಹೋಗುದು ಅಂತ ನಾನು ಅಣ್ಣ ಯೋಚಿಸ್ತಿದ್ವಿ ;) ...

ನಮ್ಮ ಮಾಮರ ಜೀಪ್ ನ್ಯಾಗ ಹತ್ತಿ ಮನಿಗೆ ಹೊಂಟ್ವಿ... ಹೊಗೊವಾಗ್ ಸಕತ್ ಮಜಾ... ನಮ್ಮ ಜೀಪ್ ನೋಡಿ ಜನ ಓಡೋದು, ಮರೆಯಾಗೋದು ನೋಡಿ ನಕ್ಕಿದ್ದೆ ನಕ್ಕಿದ್ದು... ಅದರಲ್ಲೂ ಡ್ರೈವರ್, ಸಾಹೇಬರ ನೋಡಿ ಜನ ಒಡತಿಲ್ಲರೀ,  ಅಮ್ಮವರೆ ನಿಮ್ಮನ ನೋಡಿ ಅಂದ... ಯಾಕ್ರಿ ಅಣ್ಣಾವ್ರೆ ಅಂತ  ಒಂದು ಸಾರಿ ನಕ್ಕೆ...ಪಾಪ ಜನಾ ಜೀಪ, ಪೋಲಿಸ್ ನೋಡಿ ಒಡೋರು...
ಮನೆ ಬಂತು... ಅವ್ವ, ಅಪ್ಪಾಜಿ, ಅಕ್ಕ, ಅಜ್ಜಿ, ಕಾಕ,ಕಾಕು, ತಂಗಿ, ತಮ್ಮಂದಿರು... ಎಲ್ಲರು ಬಾಗಿಲಿಗೆ  ಬಂದು ನಿಂತಿದ್ದರು...

ಒಂದ್ ಸತಿ ಎಲ್ಲಾರ್ನು ನೋಡಿ, ಮನಸ್ಸು ಹ್ಯಪ್ಪಿಯೋ ಹ್ಯಾಪಿ :)
ಆಗಲೇ ೩ ಘಂಟೆ ಆಗಿತ್ತು... ಹೋಳಿಗೆ ಊಟ ರೆಡಿ ಇತ್ತು.... ನಮ್ಮಲ್ಲಿ ಹೋಳಿಗೆ ಸಾರು ಬಾರಿ ಅದರಾಗ ಒಳನ್ಯಗ್ ರುಬ್ಬಿದ ಸಾಂಬಾರ್ ಮಸಾಲಿ ಬಾರಿ ಬಾರಿ... ಭಾವ ಊಟಕ್ಕೆ ರೆಡಿ ಆದರು, ಅಯ್ಯೋ ಇದೇನು ಭಾವ ಡ್ಯೂಟಿ ನಲ್ಲಿ ಇರಬೇಕಾರೆ... ಇನ್ನು ಮನೆಲ್ಲಿ ಇದ್ದಿರೀ ಅಂದೇ... ಹೋಗಬೇಕು ಊಟ ಮಾಡಿ ಅಂದ್ರು...ಒಹ್! ನೀವು ನಮನೆ ಸುತ್ತನೆ ಡ್ಯೂಟಿ ;) ... ಹು ಮತ್ತೆ ಇವಾಗ ಬ್ಯೂಟಿ ಬಂದಮೇಲೆ ಇನ್ನೆಲಿ ಡ್ಯೂಟಿ ನಿಮ್ಮನೆ ಬಾಗಿಲು ಕಾಯೋದೇ ಡ್ಯೂಟಿ ಅಂದ್ರು :)
ಮೂರೂ ದಿವಸ ಅಲ್ಲೇ ಡ್ಯೂಟಿ... ಪಾಪ, ರಾತ್ರಿ, ಹಗಲು, ಉರಿ ಬಿಸಲು ಯಾವದು ಲೆಕ್ಕಿಸದೆ.. ಅದು ಬೇರೆ ಫೋನ್ ಹಂಗೆ ಹೋದಕೊತನೆ ಇರುತ್ತೆ, ಒಂದು ತಾಸ ಸತೆಕ್ ಅವರು ನಮ್ಮಕುಡ ಕಳಿಲಿಲ್ಲ, ಆ ಹೋಳಿಗೆ ಉಂಡ ದಿನ ಬಿಟ್ಟರ...
ಕಾಲಿಂಗ್ ಕಂಟ್ರೋಲ್ ರೂಮ್ ... ಎಲ್ಲದಿರೀ, ಇಲ್ಲೇ ಇದು ಆತು , ಅದು ಆತು,  ಅಂತ ಹೋದಕೊತಾನೇ ಇರ್ತಿತ್ತು...
 ಇದೆಲ್ಲದರೆ ನಡು ಮತ್ತ ನನ್ನ ಕರಕೊಂಡ ಹೋಗಾಕ, ಸ್ಟೇಷನ್ ಬಂದಿದ್ರು... ಎಂತ ಖುಷಿ... ಇಲ್ಲಿ ಬಂದಕೂಡಲೇ... ಎಲ್ಲರನು ನೆನಸೋದು, ಒಬ್ಬಳೇ ನಗೋದು...
ಏನಾದ್ರೂ ನಮ್ಮುರೆ ಚೆಂದಾ :)

11 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಮಾನಸ
ನಿಮ್ಮ ಊರಿನ ಬಗ್ಗೆ ಹೇಳಿ ನನಗ ನಮ್ಮೂರಿನ ನೆನಪು ಮಾಡಿಬಿಟ್ರಿ
ಭಾಳ ಚಂದ್ ಬರಿದಿರಿ
ನಿಮ್ಮ ಭಾಷಿ ಸೊಗಡು ಭಾಳ ಚಂದ್ ಐತ್ರಿ
ಭಾರತ ಪ್ರವಾಸದ ಮಜಾನೆ ಬೇರೆ ರೀ

ಸವಿಗನಸು ಹೇಳಿದರು...

ಮಾನಸ,
ಭಾರತ ಪ್ರವಾಸ ಅಂದ್ರೆ ಮಸ್ತ್ ಮಜಾ ಮೋಡಿ ಎಲ್ಲಾ ಇರುತ್ತೆ...
ನಿಮ್ ಭಾಷಿ ಭಾಳ ಚಲೊ ಐತ್ರಿ....

Manasa ಹೇಳಿದರು...

@ ಗುರು ಮತ್ತೆ ಸವಿಗನಸು...


ಹು ರೀ ಭರತ್ ಪ್ರವಾಸ ಅಂದ್ರ ಹಂಗ ಇರತೆತಿ :) ... ನನ್ನ ಬರವಣಿಗಿ ಚುಲೋ ಅನಸಿದ್ದು ನೋಡಿ ನನಗು ಬಾಳ ಖುಷಿ ಆತರಿ... ಶರಣರಿ :)

Arkalgud Jayakumar ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಅರಕಲಗೂಡುಜಯಕುಮಾರ್ ಹೇಳಿದರು...

ಗಂಡುಮೆಟ್ಟಿದ ನಾಡಿನ ಹದವರಿತ ಭಾಷೆಯ ಬರಹ ಚೆನ್ನಾಗಿದೆ, ಅರ್ಥ ಮಾಡ್ಕೊಳ್ಳೋದು ಕಷ್ಟ ಆದ್ರೂ ಅರ್ಥ ಮಾಡ್ಕೋಳೋಕೆ ಪ್ರಯತ್ನಿಸ್ತಿನಿ. good writeup... keep writing

ದಿನಕರ ಮೊಗೇರ ಹೇಳಿದರು...

chalo aitree nimma baravaNigi........munduvarsalaa....

Manasa ಹೇಳಿದರು...

@ Arakalgud Jaykumar, thanks ree kasta pattu odi istapattu comment madidakke :) ... slow aagi odata hodare artha aagabahudu ankotini :)

@ Dinakar Mogare, baravanige mechidakke tumbaa thanks and thanks for visiting my blog... Nodonante enadru hinge topic bandre mund varastini :)

ಸೀತಾರಾಮ. ಕೆ. / SITARAM.K ಹೇಳಿದರು...

ಅತ್ತಿ ಮಾವನ ಜಗಳದಾಗ ಅಳಿಯ ಮಳ್ಳ ಆದ!
ತಮ್ಮ ಭಾರತ ಪ್ರಯಾಸ ಕೇಳಿ ನಕ್ಕಿದ್ದೆ ನಕ್ಕಿದ್ದು.
ನಿಮ್ಮ ಮಾವನ ಪೋಲಿಸನಿ೦ದ ಪೋಲಿ ಮಾಡೈ ಬಿಟ್ಟ್ಟ್ರೆಲ್ಲಾ ! ಯೇನೋ ಸೊಸಿಗೆ ಕರ್ಫ಼್ಯೂ ಗದ್ದಲದಾಗ ತ್ರಾಸ ಆಗಬಾರದು ಅ೦ತ ಮನಿ ಮುಟ್ಟಸಿದರ ಅವ್ರನ್ನಾ ಈ ರೀತಿಯೆನ್ರೀ ಕಾಡೊದು. ನಮಗ ಮಾತ್ರಾ ಭಾಳ ನಗು ಬ೦ತ್ರೆವ್ವಾ . ನಕ್ಕ ನಕ್ಕ ಹೊಟ್ಟ್ಯಾಗ ಹುಣ್ಣ ಆತ ಮತ್ತ.
ಹೋಳಿಗೆ ನೆನಸಿದ್ರೀ, ಅದರ ಕಟ್ಟ ಸಾರ ನೆನಸಿದ್ರೀ ನೆನಸಿ ನಮಗ ಹುಚ್ಚು ಹಿಡದ೦ಗಾಗ್ಯೆದ! ಜಲ್ದಿ ಮದ್ವಿ ಮಾಡಕೊ)ದ್ರ ನಮ್ದು ನಿಮ್ದು ಹುಚ್ಚು ಇಳಿತೈತೆರೆಲ್ಲಾ!
ಹೋಳಿಗೆ ಊಟ ಜಲ್ದೀ ಮಾದ್ಸುದು ಮರ್ರಿಬ್ಯಾಡ್ರಾ... ಮತ್ತ...
ಚೆ೦ದ ಅದರೀ ನಿಮ್ಮ ಕಥಿ
ಅದಕ್ಕ ನ೦ದು ಸ್ವಲ್ಪ್ ವಗ್ಗರ್ಣಿ ಹಾಕಿನ್ರೀ....
ಯೆನು ತಿಳೊಕೋಬ್ಯಾಡ್ರೀ ಮತ್ತ
ಹ೦ಗ೦ತ ಹೋಳಿಗಿ ಊಟ ತಡಮಾಡಬ್ಯಾಡ್ರೀ....

Manasa ಹೇಳಿದರು...

@ ಸೀತಾರಾಮ್ K ... ಅಲ್ಲರೀ ನನ್ನಕತಿಗೆ ನಿಮ್ಮ ವಗ್ಗರಣಿ ಬಾಳ ಮಸ್ತ ಆಗೆತಿ...
ಆತ್ಮಿಯವಾದ್ ಕಾಮೆಂಟ್ ಗೆ ತುಂಬಾ ತುಂಬಾ ಥ್ಯಾಂಕ್ಸ್
ನೀವು ನಕ್ಕು ಸಂತೋಷ ಪಟ್ಟದ್ದು ಓದಿ ನನಗು ಬರದಿದಕ್ಕು ಸಾರ್ಥಕ ಆಯ್ತು ಅನಸ್ತು :)

Unknown ಹೇಳಿದರು...

varshake ondu varara banda madlila nadra namaga samdana ilaila ri

nice article mone urige hogibandru mate uru nenapayitu

Manasa ಹೇಳಿದರು...

@ vijayhavin, nimage nenapirabeku back in 90's naavu school hogatiddaga.. August 15 bantandre igadaa maidaana issue... every year... bandu... shaale bandu.. ontara channagittu... ide estu vaasi adanna nodidare ;)