ಭಾನುವಾರ, ಮೇ 16, 2010

ಕೆಲ ಕಾಲದ ಸ್ನೇಹಿತರು

ಆಸರೆ ಅಲ್ಲದಿದ್ದರೂ ನಂಬೋ ಜೀವ... 

ನದಿಯಲ್ಲಿ ಮುಳಗುತಿರುವಾಗ.. ಮುಗಿಯಿತು ಜೀವನ ಅನ್ನೋಅಸ್ಟರಲ್ಲಿ... ಒಂದು ಸಣ್ಣದಾದ್ ಗಿಡ/ಬಳ್ಳಿ  ಸ್ವಲ್ಪ ಬೇರು ಬಿಟ್ಟು ನಿಂತಿದೆ ಅಂದ್ರೆ, ಅದನ್ನೇ ಹಿಡಕೊಂಡು... ಬದುಕಿದೆ ಬಡ ಜೀವವೇ ಅಂತಿವಿ... ಅದು ಗಟ್ಟಿ ಅಲ್ಲ ಅನ್ತಿದ್ರುನು ಸ್ವಲ್ಪ ಕಾಲ ಜೀವ ನಿಡತು... ಶಾಶ್ವತ ಅಲ್ಲ ಅಂತ ಗೊತ್ತಿದ್ರನು...ಸ್ವಲ್ಪ ಕಾಲ ಬದುಕೋದಕ್ಕೆ ಆಸರೆ ಆಯಿತು...

 ಹಿಂಗೆ ಯಾರನ್ನೋ ಭೇಟಿಯಾಗಿರತಿವಿ, ಅವರು ನಮ್ಮೊಂದಿಗೆ ಬರೋಲ್ಲ ಅಂತ ಗೊತ್ತಿದ್ರು.. ಸ್ವಲ್ಪ ಸಮಯದಲ್ಲೇ ಅವರಿಗೆ ನಮ್ಮ ಬಗ್ಗೆ ಪರಿಚಯಿಸಿಕೊಂಡು... ಅವರಬಗ್ಗೆನು ತಿಳಕೊಳು ಕುತೂಹಲ ತೋರಿಸ್ತಿವೀ... ಅದಕ್ಕೆ ಏನೋ ಮನುಷ್ಯ  ಸಂಘ ಜೀವಿ ಅನ್ನೋದು.

ಬಸನಲ್ಲೋ, ಟ್ರೈನಲ್ಲೋ, ವಿಮಾನ ದಲ್ಲೋ,  ಇಲ್ಲ ಒಂದೇ ದಾರಿಯಲಿ ನಡಿತಾ ಹೋಗತಿರ್ತಿವಿ... ಕೆಲವೊಬ್ರು ಆತ್ಮಿಯವಾಗತಾರೆ... ಕೆಲವೊಬ್ರು ಮೊದಲ ಪರಿಚಯದಲ್ಲೇ ನಾವು ಜೊತೆಗೆ ಇನ್ನು ದೂರ ಹೋಗಲಾರೆವು ಅನ್ನೋ ಸೂಚನೆ ಕೊಟ್ಟಿರ್ತಾರೆ... ಮನಸ್ಸು ಅನ್ನೋದು ಹುಚ್ಚು... ಅವರು ನಮ್ಮವರಲ್ಲ ಅಂತಿದ್ರುನು. ಸ್ವಲ್ಪ ಕಾಲ್ವಾದರೂ ನಮ್ಮೊಂದಿಗೆ ಜೊತೆಗಾರರಾಗಿ ನಮ್ಮ ಜೊತೆ ಬಂದ್ರಲ್ಲ ಅನ್ನೋ ಸಮಾಧಾನ... ಅವರು ಆ ಕ್ಷಣದಲ್ಲಿ ಆಡಿರುವ ಎರಡು ಮಾತುಗಳು... ಅವನ್ನೇ ಜೀವನ ಪೂರ್ತಿ ಮೆಲಕ ಹಾಕತಿರತಿವಿ...  ಮತ್ತೆ ಸಿಕ್ಕೆ ಸಿಗ್ತಾರೆ ಅನ್ನೋ ಭಾವನೆ. ಇನ್ನಿಲ್ಲಂದ್ರೆ ಎಂದಾದ್ರೂ ಒಂದು ದಿನ ಸಿಕ್ಕೆ ಸಿಗ್ತಾರೆ... ಮತ್ತೆ ಭೇಟಿ ಆಗೇ ಆಗತಿವಿ ಅನ್ನೋ ಬರವಸೆ... ಬರವಸೆ ಅಲ್ಲದಿದ್ರೂ ನಮ್ಮನ್ನ ನಾವು  ಸಮಾಧಾನ ಮಾಡಕೊಳು ರೀತಿ... ಇದು ಮನಸನ್ನ ಸಮಾಧಾನ ಪಡಿಸೋ ರೀತಿ...

ಒಂದಲ್ಲ ಒಂದು ದಿನಾ ಸಿಕ್ಕೆ ಸಿಗತಿವಿ ಬಿಡಿ... ವರ್ಲ್ಡ್ ಇಸ್ ರೌಂಡ್ ಯಾರ್ :)

ಸೋಮವಾರ, ಮೇ 3, 2010

ಗಿರಮಿಟ್ :)

ಎಲ್ಲರಿಗು ಗೊತ್ತೈತೋ  ಇಲ್ಲೋ ನಮ್ಮಕಡೆ ಗಿರಮಿಟ್... ಈ ಸತಿ ಇಂಡಿಯಾಕ  ಹೋದಾಗ್ ನಮ್ಮೂರಿನ ಅಂದ್ರ ಹುಬ್ಬಳ್ಳಿ ದುರ್ಗದ ಬೈಲ್ನ್ಯಾಗ್... ಮಸ್ತ ಬಾಜಾರದಾಗ್ ಸಂತಿ ಮಾಡಿ... ಸಂತಿ ಮಾಡುದು ಹೆಸರಿಗೆ... ನಾನು ಅಲ್ಲಿಗೆ ಹೋಗುದು ಗಿರಮಿಟ್ ತಿನ್ನಕ ರೀ :) ....

ಒಹ್!!  ಪಾಪ,  ಗಿರಮಿಟ್ ಅಂದರ ಎಲ್ಲರಿಗು ಗೊತ್ತೈತೋ ಇಲ್ಲೋ .. ಏನು ಅಂತಿರಬೇಕು ಅಲ್ಲ...
ನಮ್ಮಕಡೆ ಬಹಳ ಫೇಮಸ್ ಚಾಟ್ ರೀ ಅದು... ಚುಮ್ಮರಿ... ಅಹಹ
OK ಬಾಳ ಕಾಡಸುದು ಬ್ಯಾಡ...

ಚುಮ್ಮರಿ (ಮಂಡಕ್ಕಿ, ಬ್ಹೇಲ) ... ಮಾಡುವ ರೀತಿ ... ಉಳ್ಳಗಡ್ಡಿ (ಇರುಳಿ), ಟೊಮೇಟೊ, ಹಸಿ ಮೆಣಸಿನಕಾಯಿ, ಕೊತಂಬರಿ... ಎಲ್ಲ ಸಣ್ಣಗೆ ಹೆಚ್ಹಿ... ಎಣ್ಣಿ ಕಾಸಿ... ಸಾಸವಿ, ಜೀರಗಿ... ಚಡಪಡಿಸಿ... ಚಟಪಟ ಸಿದಸಿ... ಹೆಚಿದ ಹಸಿಮೆನಸಿನ್ಕೈ... ಉಳ್ಳಗಡ್ಡಿ... ಟೊಮೇಟೊ ಹಾಕಿ ಚೆನಾಗಿ ಗಿರ ಅಂತ ತಿರಗಿಸಿ... ಸ್ವಲ್ಪ ವಗ್ಗರಣಿ ಆರಲಿಕ್ಕೆ ಬಿಟ್ಟು ... ಆಮೇಲೆ ಚುಮ್ಮರಿ ಹಾಕಿ ಮತ್ತ ತಿರಗಿಸಿ ಗಿರ್ರ ಅಂತ... ಪುಟಾಣಿ ಹಿಟ್ಟು... ಕೊತಂಬರಿ ಹಾಕಿ.. ಒಂದು ಹಂಗ ಹಸಿಮೆಣಸಿನಕಾಯಿ.. ಮತ್ತ ಒಂದಿಷ್ಟು ಉಳ್ಳಗಡ್ಡಿ ಮೇಲೆ ಹಾಕಿ.... ಗಿರಮಿಟ್ ತಿಂದ್ರ... ಸತ್ತ ನರ ಎಲ್ಲ ಎದ್ದು ಓಡಾಕ್ ಹತ್ತವ  ... ತಲಿಯೋಳಾಗ ಕುಂತ ಪ್ರಶ್ನೆಕ್ಕ, ಪಟಾ ಪಟಾ ಅಂತ ಉತ್ತರ ಸಿಗತಾವರೀ... ಈದಂತು ನನ್ನ ಅನುಭವ... ಹಂಗೆ ೧೫ ದಿವಸದ ಪ್ರವಾಸದಾಗ್ ೫ ಸತೆ ಹೊರಗಿನ ಗಿರಮಿಟ್ ತಿಂದು ತಿಂದು... ನಮ್ಮ ಅವ್ವ... ಧುಳ ಇದ್ದಿದ್ದ ತಿಂದ್ರ ರುಚಿ ಅಂತ ಕಾಣತದ ಅದಕ್ಕ .. ದುರ್ಗದ್ಬೈಲ್ ಹೊಕ್ಕಿರೀ ಅಂತಿದ್ರು... ಮನೇಲೆ ಮಾಡಿದ್ರು ನನಗೇನೋ ಅಲ್ಲಿ ಹೋಗಿ ತಿಂದರೆ ಸಮಾಧಾನ... ಇವತ್ತು ಯಾಕೋ ಆ ದುರ್ಗದ್ಬೈಲ್ ನೆನೆಪಾಗಿ... ಗಿರಮಿಟ್ ಮಾಡಕೊಂಡು ತಿಂದು... ಬರಿಲಿಕ್ಕೆ ಒಂದು ಪ್ರೋತ್ಸಾಹ ಆತು... ನಮ್ಮ ಹುಬ್ಬಳ್ಳಿ ದುರ್ಗದ್ಬೈಲ್ ಗಿರಮಿಟ್ :) ...

ಹುಬ್ಬಳ್ಳಿಗೆ ಹೊದರ ಮರೀದ ಗಿರಮಿಟ್ ತಿನ್ನಬೇಕರೀಪ :)

ಮಂಗಳವಾರ, ಏಪ್ರಿಲ್ 20, 2010

ಜಾನಪದ

ಎಸ್ಟೋ ದಿವಸದಿಂದ ಈ ಹಾಡು ಬರೀಬೇಕು ಅನ್ಸಿತ್ತು ಆದರ online  ಕೇಳ್ತಾ ಬರಿಲಿಕ್ಕೆ ಕಷ್ಟಾ.. ಮತ್ತ ಯಾವಾಗ್ ಟೈಮ್ ಸಿಗತದೋ ಅಂತ ಕಾಯಕೊಂತ ಕುಂತಿದ್ದೆ... ಇವತ್ತು ಸ್ವಲ್ಪ ಟೈಮ್ ಸಿಕ್ಕತ ಹಂಗ ಕೆಳಕೊಂತ ಬರದೆ...



ಕುಂಜರದ ಗೊಂಬೆ ಕೇಳಿ ನಲ್ಲರ ಜಾಣೆ ಖುಶಲದ ರಂಬೆ ಕೇಳೆ ...
ನಮ್ಮೂರ ಗೌಡನ ಮಗಳು ನಿರಿಗೆ ಹೋಗುವಾಗ  ಕಟ್ಟೆ  ಕಲ್ಲಾಗಿ ಬಂದು ಅಡಗಿದ್ದಾ ಆ  ಹುಡುಗ

ಕಟ್ಟೆ ಕಲ್ಲಾಗಿ  ಬಂದು ಅಡಗಿರೋ ಹೊತ್ತಿಗೆ ಹೊನ್ನಾಳಿ ಹೊಳೆಯಾಗಿ ಹರಿದಿದ್ದಲ್ ಆ  ಹುಡಗಿ
ಹೊನ್ನಾಳಿ  ಹೊಳೆಯಾಗಿ ಹರಿದಿರೋ ಹೊತ್ತಿಗೆ ಅಡ್ಡಯೇರಿ ಆಗಿ ತಡಿದಿದ್ದ ಹುಡುಗ

ಅಡ್ಡ ಏರಿಯಾಗಿ ತಡೆದಿರೋ ಹೊತ್ತಿಗೆ ತೆಂಗಿನ ಮರವಾಗಿ ಬೆಳೆದಿದ್ದಳ  ಆ ಹುಡಗಿ
ತೆಂಗಿನ ಮರವಾಗಿ ಬೆಳಿದಿರೋ ಹೊತ್ತಿಗೆ... ಮರವೇರಿ ಎಳೆನೀರ ಕುಡಿದಿದ್ದನ ಆ ಹುಡುಗ

ಮರವೇರಿ ಎಳೆನೀರ ಕುಡಿದಿರೋ ಹೊತ್ತಿಗೆ... ಜೋಳದ ಕಾಳಗಿ ಚಿಮ್ಮಿದ್ದಲ  ಆ ಹುಡಗಿ
ಜೋಳದ ಕಾಳಗಿ ಚಿಮ್ಮಿರೋ...  ಹೊತ್ತಿಗೆ ಕೋಳಿ ಹುಂಜಾಗಿ ಕುಕ್ಕಿದ್ದನ ಆ ಹುಡುಗ

ಕೋಳಿ ಹುಂಜಾಗಿ  ಕುಕ್ಕಿರೋ ಹೊತ್ತಿಗೆ... ಹೆಬ್ಬುಲಿ ಆಗಿ ನಿಂತಿದ್ದಳ ಹುಡಗಿ
ಹೆಬ್ಬುಲಿ ಆಗಿ ನಿಂತಿರೋ ಹೊತ್ತಿಗೆ. .. ಚಿನ್ನದ ಕತ್ತಿನ ಕೋವಿ ಹಿಡಿದು ನಿಂತಿದ್ದನ್ ಆ  ಹುಡುಗ
ಚಿನ್ನದ ಕತ್ತಿನ ಕೋವಿ ಹಿಡಿದಿರೋ ಹೊತ್ತಿಗೆ ಮುತ್ತಿನ ಶೆರಗ್ ಒಡ್ಡಿ ಬೇಡಿದ್ದಲ ಹುಡಗಿ

ಕುಂಜರದ ಗೊಂಬೆ ಕೇಳಿ ನಲ್ಲರ ಜಾಣೆ ಖುಶಲದ ರಂಬೆ ಕೇಳೆ ...

ಗುರುವಾರ, ಏಪ್ರಿಲ್ 1, 2010

bharata pravaas

ಮಾರ್ಚ್ ೫, ೨೦೧೦, ಮುಂಜೇನೆ ೪ ಘಂಟೆ... ಆಸ್ಟ್ರೇಲಿಯದಿಂದ ಬೆಂಗಳೂರು...  ಕೆಲಸ ಎಲ್ಲ ಮುಗನ್ಸೊಂಕುದು ಏನು ಬಾಕಿ ಬಿಡಲಂಗ, ೧೫ ದಿನ ರಜಾ ತುಗೊಂಡು... ಬ್ರಿಸ್ಬನೆ ಇಂದ ಸಿಂಗಪೋರ್ ಅಲ್ಲಿಂದ ದುಬೈ ಮತ್ತೆ ಬೆಂಗಳೂರು... ಹೋಗತಿದ್ದಂಗ ನಮ್ಮ ಅಣ್ಣ ವಿಮಾನ ನಿಲ್ದಾಣ ದಾಗ ನನ್ನ ದಾರಿ ನೋಡಕೊಂತ ನಿಂತಿದ್ದ... ಹೋಗತಿದ್ದಂಗ ನೋಡಿ ನನಗಂತೂ ಬಾಳ ಖುಷಿ ಆತು... ಹಂಗ ಇಬ್ಬರು ಸ್ವಲ್ಪ ಹೊತ್ತು ಮಾತಾದಕೊಂತ... ಅಲ್ಲೇ ವಿಮಾನ ನಿಲ್ದಾಣ ದಾಗ್ ಕಾಫಿ ಕುಡದು, ಅಲ್ಲಿಂದಾ ಸಿದಾ ಮುಂಜೆನಿ ೬ ಘಂಟೆ ಗಾಡಿ ಹಿಡಕೊಂಡು ಹುಬ್ಬಳ್ಳಿಗೆ....
  
ಹುಬ್ಬಳ್ಳಿ ರೈಲ್ವೆ ಸ್ಟೇಷನ್ ಸಮೀಪ ಬರತಿದ್ದಂಗ ಕರ್ಫು ಹಾಕಿದ್ದು ಗೊತ್ತಾತು ನೋಡ್ರೀ... ಈಗ ಮನಿಗೆ ಹೆಂಗ ಹೋಗುದು, ಅಣ್ಣ ಮತ್ತ ನಾನು ಇನ್ನು ಹುಬ್ಬಳ್ಳಿ ಬರಾಕ್ ೧ ತಾಸ ಇತ್ತು, ಏನ್ ಮಾಡುನು ಅಂತ ಇಬ್ಬರು ಮಾತಾಡಕೊಂತ ಕೂತಿದ್ವಿ... ನಮ್ಮ ಬಾಜು ಕುಂತ ಒಬ್ಬ ಹೆಣಮಗಳು ತನ್ನ ಮಗನಿಗೆ (ಸುಮಾರು ೫ ವರ್ಷದವ ಇರಬಹುದು)... ಇಲ್ಲೇ ಏನರ ತಿನ್ನು ಹುಬ್ಬಳ್ಳಿಗೆ ಹೊದರ ಏನು ಸಿಗಂಗಿಲ್ಲ ಕರ್ಫು ಹಾಕ್ಯರ, ಅವನೋ ಏ ಯೆನಬೆ ನೀನು ನನಗ ಹಸದಿಲ್ಲ ಅಂತ ನಾ ಅಂದ್ರ ಎಷ್ಟು ಜೋರ ಮಾಡತಿ, ಆಮೇಲೆ ಏನಾರ ಕೇಳ ನೋಡು ಅಂತ ಆ ತಾಯಿ. ನಾವಿಬ್ಬರು ಅವರ ಮಾತು ಕೇಳ್ತಾ ಅಲ್ಲೇ ಮುಸು ಮುಸು ನಕ್ಕೊಂತ, ಹಂಗ ಸ್ವಲ್ಪ ಆಕಡೆ ಹೋದರಾತು ಅಂತ ಹೊಂಟವಿ, ಅಲ್ಲಿ ಇನ್ನೊದು, ಏನ್ ಹುಬ್ಬಳ್ಳಿ ರೀ ದಾಂದಲೆ ಊರು, ಶಾಂತಿ ಅನ್ನೋದು ಇಲ್ಲ ನೋಡ್ರೀ, ಯಾರೋ ಇನ್ನೋಬರು ಅನ್ನೋದು ಕೇಳಸ್ತು ... ನನಗೋ ಇಲ್ಲದ ಸಿಟ್ಟು ಬಂತ್ ನೋಡ್ರೀ.. ಬಂದಿರುದು ೧೫ ದಿನ ಅದರಾಗ್ ಹಿಂಗ ಕರ್ಫು ಹಾಕೊಂಡು ಕುಂತರ ಏನ್ ಮಾಡೋದು, ಎಲ್ಲಿ ಹೋಗಲಿಕ್ಕು ಆಗಂಗಿಲ್ಲ, ಫ್ರೆಂಡ್ಸ್ ಭೇಟಿ ಆಗಬೇಕು, ಒಂದು ರೌಂಡ್ ನನ್ನ ಹಳೆ ಸ್ಕೂಲ್, ಕಾಲೇಜ್ ಎಲ್ಲಾ ನೋಡಾಕ್ ಹೋಗಬೇಕು ಏನೆಲ್ಲ ಆಸೆ ಇಟಕೊಂದು ಬಂದೀನಿ, ಏನಾಗುತ್ತೋ ಏನೋ... ಮನಸನ್ಯಾಗ ಹಂಗ ನೂರ ಎಂಟು ವಿಚಾರ... ಊರ ಸಮೀಪ ಬಂತು... ರಿಕ್ಷ ಎಲ್ಲ ಬಂದ... ಸ್ಟೇಷನ್ನಿಂದ ಹೊರಗ  ಬಂದ್ವಿ... ಅಲ್ಲೇ ಭಾವ ಆಗಲೇ ಬಂದು ನಿಂತಿದ್ರು... ಜೀಪ್ ಅಲ್ಲೇ ಇತ್ತು, ಸಿಪಿಐ ಇದ್ದದರಿಂದ ಹುಬ್ಬಳ್ಳಿ ಕರ್ಫು ಆಗಿದ್ದರಿಂದ ಅವರ ಡ್ಯೂಟಿ ಅಲ್ಲೇ ಹಾಕಿದರು... ನೋಡಿ ಬಾರಿ ಖುಷಿ ಆತು... ಸಿಪಿಐ ಭಾವ ನನ್ನ ಬರಮಾಡಕೊಲಕ ಸ್ಟೇಷನ್ಗೆ ಬಂದಾರು... ತಾವು ಮುಂದ ಕೂತು...ಹಿಂದಿನ ಸೀಟು ನಮಗೆ ಕೊಟ್ಟರು , ನಾನು ತಲೆ ತಿನ್ನೋಕ್ ಶುರು ಮಾಡಿದೆ.. ಅಲ್ರಿ  ಮಾಮಾರ, ನಿಮದು ರಾಯಭಾಗ್ ಪೋಸ್ಟ್ ಅದರ ಇಲ್ಲಿ ಹೆಂಗ ಹಾಕಿದರು, ಮತ್ತ ನಾನು ಬರು ಸುದ್ದಿ ನಿಮಗ್ಹೆಂಗ ಗೂತ್ತ ರೀ? ಅಕ್ಕ ಏನಾರು ಹೇಳಿದ್ಲೆನರೀ? ಮತ್ತ ಎಲ್ಲ ಆರಾಮ ರೀ? 

ಯಾವದಕ್ಕ ಉತ್ತರ ಮೊದಲ ಹೇಳಲಿ ನನ್ನ ನಾದಿನಿ?
ಮುದ್ದಾದ ನಾದಿನಿ ಬಳಿಗೆ ಬಂದರೆ ಅವಳ ಚೆಲುವು ನನ್ನ ಕಣ್ಣ ತುಂಬಿದೆ.... ನೂರಾರು ಬಂನನದ ಆಸೆ ಹಕ್ಕಿಯು ಎದೆಯ ಒಳಗೆ ರೆಕ್ಕೆ ಬೀಚಿ ಹಾರಿದೆ ... ಹಾಡೋಕೆ ಶುರು ಮಾಡಿದ್ರು... ನಾನು ಒಂದು ಸ್ಮೈಲ್ ಕೊಟ್ಟೆ  :) ...

ಅದೇ ಇವಾಗ್ ಇಂತದ್ದೆ ಊರು ಅಂತಿಲ್ಲ ಹೀಗೆ ಬೆಳಗಾವಿ, ರಾಯಭಾಗ, ಸುತ್ತಲು ಇವಾಗ್ ಡ್ಯೂಟಿ ಅಂದ್ರು... ಸರಿ ಬಿಡ್ರೀ ನನಗ ಚುಲೋ  ಆಯ್ತು ಮನೆಗೆ ಹೆಂಗ ಹೋಗುದು ಅಂತ ನಾನು ಅಣ್ಣ ಯೋಚಿಸ್ತಿದ್ವಿ ;) ...

ನಮ್ಮ ಮಾಮರ ಜೀಪ್ ನ್ಯಾಗ ಹತ್ತಿ ಮನಿಗೆ ಹೊಂಟ್ವಿ... ಹೊಗೊವಾಗ್ ಸಕತ್ ಮಜಾ... ನಮ್ಮ ಜೀಪ್ ನೋಡಿ ಜನ ಓಡೋದು, ಮರೆಯಾಗೋದು ನೋಡಿ ನಕ್ಕಿದ್ದೆ ನಕ್ಕಿದ್ದು... ಅದರಲ್ಲೂ ಡ್ರೈವರ್, ಸಾಹೇಬರ ನೋಡಿ ಜನ ಒಡತಿಲ್ಲರೀ,  ಅಮ್ಮವರೆ ನಿಮ್ಮನ ನೋಡಿ ಅಂದ... ಯಾಕ್ರಿ ಅಣ್ಣಾವ್ರೆ ಅಂತ  ಒಂದು ಸಾರಿ ನಕ್ಕೆ...ಪಾಪ ಜನಾ ಜೀಪ, ಪೋಲಿಸ್ ನೋಡಿ ಒಡೋರು...
ಮನೆ ಬಂತು... ಅವ್ವ, ಅಪ್ಪಾಜಿ, ಅಕ್ಕ, ಅಜ್ಜಿ, ಕಾಕ,ಕಾಕು, ತಂಗಿ, ತಮ್ಮಂದಿರು... ಎಲ್ಲರು ಬಾಗಿಲಿಗೆ  ಬಂದು ನಿಂತಿದ್ದರು...

ಒಂದ್ ಸತಿ ಎಲ್ಲಾರ್ನು ನೋಡಿ, ಮನಸ್ಸು ಹ್ಯಪ್ಪಿಯೋ ಹ್ಯಾಪಿ :)
ಆಗಲೇ ೩ ಘಂಟೆ ಆಗಿತ್ತು... ಹೋಳಿಗೆ ಊಟ ರೆಡಿ ಇತ್ತು.... ನಮ್ಮಲ್ಲಿ ಹೋಳಿಗೆ ಸಾರು ಬಾರಿ ಅದರಾಗ ಒಳನ್ಯಗ್ ರುಬ್ಬಿದ ಸಾಂಬಾರ್ ಮಸಾಲಿ ಬಾರಿ ಬಾರಿ... ಭಾವ ಊಟಕ್ಕೆ ರೆಡಿ ಆದರು, ಅಯ್ಯೋ ಇದೇನು ಭಾವ ಡ್ಯೂಟಿ ನಲ್ಲಿ ಇರಬೇಕಾರೆ... ಇನ್ನು ಮನೆಲ್ಲಿ ಇದ್ದಿರೀ ಅಂದೇ... ಹೋಗಬೇಕು ಊಟ ಮಾಡಿ ಅಂದ್ರು...ಒಹ್! ನೀವು ನಮನೆ ಸುತ್ತನೆ ಡ್ಯೂಟಿ ;) ... ಹು ಮತ್ತೆ ಇವಾಗ ಬ್ಯೂಟಿ ಬಂದಮೇಲೆ ಇನ್ನೆಲಿ ಡ್ಯೂಟಿ ನಿಮ್ಮನೆ ಬಾಗಿಲು ಕಾಯೋದೇ ಡ್ಯೂಟಿ ಅಂದ್ರು :)
ಮೂರೂ ದಿವಸ ಅಲ್ಲೇ ಡ್ಯೂಟಿ... ಪಾಪ, ರಾತ್ರಿ, ಹಗಲು, ಉರಿ ಬಿಸಲು ಯಾವದು ಲೆಕ್ಕಿಸದೆ.. ಅದು ಬೇರೆ ಫೋನ್ ಹಂಗೆ ಹೋದಕೊತನೆ ಇರುತ್ತೆ, ಒಂದು ತಾಸ ಸತೆಕ್ ಅವರು ನಮ್ಮಕುಡ ಕಳಿಲಿಲ್ಲ, ಆ ಹೋಳಿಗೆ ಉಂಡ ದಿನ ಬಿಟ್ಟರ...
ಕಾಲಿಂಗ್ ಕಂಟ್ರೋಲ್ ರೂಮ್ ... ಎಲ್ಲದಿರೀ, ಇಲ್ಲೇ ಇದು ಆತು , ಅದು ಆತು,  ಅಂತ ಹೋದಕೊತಾನೇ ಇರ್ತಿತ್ತು...
 ಇದೆಲ್ಲದರೆ ನಡು ಮತ್ತ ನನ್ನ ಕರಕೊಂಡ ಹೋಗಾಕ, ಸ್ಟೇಷನ್ ಬಂದಿದ್ರು... ಎಂತ ಖುಷಿ... ಇಲ್ಲಿ ಬಂದಕೂಡಲೇ... ಎಲ್ಲರನು ನೆನಸೋದು, ಒಬ್ಬಳೇ ನಗೋದು...
ಏನಾದ್ರೂ ನಮ್ಮುರೆ ಚೆಂದಾ :)

ಬುಧವಾರ, ಫೆಬ್ರವರಿ 24, 2010

ಮದುವೆಯ ಈ ಬಂದ!!

ಲಗ್ನ ಮಾಡ್ಕೋ ಲಗೂನ... ಹಿಂಗ ಊದ್ದಕ್ಕ ಓದಕೊಂತ ಹೊದರ ವಯಸ್ಸ ಹೋಗಿ ಮುದ್ಕಿ ಆದಮ್ಯಲೇ ಯಾರ್ ಪರದಾಡಬೇಕು!!

ಇಲ್ಲ ಬೇ ಇನ್ನೆನ ಬಾಳ ದೀನ ಊಳದಿಲ್ಲ... ಇನ್ನೊಂದು ೬ ತಿಂಗಳಾ... ಅದಾದ್ ಮ್ಯಾಲೆ ಓದುದು ಮುಗಿತೆತಿ, ಅಮ್ಯಲೇ ವಿಚಾರ ಮಾಡುನಂತ...


ಇನ್ನ ೬ ತಿಂಗಳ ಆಂತೆತಲ್ಲ ಹುಡಗಿ ಇದು... ಇನ್ನೊಂದು ೬ ತಿಂಗಳಕ್ಕ ೬ ತಿಂಗಳ ಮತ್ತ ವಯಸ್ಸ ಯೆರತೆತೆ...
ಈಗಿಂದ ಗಂಡ ನೋಡಾಕ ಶುರು ಮಾಡಿದ್ರ ಆತು, ೨ ತಿಂಗಳದಾಗ್ ಬಂದ್ ಇಳೆ (Engagement ) ಮಾಡ್ಕೊಂಡು ಹೋಗು ಆಮ್ಯಾಲೆ ಓದುದು ಮುಗದ ಕೂಡಲೇ, ಲಗ್ನ ನೆಮಸಿದ್ರಾತು.

ಓದು, ಮಣ್ಣು, ಮಸಿ ಅಂತೇಳಿ ಎಲ್ಲರಿಗೂ ಗುಳಗೀ ಹಾಕಿ ಈ ಸರೇ ಬಂದಾಗ್ ತಪ್ಪಿಸಕೊಂಡಿ... ಆದರ ನಿಮ್ಮ ಮನ್ಯಗೂ ಎಲ್ಲರೂ ಇದನ್ನ ಅನಕತ್ತರ್... ಅದಸ್ಟ ಲಗೂನ ಲಗ್ನ ಮಾಡಿದ್ರಾತು ಅಂತ...

ಅತ್ತಿ, ಯಾಕ್ ಅಸ್ಟ ಚಿಂತೀ ಮಾಡತಿರೀ... ಎಂದಲ್ಲ ಒಂದ್ ದಿನಾ ಆಗಲೇ ಬೇಕಲ್ಲ , ಅಕ್ಕೆನಿ ಬಿಡ್ರೀ...

ಅಯ್ಯ ನಮ್ಮವ್ವ, ಹಂಗತ ಜೀವನ ಪೂರ್ತಿ, ಒಂದಲ್ಲ ಒಂದು ದೀನ ಆಕೀತಿ ಅಂತ ಕುಂತರ, ಆಗು ಮಾತಲ್ಲ ತಂಗಿ...
ಈಗ ಒಂದು ಚುಲೋ ಮನತನ ಬಂದೆತಿ... ಹುಡಗಿ ಫೋಟೋ ಕಳಸರೀ ಅಂತ ಕೇಳ್ಯರ್.

ಹುಡಗೀ ಫೋಟೋ ಕೆಲ್ಯಾರೆನರೀ ಸರೀ ನಿಮ್ಮದ ಕಳಸರೀ :) ... ಹೇ ಹೇ ಹೇ
ನಾನೇನ ನಿಮಗತೆನ ಕಾನಸ್ತೆನಿ ಅಂತ ಎಲ್ಲರೂ ಅಂತಾರ್ ...
ಅಯ್ಯೋ ಕೊಡಿ!! ತಲಿ ಹರಟಿ !!!

ಚುಲೋದು ಒಂದು ಚೂಡಿದಾರ್ ಮ್ಯಾಲಿಂದು ಫೋಟೋ ಕಳಸು, ನಿಮ್ಮ ಮಾಮಾ ಮುಂದಿನ ವಾರದಾಗ್ ಆ ಊರ ಹಾದಿ ಮ್ಯಾಲೆ ಹೊಂಟಾರ... ಹೋಗ್ತಾ ಕೊಟ್ಟ ಹೊಕ್ಕರ...

ಹಾಂ, ಅಲ್ಲಿ ಹಕ್ಕೊಂದಿರತಿಯಲ್ಲ...ಹರದದ್ದ ಜೇಂಸ್, ಎಣ್ಣಿ ಹಚದಿರೂ ಕುದಲಾ.... ನಮ್ಮನೀ ಕೆಲಸದವರಂಗ, ಹಂತಾವೇಲ್ಲ ಕಳಸಬ್ಯಾದ ಮತ್ತ...

ಒಹ್! ನಿಮ್ಮನೀ ಕೆಲಸದವರೂ ಜೇಂಸ್ ಹಾಕತಾರೆನ್ರೀ ಅತ್ತಿ, ಅಡ್ಡಿ ಇಲ್ಲರೀ ಬಾಳ ಸುದಾರಸ್ಯಾರು ಕೆಲಸವದವರು ಈಗ....
ಹುಡಗ ಏನಾಮಾದತಾನ್ರೀ ಅತ್ತಿ, ಈಗ ಯೆಲ್ಲಿರುದೋ, ನೋಡಾಕ ಹೆಂಗ???

ಸ್ವಲ್ಪ ಕುತೂಹಲ ತೋರಸ್ದೆ, ಮತ್ತ ಅವರಿಗೂ ಅನ್ಸಬಾರದು ನೋಡ್ರೀ, ನಾವೆಲ್ಲ ಇಷ್ಟ ಕಷ್ಟ ಪಟ್ಟು ಹುಡಗನ್ನ ನೋಡ್ಲಿಕತ್ತೆವಿ... ಈ ಹುಡಗಿ ನೋಡಿದ್ರಾ ಏನು ಹೇಳಂಗಿಲ್ಲ.... ಅಂದ ಗಿಂದಾರು ಅಂತ ಹಗರಕ ಕೇಳಿದೆ...

ಹುಡಗಾ ಈಗ ಇಲ್ಲೇ ಚಿಕ್ಕೋಡಿಗೆ ಬಂದಾನ್, ಅಮೆರಿಕಾದಾಗ್ ಕೆಲಸ ಮಾದತಾನ್, ಹುಡಗೀ ನೋಡಕೊಂಡು, ಮದವಿ ಮಾಡಕೊಂಡು, ಹೋದರಾತು ಅಂತ ಸುಟೀ ತುಗೊಂಡು ಬಂದಾನ ತಂಗಿ.... ಇಂಜಿನಿಯರ್ ಅಂತ ವಾ, ನಾವೇನು ಮತ್ತ ಹಂತ ಹಿಂತಾ ಹುಡಗನ್ನ ನೋಡಿಲ್ಲ, ನಿನ್ನ ಓದಿದ್ದ ತಕ್ಕಂಗ ನೋಡೆವೀ... ನಿಮ್ಮ ಮಾಮ ಸತೆಕ್, ನಿನ್ನ ಓದೀನ ಬಗ್ಗೆ ಬಾಳ ಹೇಳತಾರ್...

ಹೌದ್ರೀ ಅತ್ತೀ, ಮತ್ತ ಹುಡಗಾ ಹೆಂಗ ಅದನಂತ ಹೇಳಲಿಲ್ಲರೀ (ಸಣ್ಣ ದನೀ ಮಾಡಿ ಕೇಳಿದೆ)...
ಅದ ಹೇಳಿದ್ನಲ್ಲ ತಾಯಿ, ಬೇಶಅದಾನಂತ, ಯೆತ್ತರಾ ಗಿತ್ತರಾ ಎಲ್ಲಾ ಚುಲೋ ಅಯತಿ ಅಂತ...

 ಅಂತ... ಅಲ್ಲರೀ ಅತ್ತಿ... ನಿವ ನೋಡೀರೇನು???
ಇಲ್ಲವ್ವ, ನಿಮ್ಮ ಮಾಮ ನೋಡ್ಯರ, ಸ್ವಲ್ಪ ಬಣ್ಣ ಕಡಮೀ, ಅಡ್ಡಿ ಇಲ್ಲ ಅಂದ್ರೂ...
ಎತ್ತರ ಅಂತಂದ್ರು ಅದನ್ನ ಮದಲ ಹೇಳಿದ್ನಲ್ಲ,

ನೋಡ ತಂಗಿ, ಬಣ್ಣ ಗಿಣ್ಣ ಎಲ್ಲಾ ಏನ್ ಮಾಡುದು ತೊಳಕೊಂಡು ಕುಡ್ಯಕಾ???? ರೊಕ್ಕ ಚುಲೋ ಗಳಸ್ಯನಂತ, ಅಲ್ಲೇ ಅಮೆರಿಕಾದಾಗ್ ಸ್ವಂತ ಮನಿ, ಕಾರು, ಎಲ್ಲಾ ಅಯತಂತ... ಹಂಗಂತ ನಾವೇನು ನೀನ್ ಈದ ಹುಡಗನ್ನ ಮಾಡ್ಕೋ ಅಂತೇನಿಲ್ಲ...
ನೀನು ಒದದಕೀ ಅದೀ, ವಿಚಾರ ಮಾಡೀ, ನಿದಾನಕ್ಕ ಮಾತಾಡಿದ್ರತು....

ನಿನ್ನ ಹಳೆ ಫೋಟ ನೋಡೀ ಹುಡಗಾ ಒಪ್ಪ್ಯಾನ, ಸುಮ್ನ ಹೊಸ ಫೋಟೋ ಕಳಸು ಅಂದೇ... ಮತ್ತ ಇನ್ನೊಂದೆರಡು ಮನತನಾ ಅದಾವ... ನೀ ಬಂದಮ್ಯಲೇ ಮತ್ತ ಇನ್ನೊಂದಿಬ್ರು, ಬ್ಯಾರೆ ದೇಶದಿಂದ ಬರವರ ಅದಾರ್... ನೋಡೀ ಈ ಸರೀ ಲಗ್ನ ಹುದೀಡರಾತು.
ಲಗುನ್ ಟಿಕೆಟ್ ಮಾಡ ಮತ್ತ...

ಸರೀ ರೀ ಅತ್ತಿ ನಾನೀಗ ಮಕ್ಕೊಬೇಕರೀ.. ಇಲ್ಲೇ ಬೆಳಗೀನ ೧೨ ಗಂಟೆ ಆಗೆತರೀ...

ಹೌದೆನವ್ವ, ನಮಗಿನ್ನು ೭.೩೦ ಆಗೆತೀ ನೋಡು, ನಮಗ ಸಂಜೀ ಆಗೆತೀ... ನಿನಗ ಆಗಲೇ ಬೆಳಕಾಗೆತೀ...
ಮಕ್ಕೋ ರವ್ವ... ಮುಂಜೇನೆ ಮತ್ತ ಕಾಲೇಜ್ ಹೋಗು ಹುಡಗೀ... ನಾನ್ ಹೇಳಿದ್ದ ಲಕ್ಷದಾಗ್ ಇರಲೀ ಮತ್ತ...
ಆಯತರೀ ಅತ್ತಿ... ಮಾಮಾರಿಗೆ ನಾನ್ ಕೇಳಿದೆ ಅಂತ ಹೇಳ್ರೀ, ಹಂಗ ನನ್ನ ನಮಸ್ಕಾರ ನಿವ ಮಾಡ್ರೀ... ಹೇ ಹೇ ಹೇ ಹೇ

ಇಸ್ಟೆಲ್ಲಾ ಹೇಳಿ ಅವರ ತಲಿಯೊಳಗಿನ ಹುಳ, ನನ್ನ ತಲಿಗೆ transfer  ಮಾಡಿದರೀ... ನಿದ್ದಿನ ಬರಲಿಲ್ಲ ನೋಡ್ರೀ... ನಮ್ಮ ಅತ್ತಿ ಹಾಕಿದ್ದು ಒಂದೆರಡು ಹುಳ... multiply ಆಗಿ ರಾತ್ರಿ ಎಲ್ಲಾ ಗೊಂದಲದಾಗ್ ಬಿಳುಹಂಗ ಮಾಡತ್ರೀ...

ಸೋಮವಾರ, ಫೆಬ್ರವರಿ 22, 2010

Fear of attack

ಇಲ್ಲಿ ಆಗತಿರೂ ಜನಾಂಗಿಯ ದಾಳಿ ಬಗ್ಗೆ.. ಓದಿ, ಕೇಳಿ, ನೋಡಿ, ಇತ್ತೀಚಿಗೆ ನನಗು ಕೂಡ ಹೆದರಿಕೆ ಆಗಿದೆ....
ಮೊದಲ ನಾನಿರತಿರೂ ಜಾಗ ಸುರಕ್ಷಿತ ವಾಗಿತ್ತು, ಈಗೀಗ ಬಂದಿರೋ ಜಾಗ ಸ್ವಲ್ಪ ಶಾಂತವಾಗಿರೋ ಮತ್ತು ೬ ಗಂಟೆಮೇಲೆ ಯಾರು ಹೊರಗಿರೋಲ್ಲ...

ಹೀಗೆ ಒಂದು ರಾತ್ರಿ 7.30 ಆಗಿತ್ತು, ಆದಿನಾ ತುಂಬಾ ಕತ್ತಲು, ಮೋಡಾ ಬೇರೆ ಕಪ್ಪು.. ಮಳೆ ಆಗೋ chances ಇದೆ ಅದಕ್ಕೆ ಮೋಡಾ ಎಲ್ಲ ಕಪ್ಪು ಅನ್ಕೊಂಡು, ಚುಕ್ಕಿ ಬೇರೆ ಕಾಣ್ತಿಲ್ಲ... ಮೋಡಾ ಆಗಿರೋವಾಗ ಚುಕ್ಕಿ ಎಲ್ಲಾ ಎಲ್ಲ ಕಾನಸಬೇಕು ನನ್ನ ಹುಚು ಕಲ್ಪನೆ ಏನೆಲ್ಲ ಯೋಚಿಸ್ತಿದ್ದಿನೀ... ಅನ್ಕೊಂಡು ಬಸ್ ಈಳದು... ಆಚೆ, ಈಚೆ ನೋಡದೆ ಯಾರು ಇರಲಿಲ್ಲ... ಸ್ವಲ್ಪ ಹೀಗೆ ಎರಡು ಹೆಜ್ಜೆ ನಡದೇ... ಇಬ್ಬರು ಹುಡಗರೂ ನನ್ನ ಹಿಂದೆ ಬರೋಕ್ ಶುರು ಮಾದದ್ರು... ಸ್ವಲ್ಪ ಸ್ವಲ್ಪವಾಗಿ ಭಯ ನನ್ನನ ಆವರಸೋಕ್ ಶುರು ಮಾಡ್ತು...

ಮುಂದೆ ಹೋಗಿ ಸ್ವಲ್ಪ ನಿಂತರೈತು, ಹಿಂಬಾಲಕರು ಸ್ವಲ್ಪ ಮುಂದೆ ಹೋದಮೇಲೆ ನಾನು ನಡದ್ರಯತು ಅನ್ಕೊಂಡು, ಸುಮ್ನೆ ಹೀಗೆ ಹಾಡು ಕೇಳ್ತಾ ಇರೋ ಹಾಗೆ ನನ್ನ ಮೊಬೈಲ್ ತೆಗದು ಅಲ್ಲೇ ಒಂದು ಮೂಲೆಯಲ್ಲಿ ನಿತಕೊಂಡೆ... ಆ ಹುಡಗರೂ ಕೂಡ ಅಲ್ಲೇ ನಿಂತು, ನೋಡಲಿಕ್ಕೆ ಶುರು ಮಾಡಿದ್ರು... ಏನಪ್ಪಾ ಮಾಡೋದಿಗಾ, ನಾನೇನಾದ್ರು  ಓಡಲಿಕ್ಕೆ ಶುರು ಮಾಡದರೆ, ಎಲ್ಲಿ ಬೆನ್ನು ಹತ್ತರೋ ಅನ್ನೋ ಭಯ, ಅಲ್ಲೇ ನಿಂತರೆ???? ಹೀಗೆಲ್ಲ ಏನೇನೊ ಪ್ರಶ್ನೆ, ಉತ್ತರ, ಉತ್ತರ ಪ್ರಶ್ನೆ....
ಧರ್ಯ ಮಾಡಿ ನಡಿತಾ ಹೋದೆ... ಹಿಂದೆ ಹುಡಗರೂ ನಾನು ಹೋಗೋ ದಾರಿನೆ ಹಿಂಬಾಲಿಸುತ್ತ, ಬರಲಿಕ್ಕೀ ಶುರು ಮಾಡಿದ್ರು... ಅವರ ನೋಡೋ ದೃಷ್ಟಿ ನೋಡಿ... ಇವತ್ತು ನನ್ನಮೇಲೆ ಹಲ್ಲೆ ಆಗೋ ಹಾಗಿದೆ... ಮನೆಲ್ಲಿ ಎಷ್ಟು ಹೇಳಿದ್ರು ವಾಪಸ್ ಬಂದು ಬಿಡು ಅಂತ, ಎಷ್ಟು ಮೊಂಡು ಧರ್ಯ ನಂದು ಎಲ್ಲರಿಗೂ ವಾದ ಮಾಡಿ ಇಲ್ಲೇ ಓದ ಬೇಕು ಅಂತ ಬಂದೆ (ಈ ಎಲ್ಲಾ ಭೂತ, ಭವಿಷ್ಯ ಕಾಲ ಎಲ್ಲಾ ಯೋಚಿಸ್ತಾ)..ಆದದ್ದಾಯಿತು, ಅಂತ ಹಿಂದೆ ನೋಡದೆ ಹೋಗ್ತಾನೆ (ಸ್ವಲ್ಪ ಜೋರಾಗಿ) ಇದ್ದೆ...
 ಆ ಹುಡಗರು ಜೋರಾಗಿ ನನ್ನ ಹತ್ತರನೇ ಬರೋ ಹಾಗೆ ಅನಸ್ತು..

ಅಯ್ಯೋ ದೇವರೇ ಅನ್ಕೊಂಡು ನನ್ನ ಎರಡು ಕೈಗಳಿಂದ ಗಟ್ಟಿಯಾಗಿ ಕಿವಿ ಹಿಡದು ಅಲ್ಲೇ ನಿಂತು ಬಿಟ್ಟೆ... ಆ ಹುಡಗರು ಓಡಿ ಹೋಗಿ taxi ಹಿಡದರು... ಅವರಿಗೂ ನಾನು ಹೆದರಿರೋ ವಿಷಯ ಗೊತ್ತಿತ್ತೇನೋ.. We are not attackers sweety!!! ಅಂತೇಳಿ ಹೋದರೂ :P ... ಅಯ್ಯೋ ಹುಚ್ಚು ಜೀವವೆ, ಎಷ್ಟು ಜೀವನದ ಮೇಲೆ  ಆಸೆ ಅನ್ಕೊಂಡು, ಮನೆಗೆ ಬಂದೆ...  ಹೆದರಿಕೆ ಅನ್ನೋದು ಎಷ್ಟು ಆಳವಾಗಿ ಮನದಲ್ಲಿ ಮೂಡಿದೆ ಅಂದ್ರೆ, ಈವಾಗ ೬ ಗಂಟೆಕೆಲ್ಲ ಮನೆ ಸೇರತಿನೀ...

ಭಾರತೀಯರ ಮೇಲೆ ಜನಾಂಗೀಯ ದಾಳಿ

ನಾನಿಲ್ಲೋರೋದು ಎಲ್ಲರಿಗೂ ಒಂದು ಚಿಂತೀ ಅಗೆತ್ರೀ... ದಿನ ದಿನ ಇಲ್ಲಿ ಭಾರತೀಯರ ಮ್ಯಾಲೆ  ನಡಿತಿರು  ಹಲ್ಲೆನೋಡಿ, ನಮ್ಮ ಅಪ್ಪಾಜಿ, ಅವ್ವ ,  ಸ್ನೇಹಿತರು , ಸಂಬಂಧಿಕರು... ವಾಪಸ್ ಬಾರವ, ಓದಿದ್ದು ಸಾಕು, ದಿನ TV, ಪೇಪರ್  ನೋಡಿ ನಮಗ ಹೆದರಿಕಿ ಆಗೆತಿ... ಜಿವಕ್ಕಿನ ಹೆಚಿಂದ್ ಏನ್ ಅದ, ಓದು ಇಲ್ಲೇ ಪೂರ್ತಿ ಮಾಡುವಂತಿ...
ಇಲ್ಲಿತನ ನಾನು... ಇಲ್ಲರೀ ನಮಲ್ಲೇನು ಹಂಗ ಆಗಿಲ್ಲ.... ನಾನಿರುದು ಅಸ್ಟ್ ದೊಡ್ಡ ಊರಲ್ಲ, ಎಲ್ಲ ಆರಾಮಐತಿ... ಅಂತಾ ಹೇಳ್ತಿದ್ದೆ, ಅದರ ಇಲ್ಲಿನು ಹಲ್ಲೆ ಶುರು ಆಗೆತಿ ನೋಡ್ರೀ...

ನನ್ನ ಕೇಳಿದ್ರ, ತಪ್ಪು ಎರಡು ಕಡಿಯಿಂದ್ ಆಗಕತ್ತವರೀ... ನಾನ್ ಹೇಳುದು ಸಲ್ಪ ಕಾರ್ ಅನಸಬಹುದು, ಆದರ್ ಯಾರು ಇದನ್ನ ತೀರ ತಲಿಗೆ ತುಗೊಂಡು... ಹಂಗೆಂಗ, ನೀವ ಹೇಳಿದ್ದ ಕರೆಯೇನು, ಅಂತ ನಿಮ್ಮಗು ಅನಸಬೋದು... ಈದನ್ನ ಓದಿದ ಮ್ಯಾಲೆ ನಿಮಗ ಏನ್ ಅನಸ್ತದು ಅದನ್ನ ಕೇಳ್ರೀ...

TV ಮತ್ತ ಪೇಪರ್ ನೋಡಿ, ಎಲಾರಿಗೂ ಬಾಳ ಬ್ಯಾಸರ ಆಗೆತಿ ಅಂತ ನನಗು ಗೊತ್ತರೀ.. ಇಲ್ಲಿ ಪರಿಸ್ತಿತಿ ಮಾಧ್ಯಮದವರು ಹೇಳದಂಗ...
ಭಾರತಿಯರ್ ಮ್ಯಾಲೆ ಅಸ್ಟ ಯಾಕ ಹಲ್ಲೆ ನಡ್ಯಕುಂತೆತಿ?
ಅದು ಬರೆ ಹುಡಗರ್ ಮ್ಯಾಲೆ ಯಾಕ?
ದಕ್ಷಿಣ ಭಾರತದ ಹುಡುಗರ ಮ್ಯಾಲೆ ಯಾಕ ಹಲ್ಲೆ ಆತು ಮೆಲ್ಬೌರ್ನೆನ್ಯಗ? 
ದಕ್ಷಿಣ ಭಾರತದ ಹುಡುಗುರು ಯಾಕ ಕತ್ತಲಗುವರಿಗೂ ಹೊರಗ ಇರತಾರು?
ರೈಲು ನಿಲ್ದಾಣದಲ್ಲಿ ದಕ್ಷಿಣ ಭಾರತದ ಹುಡುಗರ ಮೇಲೇನೆ ಯಾಕ ಹಲ್ಲೆ ಆತು?

ಕೊನೆಯ ಪ್ರಶ್ನೆಯಿಂದ ಉತ್ತರ ಕೊದತಹೊಗತೀನಿ 
ಆಸ್ಟ್ರೇಲಿಯಾ ರೈಲು ನಿಲ್ದಾಣಗಳು ರಾತ್ರಿ ಹೊತ್ತನ್ಯಾಗ  ಅರಕ್ಷಿತ ಜಾಗಗಳು... ಆಸ್ಟ್ರೇಲಿಯಾ ಅಂತ ಅಸ್ಟ ಅಲ್ಲ ಯಾವದೇ ದೊಡ್ಡ ಊರಿಗೆ ಹೋದರು ರೈಲು ನಿಲ್ದಾಣಗಳು ಹಿಂಗ ಇರತಾವು... ಇಲ್ಲಿಯವರು ಸತೆಕ್ ರಾತ್ರಿ ರೈಲ್ನ್ಯಾಗ ಹೋಗಂಗಿಲ್ಲ. ಹೆಚಾನು ಹೆಚ್ಹು ಮಂದಿ ಯಾರು ಸರಕಾರಿ ವಾಹನಗಳ ಮ್ಯಾಲೆ ಅವಲಂಬಿತರಗೆರೋ ಅವರೆಲ್ಲ ಕತ್ತಲ ಆಗುದ್ಕಿಂತ ಮೊದಲ ಮನಿ ಸೇರಕೊತಾರು ಅಂದ್ರ ೬ ಗಂಟೆಕೆಲ್ಲ ಮನಿಯೋಳಗಿರತಾರು. ಇಲ್ಲಿಯರು ಕೆಲಸದ ವೇಳೆನ ಹಂಗೈತರೀ... ಮುಂಜೇನೆ ೭.೩೦ ಇಂದ ಸಂಜಿಕ್ ೪.೩೦ ತನಾ ಕೆಲಸ. ಮತ್ತ ಹೆನಮಕ್ಕಳು ಯಾರು ರಾತ್ರಿ ಹೊತ್ತು ಅದ್ಯಾದಂಗಿಲ್ಲ. ೬ ಗಂಟೆ ಮ್ಯಾಲೆ ಹೆಚಾನು ಹೆಚ್ಹು ಹೋಗವರಂದ್ರ ಒಪ್ಪತ್ತಿನ ಕೆಲಸ ಮಾಡು ಹುಡಗರು ಇಲ್ಲಂದ್ರ  ಸುಮ್ನ ಹೊತ್ತ ಕಳ್ಯಕ ಬರವರು/ನಿಶಚರಿಗಳು/ ಸರ್ಕಾರದ ರೋಕ್ಕದ್ದ ಮ್ಯೇಲಿರು ಮಂದಿ!
ಇಗಿಗೆ ಆಗಿರು ಹಲ್ಲೆ ಅಂದ್ರ ಮುಂಜೇನೆ ೧.೨೦ ಕ್ಕ ಆಗಿರುದು ಅದು ಐತ್ವಾರ ಮುಂಜೇನೆ... ಆಸ್ಟ್ರೇಲಿಯಾ ಮಂದಿ ವಾರಾಂತ್ಯ ಯಾರು ಕೆಲಸ ಮಾಡಂಗಿಲ್ಲ ಮತ್ತ ಆಗಿರೋ ಹಲ್ಲೆ ಎಲ್ಲ ನಿಶಚಾರಿಗಳು/ದಂಡಪಿಂಡಗಳು ಅಂದ್ರು ಅನ್ನಬಹುದು (ಕೆಲಸ ಮಾಡದ ಸರಕಾರೀ ರೊಕ್ಕದ ಮ್ಯಾಲೆ ಜೀವನ ನದಸವ್ರು) ಮಾಡಿದ್ದೂ, ಈ ದಂಡಪಿಂಡಗಳು...ಶುಕ್ರವಾರ ರಾತ್ರಿಯೀಂದ ಹಿಡದು ಐತವಾರ ರಾತ್ರಿ ವರಿಗೂ ಅವರ ಲೋಕನ ಬ್ಯಾರೆ ಇರತೆತಿ, ಕುಡಿದು, ಕುಣಿದು, ಅವರಿಗೆ ಗೊತ್ತಿಲ್ದಂಗ ಎಲ್ಲಂದರ ಅಲ್ಲಿ ಬಿದ್ದಿರತಾರ್ ರೀ...  ಜಾಸ್ತಿ ಹಿಂತ ನಿಶಾಚಾರಿ ಮಂದಿ ಅಸ್ಟ ವಾರಾಂತ್ಯದಾಗ (ರಾತ್ರಿಹೊತ್ತೋ)  ರೈಲ್ನ್ಯಾಗ ಹೋಗವರು... ಅವರಿಗೆ ಕುಡಿಲಿಕ್ಕೆ ರೊಕ್ಕ ಬೇಕು, ಅದಕ್ಕ ಅವರು ಏನ್ ಮಾಡಕು ಹೇಸಂಗಿಲ್ಲ, ಯಾಕಂದ್ರ ಕುಡಿಯೋ ಚಟ ಅಂದರ ಹಂಗಿರತದರೀ (ನನ್ನ ಅನುಭವ ಏನ್ ಅಲ್ರೀ , ಕೇಳಿ ತಿಳಕೊಂಡದ್ದು :) )... ಯಾದಾರ ನಿಲ್ದಾಣ ದಾಗ್ ಈಳದಕುದಲೇ , ರೊಕ್ಕ ಇದ್ದವರು ಅಂತ ಗೊತದರ್ ಅವರನ್ನ ಬೆನ್ನಹತ್ತಾರು ಈ ನಿಶಚರಿಗಳು,  ಅವನು ಯಾವದೇ ದೇಶದವನಾಗಿರಲಿ... ಅದಕ್ಕ ನಾನೇನು ಅನ್ನದು ಅಂದ್ರ, ನಾವು ಇರೋದು ಬ್ಯಾರೆಯವರ್ ದೇಶದಾಗ್, ಯವಗಿದ್ದರು, ಬಾಜು ಮನಿಯವರು ಒಳ್ಳೆದವ್ರು ಅಂತ ನಂಬದವರು... ಆದರ ಅದು ಹಂಗಿಲ್ಲರೀ...
ಸುಮ್ನ ನಮ್ಮ ಕೆಲಸ ನೋಡಕೊಂಡು ಹೋಗತಿರಬೇಕರಿ... ದೆಹಲಿ ಮತ್ತ ಮುಂಬಯಿ ಅಂತ ದೊಡ್ಡ ಊರಗು ಕತ್ತಲ ಆದಮೇಲೆ ರೈಲ್ನ್ಯಾಗ್ ಅಥವಾ ರೈಲ್  ನಿಲ್ದಾನ್ದಾಗ್ ಯಾರು ಜಾಸ್ತಿ ಮಂದಿ ನೋಡಾಕ ಸಿಗಂಗಿಲ್ಲ ...  ಆದರ್ ಇಲ್ಲಿ ಬಂದಿರು ದಕ್ಷಿಣ ಭಾರತದ ಹುಡುಗುರು ಅಸ್ಟ್ ಹೊತ್ತಗುವರಿಗೂ ಹೆಂಗ ಧೈರ್ಯದಿಂದ ಹೊರಗ ಅದ್ಯಾದತಾರು ನನಗ ಇನ್ನುವರಿಗೆ ತಿಳಿದಿಲ್ಲ... ನನಗೇನ್  ಭಾರತದಾಗ ಜನ ಅಸ್ಟ ರಾತ್ರಿ ಆಗುವರಿಗೂ ಜನ ಓದ್ಯದತಾರು ಅನಸಂಗಿಲ್ಲ ರೀ...
ಈ ಹುಡಗರು ಮತ್ತ ಪಂಜಾಬ್ ಹುಡಗ್ಯರು ಅದೆನ ಹುಚ್ಚು ಸಾಹಸ/ಧರ್ಯ ನೋ ರಾತ್ರಿ ಜೋರಾಗಿ ಹಾಡ ಕೆಲಕೊಂತ. ಕುನಕೊಂತ ಮನಿಗೆ ಬರಿದು...
 ನಾನು ಸತೆಕ್ ಲೇಟ್ ಆಗಿನ ಬರತೆನಿ ಆದರ ಇಲ್ಲಿ ನಮಗ ಅನುಕೂಲ ಅಗುವಂಗ ಎಲ್ಲ ವಿಶ್ವವಿಧ್ಯಾಲಯಗಳು, ಸೆಕ್ಯೂರಿಟಿ ಈರತಾರರೀ... ಲೇಟ್ ಆದ ಕೂಡಲೇ ಒಂದು ಫೋನ್ ಮಾಡಿ ನೀವು ಇರೋ ಜಾಗ  ಅಂದ್ರ ವಿಶ್ವವಿಧ್ಯಲಯದೊಳಗ ಯೆಲ್ಲದಿರೀ  ಅಂತ ಹೇಳಿದ್ರ ಸಾಕು ಅವರು ಬಂದು ಬಾಗಲ್ನ್ಯಾಗ ನಿಂತಿರತ್ತರ್... ಅಮ್ಯಲೇ ಬಂದು ಹೆಲ್ಪ್ ಮಾಡಿ ಸಿಟಿ ತನ ಇಲ್ಲಂದರ ಬಸ್ ಸ್ಟಾಪ್ ವರಿಗೂ ಡ್ರಾಪ್ ಮಾಡತಾರು...
ಮೇಲ್ಬೌರ್ನೆ ದೊಡ್ಡ ಊರು, ನಾಗರೀಕತೆ ಇರು ಊರು ಅದರೂ ಸಹಿತ ಮರಿಜೋನ ಅಂತ ಜಾಗ ಯಾವಾಗಲು ಸೇಫ್ ಅಲ್ಲ...
ಆಸ್ಟ್ರೇಲಿಯಾ ಮಂದಿ ಜಲ್ದಿ  ಅಂದ್ರ ೮ ಗಂಟೆ ಅಂದ್ರ ಮಲಗ್ಬಿದತಾರ್... ಆದರ್ ಈ ಹುಡಗರು ರಾತ್ರಿ ೧೨ ಗಂಟೆಕೆಲ್ಲ  ಹಾದಿ ಒಳಗ  ಜೋರ ಹಾಡ ಹಚಕೊಂದು ಕುನಕೊತ್ ಹೋದ್ರ ನಿದ್ದಿ ಮಾಡು ಮಂದಿ ಎದ್ದ ಬೈಯದ ಏನ್ ಮಾಡ್ತಾರ್ ಹೇಳ್ರೀ... ನಾವ ಇಲ್ಲಿರುವಾಗ್ ಇಲ್ಲಿ ಜನ ಹೆಂಗಿರತಾರು ಹಂಗ ಹೊಂದಕೊಂದು,  ಅಮಲೇ ಅವರಿಗೆ ನಮ್ಮಿಂದ ಯಾವ ತರಾನು ತ್ರಾಸ್ ಅಗಲಂಗ ನೋದಕೊಬೇಕರೀ.. ನಾವಿಲ್ಲುರುದು ಕೆಲಸ ಅಥವಾ ಓದಲಿಕ್ಕೆ ಬಂದವರು ನಮ್ಮ ನಮ್ಮ ಕೆಲಸ ಮುಗಸ್ಕೊಂದು ಹೋಕ್ಕಿರಬೇಕರೀಪ...

ಹಂಗಂತ ಅವರ ಮಾಡಿದೆಲ್ಲ ಸಹಿಸ್ಕೊಳಬೇಕು ಅಂತೇನು ಇಲ್ಲ...  ಅವರ ನಮ್ಮ ಮ್ಯಾಲೆ ಹಂಗೆಲ್ಲ ಮದಬೇಕಂದ್ರ ಅವರ ತೆಲಿಯೋಳಗ ಏನ್ ಹುಳ ಯೆಳತಿರಬೇಕು... ನಾವ ಇಲ್ಲಿ ಬಂದು ಅವರ ಕೆಲಸ ಹೋದಕೊಂಡಿರಬೇಕಾರ್  ಅವರಿಗೆ ಒಳಗಿಂದ ಎಷ್ಟು ತ್ರಾಸ್ ಆಗಕತ್ತಿರ್ಬಾರದು... ಅದನ್ನ ಹೊರಗ ಹಾಕಲಿಕ್ಕೆ ಹಿಂಗೆಲ್ಲ ಮಾಡತಾರ ರೀ ....
ಈಗ ನಮಲ್ಲೇ, ಈ ಮಂದಿ ಇಟಿಟ  ಅರಬಿ ಹಾಕ್ಕೊಂಡು ಓಡ್ಯದುದು ನೋಡಿ  ನಮಗೆಲ್ಲ ಒಂತರ ಅನಸತಾದ್ ಅದನ್ನ ನೋಡಿ ನಾವು ಅವರ್ನ ಏನ್ ಸಂಸ್ಕಾರ ಇಲ್ಲದಿರೋ ಮಂದಿ ಅಂತೆಲ್ಲ ಅನ್ತೆವಿ...

ಆದರ ಇಲ್ಲಿ ಸತೆಕ್ ಒಳೆ ಮಂದಿ ಅದಾರೀ, ನಮ್ಮ ದೇಶದ್ದ ಆಚಾರಾ, ವಿಚಾರಾ ಎಲ್ಲ ನೋಡಿ ನಾವು ಹಿಂಗ ಇರಬೇಕು ಅಂತ ಅನ್ಕೊಂತಾರ್ ರೀ... ಭಗವದ್ಗೀತಾ ನಮಕಿಂತ ಚುಲೋ ಗೊತ್ತೈತಯ್ರೀ ಇವರಿಗೆ, ಯೋಗಾಸನ ಕಲಿಲಿಕ್ಕೆ ಎಷ್ಟು ಆಸೆ ಪಡತಾರು, ನಾವೆನಾರು ಸ್ವಲ್ಪ ಗೊತಿದ್ದವ್ರು ಇದ್ದರು... ಈಲ್ಲಿ ಜನ ಅದನ್ನ ಜೀವನದ ಒಂದು ದಾರಿ ಅಂತ ಅನ್ಕೊಂದವ್ರು... 
ಇದೆಲ್ಲ ಒಂದು ರೀತಿ ಜಗತ್ತಿಗ್ಗೆ ತಪ್ಪ ಸಂದೆಷಾ ಅಗೆತ್ರೀ... ತಂದೆ ತಾಯಿ ಗಂತೂ ದಿನಾ ಎದ್ದರ ಚಿಂತೀ, ಏನ ಆಗಲಿಕ್ಕತ್ತೆತೋ ಏನು ಅಂತ... ಎಸ್ಟೋ ಕಲಿ ಹುಡಗರು, ಹುಡಗ್ಯರು, ತಮ್ಮ ಜೀವನ ಈ ರಿತೇ ಕಳಕೊಂಡರ, ಕೇಳಿ ಬಹಳ ಬ್ಯಾಸರ ಆಕೀತಿ...ನನ್ನ ಕಳೆ ಕಳೆ ವಿನಂತಿ ಅಂದ್ರ... ಮನಿಗೆ ಜಲ್ದಿ ಹೋಗ್ರೀ, ಇಲ್ಲಂದ್ರ ನಿಮ್ಮ ಮುಂಜಾಗ್ರತೆ ಸಲ್ವಾಗಿ, taxi ಹಿಡಕೊಂಡು ಹೋಗುದು ಒಳೆದು. ರೊಕ್ಕ ಆಮೇಲು ಗಳಸಬಹುದ ರೀ ಆದರ,  ಮನುಷ್ಯ ಜೀವನ ಅನ್ನುದು ಬಹಳ ಅಮೂಲ್ಯ ವಾದ್ದು... ಅದನ್ನ ಕಾಪಾಡೋದು ನಮ್ಮ ಕೈಯಾಗ ಅದ.