ಸೋಮವಾರ, ಆಗಸ್ಟ್ 23, 2010

Reservation

ನಾ ಯುನಿವೆರ್ಸಿಟಿ ಹೋಗು ಬಸ್ ಕೆಟ್ಟ ನಿಂತತು... ಲೇಟ್ ಬ್ಯಾರೆ ಆಗಾತಿತ್ತು... ಏನ್ ಮಾಡುದು.. ಇಳದು ಬ್ಯಾರೆ ಬಸ್ ಹತ್ತಬೇಕು ಅಂದ್ರ.. ಅದು ಕೆಟ್ಟಿದ್ದು ನಡು ರಸ್ತೆ... ಹಂಗ ಡ್ರೈವರ್ ಅಂತು ಬಸ್ ಬಾಗಲಾ ತೆಗಿಯಪ್ಪ ಇಲ್ಲೇ ಇಳಿತೆವಿ ಅಂದ್ರು... safety issue ಅಂತೇಳಿ ಬಾಗಲಾನು ತಗಿಲಿಲ್ಲ.... ಇನ್ನು ಬ್ಯಾರೆ ಬಸ್ ಬರುದು ತಡಾ ಅಂತಾ ಗೊತ್ತಾತು... ಅಲ್ಲೇ ಆಜು ಬಾಜು (ಅಕ್ಕ ಪಕ್ಕ) ಕುತವರಿಗೆಲ್ಲ ಸ್ಮೈಲ್ ತಳ್ಳಿ... ಮತ್ತ ಬಂದು ನನ್ನ ಆಸನಕ್ಕೆ ಆಸಿನಳಾಗಿ...ಒಂದಿಷ್ಟು ಗಿಚಿದ್ದು...
 ನಮ್ಮುರಕಡೆ ಬಸ್ ಸೀಟ್ ಹಿಡಿಯೋ ನೆನಪಾಗಿ ಒಬ್ಬಾಕಿ ನಗಾಕ ಶುರು ಮಾಡಿದೆ... 
ನಿಮಗೂ ನೆನಪಾತ???
 ಹುಬ್ಬಳ್ಳಿ ಬಸ್ ಸ್ಟ್ಯಾಂಡ್... ನಮ್ಮ ಅಜ್ಜ ಅಜ್ಜಿ ಊರಿಗೆ ಸುಟಿ ಇದ್ದಾಗ ಹೋಗು ದಿನಗಳು... ಬಸ್ಸಿಂದ ಹೊರಗೆ ನಿತಕೊಂಡು ನಮ್ಮ ಮಾವಯ್ಯ (ತಾಯಿ ಅಣ್ಣ) ಟಾವೆಲ್ ಒಗದು ಸೀಟ್ researvation ಮಾಡೋದು... ಅಸ್ಟೆ ಅಲ್ಲರಿ... ಕರವಸ್ತ್ರ, ಟಪಗಿ, ಕಯ್ಯಗ ಏನ್ ಸಿಗತದೋ ಅದನ್ನ ಆಗದು... ಸೀಟ್ reservation ಮಾಡೋದು... ಸೀಟ್ ಅಂತು reserve ಆಗಿರ್ತಿತ್ತು... ಇನ್ನು ಬಸ್ ಹತ್ತಿ ಒಳಾಗ ಬರುದರಾಗ... ಯಾರರ ಕೂತಿದ್ದರ ಪಜೀತಿ ಮಾಡಿ... ಎಷ್ಟು ಕಷ್ಟ ಪಟ್ಟು reserve  ಮಾಡಿದ ಸಂಗತಿ ಹೇಳಿ ಎಬ್ಬಸಿ ಊರ ಬರೋವರೆಗೂ ನಿಶ್ಚಿಂತಿ...

ಇನ್ನು ಚುಮಣಿ ಎಣ್ಣಿ ಪಾಳಿ
ಆರ  ಲಿಟರ್ ಹಿಡಿಯೋ ಬಾಟಲಿಗೆ ಎಂಟ ಲೀಟರ್ ಹಾಕೋ ನಮ್ಮ ರೇಶನ ಅಂಗಡಿಗಳು...
ಚುಮಣಿಎಣ್ಣಿ (ಸಿಮೆ ಎಣ್ಣೆ) ಮುಂಜಾನೆ ಜಲ್ದಿ ಎದ್ದು ಹೋಗಿ ಒಂದು ಕಲ್ಲು ಇಟ್ಟಬರೋದು ಡಬ್ಬಿ ಬದಲಿಗೆ, ಆ ಕಲ್ಲೇ reservation  place  for next  dubbi...

ಇಷ್ಟು ಸಾಕು ಮತ್ತ ಮುಂದಿನ reservation ಮತ್ತ ಬರೀತೀನಿ...
    

15 ಕಾಮೆಂಟ್‌ಗಳು:

Guruprasad ಹೇಳಿದರು...

ಹಾ ಹಾ ಸಕತ್ ಆಗಿ ಇದೆ,, reservation ......

ಸಾಗರದಾಚೆಯ ಇಂಚರ ಹೇಳಿದರು...

hahhaa nijari

nammora kadenu hanga

SATISH N GOWDA ಹೇಳಿದರು...

very nice ........ biduvu madikondu nannavalalokakke omme banni


SATISH N GOWDA
http://nannavalaloka.blogspot.com

ಅನಾಮಧೇಯ ಹೇಳಿದರು...

nimma blog super.... :) uttara karnatakada mandi nivu... maatadidar hase gwaadyaag haLLittanga ;)

ಸೀತಾರಾಮ. ಕೆ. / SITARAM.K ಹೇಳಿದರು...

ನಮ್ಮದೂ ಹಿಂಗ ಇತ್ತಬೆ ಫಾಜಿತಿ... ಭೇಶ ಬರಿದೆಯಳ! ಮುಂದಿ೦ದು ಜಲ್ದೀ ಬರಿಲ್ಲಿಕ್ಕ ನಾಳಿನೂ ಬಸ್ಸು ನಡುದಾರೀಲ್ಯೇ ಕೆಟ್ಟು ನಿಂದ್ರಲ್ಲಿ...:-)

Manasa ಹೇಳಿದರು...

@ Guru's world, Thanks for the comment :)

@ sagaradaacheya inchara (gurumurthy sir)... Karnatakadaaga hanga anasteti ;)

@ Satish N Gowda, Thanks for visiting my blog and thanks for the comment :)

@ Anamadheya, hesaru barediddare chenagittu... matta maatu andra hangirabekari...

Sitaram sir, hu khanditaa baritini... aadare bus kedodu byadari.... naanobbakki irangillari aa busnyaaga ;)

ಮನಮುಕ್ತಾ ಹೇಳಿದರು...

:):):)...

Laxman (ಲಕ್ಷ್ಮಣ ಬಿರಾದಾರ) ಹೇಳಿದರು...

chennagideri,
namma bashe matadudu saral adre bareyodu tumba kashta


nivu tumba chennagi baritira

Laxman Biradar

shivu.k ಹೇಳಿದರು...

ಮಾನಸ ಮೇಡಮ್,

ನಿಮ್ಮ ಬ್ಲಾಗಿಗೆ ಮೊದಲ ಬಾರಿ ಬರುತ್ತಿದ್ದೆನೆ. ನಿಮ್ಮ ಬ್ಲಾಗ್ ನನ್ನ ಕಣ್ಣಿಂದ ಹೇಗೆ ತಪ್ಪಿಸಿಕೊಂಡಿತೆನ್ನುವುದೇ ಅಶ್ಚರ್ಯ. ಚುಟುಕಾಗಿ ಬರೆದರೂ ಸೊಗಸಾಗಿ ಬರೆಯುತ್ತೀರಿ..ಇನ್ನು ನಿತ್ಯ ಬರುತ್ತೇನೆ.

Umesh Balikai ಹೇಳಿದರು...

ಹ್ಹೆ ಹ್ಹೆ ಹ್ಹೆ :) .. ಹೌದ್ರೀ ಮಾನಸಾ... ಹುಬ್ಳಿ ಬಸ್ ಸ್ಟ್ಯಾಂಡಿನ್ಯಾಗ ಕಾಲೇಜಿಗೆ ಹೋಗು ಟೈಮ್ ನ್ಯಾಗ ನಾನೂ ಹಂಗ ಬಸ್ ಸೀಟ್ ರಿಸರ್ವ್ ಮಾಡ್ತೀದ್ಯಾ... ಅದೆಲ್ಲ ನೆನಪ್ ಆಗಿ ನಗು ಬಂತ್ ನೋಡ್ರೀ...

ಆ ಟೈಮ್ ನ್ಯಾಗ ನಂ ಊರಾಗ ನೀರಿನ ಪ್ರಾಬ್ಲಮ್ ಭಾಳ ಇತ್ತು. ಅದಕ್ಕ ಮುನಿಸಿ ಪಾಲಿಟಿಯವ್ರು ಒಂದು ಸಾರ್ವಜನಿಕ ನಳಾ ಹಾಕಿದ್ರು.. ಅಲ್ಲಿ ಬೆಳಿಗ್ಗೆ ಬೆಳಿಗ್ಗೆ ನೀರ್ ತುಂಬಸಾಕ ಪಾಳಿ ಹಚ್ಚತಿದ್ವಿ.. ಯಾರ ಕೊಡಾ ಮುಂದ್ ಐತೋ ಅವ್ರದ ಪಾಳಿ.. ಪಾಳಿ ಹಿಡಿಯೋ ಸಮಂದ ಅಟ್ಟದ ಮ್ಯಾಗ ಇಟ್ಟಿದ್ ಹಳೆ ಸೊರಕಾ, ಮೂರಕಾ ಕೊಡ ಎಲ್ಲ ತಂದು ಪಾಳಿಗೆ ಇಡತಿದ್ವಿ.. ಪಾಳಿ ಬಂದ್ ಕೂಡ್ಲೇ ಛಲೋ ಕೊಡ ಮುಂದ್ ತಂದು ಇಲ್ಲ ಯಾರ್ದರ ಹತ್ರ ಕಡಾ ಇಸ್ಕೊಂಡು ನೀರ್ ತುಂಬಿಸಿ ಸುರವಾಕ ಹೋಗುಕ್ ಮುಂಚೆ ಮತ್ತ ಆ ಹಳೆ ಕೊಡಾ ಪಾಳೇಕ ಹಚ್ಚಿ ಹೋಗ್ತಿದ್ವಿ.. ಮನೀಗ್ ಹೋಗಿ ನೀರ ಸುರವೀ ವಾಪಸ್ ಬರೂದ್ರ ಒಳಗ ಹಳೆ ಕೊಡ ಪಾಳೆದಾಗ ಮುಂದ್ ಬಂದಿರ್ತಿದ್ವು !! :)

ಅದೆಲ್ಲ ನೆನಪಾ ಮಾಡಿ ಕೊಟ್ಟಿದ್ದಕ್ಕ ಥ್ಯಾಂಕ್ಸ್!

ಹಳ್ಳಿ ಹುಡುಗ ತರುಣ್ ಹೇಳಿದರು...

hmmm nija ri... indigu mundenu namamli ulidiro/uliyodu namma bus seat reservation onde....

Manasa ಹೇಳಿದರು...

ಧನ್ಯವಾದಗಳು ಮನಮುಕ್ತಾ :)
@ ಲಕ್ಷ್ಮಣ ಸರ್ , ಹೌದ್ರಿ ಮಾತಡುದು ಸರಳ .. ಬರಿದು ಕಷ್ಟಾ... ಇಂಗ್ಲಿಷ್ನ್ಯಾಗ ಟೈಪ್ ಮಾಡಿ ಎಡಿಟ್ ಮಾಡಲಿಕ್ಕೆ ಬಾಳ ಟೈಮ್ ತುಗೊತೆತಿ ಒಯದೊಂದು ;)... ಆದರು ನಾನು ಬಿಡದಕಿ ಅದು ಬಿಡದಪ್ಪ ;).. ಒಟ್ಟನ್ಯಾಗ ಬರೀತೀನಿ .. ಅನಂತ್ ಧನ್ಯವಾದಗಳು ನಿಮ್ಮ ಅನಿಸಿಕೆಗೆ :)
@ Shivu K (ಶಿವಣ್ಣ ), ಆಗುತ್ತೆ ಕೆಲವೊಂದು ಸಾರಿ ... ಆಮೇಲೆ ನಾನು regular ಆಗಿ ಬರಿಯೋಲ್ಲ ... ಸಮಯಾ ಸಿಕ್ಕಾಗ , ಹೀಗೆ ಬಸ್ ಕೆಟ್ಟಾಗ ಬರಿಯೋದು ... so ನಿಮಗೆ ಗೊತ್ತಾಗಿಲ್ಲ ಬಹುಶಃ ... ತುಂಬಾ ಥ್ಯಾಂಕ್ಸ್ ನಿಮ್ಮ ಪ್ರೋತ್ಸಾಹಕ್ಕೆ :)
@ Umesh BaLIkayi. ಸರ್ ನೀವು ನಿಮ್ಮ ನೀರಿನ ಪಾಳೆ reservation ಬಗ್ಗೆ ಹೇಳಿ ಬಾಳ ಚುಲೋ ಮಾಡಿದ್ರಿ ... ನನಗದು ಮರತೆ ಹೋಗಿತ್ತು ... ಮತ್ತ ನೀವು ನಮ್ಮ ಕಡಿಯವರ್ ಅಂತ ಕಾಣತೆತಿ .. ನಿಮ್ಮ ಬ್ಲಾಗ್ ಇನ್ನು ಓದಿಲ್ಲ ... ಇನ್ನು ಓದ್ತೀನಿ :) ... ಧನ್ಯವಾದಗಳು ನಿಮ್ಮ ಅನಿಸಿಕೆಗೆ :)
ಹಳ್ಳಿ ಹುಡುಗಾ ತರುಣ , ನಿಜಾ ನೋಡ್ರಿ ಉಳಿಯೋದೊಂದೇ reservation .. ಪಕ್ಕ ಬಸ್ reservation .. ಧನ್ಯವಾದಗಳು :)

Manju M Doddamani ಹೇಳಿದರು...

ನಿಮ್ಮ ಬ್ಲಾಗ್ ಗೆ ನನ್ನ ಮೊದಲ ಹೆಜ್ಜೆ ಚನ್ನಾಗಿ ಬರ್ದಿದಿರ..! :) ಇನ್ನು ನಿಮ್ಮ ಮುಂದಿನ reservation ಕಾಯ್ತಾ ಇರ್ತಿನ್ರಿ ಬೇಗ ಬನ್ರಿ



http://manjukaraguvamunna.blogspot.com/

ಸವಿಗನಸು ಹೇಳಿದರು...

ಪಿಲಾಸಫರ್,
ಇನ್ನೊಂದು ತರಹ reservation ಇದೆ....ಸೀಟ್ ಮೇಲೆ ಎಲೆ ಅಡಿಕೆ ಉಗಿದು ಬಿಡ್ತಾರೆ....ಯಾರು ಕೂರಬಾರದು ಅಂತ....ಅಂತಹ ಜನ ಸಹ ಇದ್ದಾರೆ...ಹಹಾಹಹಹ....

Manasa ಹೇಳಿದರು...

@ Doddamani Manju, dhanyawaada... try maadatini :)

Saviganasu (Mahesh), howdu kaNri, nodiddini... :)