ಮಳೆ ಬರೋಹಾಗೆ ಇತ್ತು.. ಬೇಗಾ ಆಕಡೆ ಕ್ರಾಸ್ ಮಾಡಿ taxi ಇಲ್ಲ ಬಸ್ ಹಿಡಿದರಾಯತು ಅಂತಾ, ಧಾವಿಸಿ ಸಿಗ್ನಲ್ ಹತ್ರಾ ಓಡಿ ಬಂದೆ. ಪಕ್ಕದಲ್ಲಿ ಇಬ್ಬರು ಮೂವರು ಹುಡಗರು ನಿಂತಿದ್ದರು, ಸ್ಮೈಲ್ ಮಾಡಿದರು ನಾ ಕೂಡಾ ಸ್ಮೈಲ್ ಕೊಟ್ಟು muted ಹೈ ಹೇಳಿ ಆಕಡೆ ಸರೆದು ನಿಂತೇ ನನ್ನ ಹಿಂದೆ ಇನ್ನೊಬ್ಬ ಬಂದು ನಿತಾ.. ಸನ್ glasses ಹಾಕಿದಾ.. ನಾ ಇನ್ನು ಸ್ವಲ್ಪ ಆ ಕಡೆ ಸರೆದು ನಿತಕೊಂಡೆ... ಸಿಗ್ನಲ್ ಬಿಟ್ಟು.. ಕ್ರಾಸ್ ಮಾಡೋಕೆ ರೆಡಿ ಆದೆ... ಹಿಂದೆ ಸನ್ glasses ಹಾಕಿರೋನು ಬಂದು ಕೈ ಹಿಡಿದಾ, ಆ ಹಿಡಿತದಲ್ಲಿ ಏನೋ ಒಂದು ನೋವಿಂದಾ ಕುಡಿದ ಅನುಭವಾ, ಕೈ ಹಿಡಿದು ನಡೆಸೆನ್ನ ಅನ್ನುವ ಹಾಗೆ ಎಂದು ಭಾಸವಾಗುತಿತ್ತು ... ಸಿಟ್ಟು ಸಹಜಾ ಹಾಗೆ ಬಂದು ಕೈ ಹಿಡಿದು ಕೊಂಡರೆ ಯಾರಿಗಾದರು, ಆದರು ತಕ್ಷಣದ ಮಟ್ಟಿಗೆ ಸಿಟ್ಟು ಬಂದಿದೆ ಅಂತಾ ಬಾಯಿಗೆ ಬಂದಾಗೆ ಮಾತಾಡೋದಾಗಲಿ ಕಪಾಳಕ್ಕೆ ಹೊಡೆಯೋ ಯೋಚನೆ ಆಗಲಿ ಬರಲಿಲ್ಲ.
ಕೈ ಹಿಡಿದೇ ರೋಡ್ ಕ್ರಾಸ್ ಮಾಡಿದವು.. ಆಮೇಲೆ ನಿತಕೊಂಡು, ನಿಧಾನಕ್ಕೆ ಕೈ ಬಿಡಸ್ಕೊಂಡೆ... ಯಾಕೆ ನೀವು ನನ್ನ ಕೈ ಹಿಡಿದದ್ದು ಅಂತಾ ಕೇಳದೆ, ಆತ ತನ್ನ ಕನ್ನಡಕ ತೆಗೆದು... ತುಂಬಾ ಧನ್ಯವಾದ ರೋಡ್ ಕ್ರಾಸ್ ಮಾಡಿಸಿದಕ್ಕೆ ಅಂತಾ ಕೈ ಕುಲುಕಿದಾ... ನಾ ಕುರುಡಾ ನಿವಿಲ್ಲದಿದ್ದರೆ ನಾ ಮತ್ತೆ ಯಾರಾದರು ಬರೋವರೆಗೂ ಕಾದು ರೋಡ್ ಕ್ರಾಸ್ ಮಾಡಬೇಕಾಗಿತ್ತು... ತುಂಬಾ ಸಹಾಯ ಆಯ್ತು ನಿಮ್ಮಿಂದಾ ಅಂತಾ ಹೊರಟಾ. ಅವನ ಮಾತು ಕೇಳಿ ಮನಸ್ಸಿಗೆ ಹಿಂಸೆ ಆಯಿತು, ಏನು ಮಾತಾಡಬೇಕು ತಿಳಿಯಲಿಲ್ಲ. ಕಣ್ಣುಗಳು ತುಂಬಿದ್ದವು. ಹಾಗೆ ಅವನನ್ನೇ ನೋಡುತ್ತಾ ನಿಂತೇ, ಆತ ಹೊರಡಲು ಅಣಿಯಾದ. ಏನೇ ಹೇಳಲು ಬಾಯಿ ಬಾರದ್ದರಿಂದಾ, ಹಾಗೆ ಅವನನ್ನೇ ಹಿಂಬಾಲಿಸಿ, ಮಾತಾಡಬೇಕೆನಿಸಿತ್ತು. ನನ್ನ ಕಾಲು ನಡುಗೆ ಇಂದಾ ಗೊತ್ತಾಗಿತ್ತು ಅವನಿಗೆ ನಾ ಹಿಂಬಾಲಿಸುತ್ತಿರುವುದು.. ಎಲ್ಲಿಂದಾ ಅಂತಾ ಕೆಳದಾ, ನಾ ನನ್ನ ಬಗ್ಗೆ ಹೇಳಿ... ಮುಂದಿನ ಕ್ರಾಸ್ ನಲ್ಲಿ ಮತ್ತೊಮ್ಮೆ ಕೈ ಹಿಡಿದು ದಾಟಿಸಿದೆ... ಮನಸ್ಸಿಗೆ ಅದೇ ಯೋಚನೆ ಕಾಡತೊಡಗಿತು.. ಕಣ್ಣಿದ್ದು ಕುರುಡರಂತೆ, ಬಾಯಿದ್ದು ಮೂಕರಂತೆ, ಕೆಲವೊಮ್ಮೆ ಆಡುತ್ತೇವೆ.. ನಿಜವಾಗಲು ಅದು ಇಲ್ಲದವರ ಪಾಡು ಎಷ್ಟು ಕಷ್ಟಾ. ಅದೇ ಗುಂಗಿನಲ್ಲಿದ್ದ ನನಗೆ ಬಟ್ಟೆ ಕರಿದಿ ಮಾಡೋ ಯೋಚನೆ ಬಿಟ್ಟು ಹೋಗಿತ್ತು . ಮನೆಗೆ ಬರ್ತಾ, ನೋಡೋಣಾ ಹೇಗಿರುತ್ತೆ ಕಣ್ಣು ಮುಚಿ ನಡೆದರೆ ಅಂತಾ... ನಾ ಇರುವ ಮನೇನೆ ದಿನವು ವಸ್ತುಗಳು ಎಲ್ಲಿರುತ್ತವೆ ಅನ್ನೋದು ಚೆನ್ನಾಗೆ ಗೊತ್ತು.. ಅದಕ್ಕೆ ಹೊರಗಡೆ ಈ ಪ್ರಯೋಗಾ ನನ್ನ ಮೇಲೆ ನಾನೇ ಮಾಡಿಕೊಂಡರಾಯಿತು ಅಂತಾ.. ಮಳೆ ನಿಲ್ಲೋದನ್ನೇ ಕಾಯ್ತಾ.. ನಿಂತಮೇಲೆ ಹೊರಗೆ ಹೋದೆ... ಹಾಗೆ ಕಣ್ಣು ಮುಚ್ಕೊಂಡು ಕಣ್ಣಿದ್ದು ಕುರಡಿ ಹಾಗೆ ನಡಿಯೋಕೆ ಶುರು ಮಾಡದೆ... ಪ್ರತಿಯೊಂದು ಹೆಜ್ಜೆ ಇಡ್ತಾ ಭಯ ಅನ್ನೋದು ಆವರಿಸಿತ್ತು, ಭಯದಲ್ಲೇ ಮುನ್ನಡೆದೆ, ಆಕಡೆ ಇಕಡೆ ಜನಾ ನಡೆದಾಡೋ ಶಬ್ದದಿಂದಲೇ, ಪಕಕ್ಕೆ ಸರಿಯುತ್ತಿದ್ದೆ...ಹಾಗೆ ಮುಂದೆ ಹೋಗಿ ಒಂದು ಮರಕ್ಕೆ ದಡ್ಡ ಅಂತಾ ತಲೆ ಬಡಿಸ್ಕೊಂಡೆ... ಆದ ನೋವು ಅಸ್ಟಿಸ್ಟಲ್ಲ, ಅಮ್ಮ ಅಂತಾ ಅಲ್ಲೇ ಕೂತು ಬಿಟ್ಟೆ.
ತಲೆ ಎಲ್ಲ ಯೋಚನೆಗಳು, ನೋವಿಂದಾಗಿ ಅಲ್ಲ... ಆ ವ್ಯಕ್ತಿಯ ಜೀವನದ ಬಗ್ಗೆ. ಎಲ್ಲದಕ್ಕೂ ಮತ್ತೊಬರನ್ನು ಅವಲಂಬಿಸುವ ಜೀವನ ಎಷ್ಟು ಕಷ್ಟಾ, ಕೇವಲ ೫ ನಿಮಿಷದಲ್ಲಿ ನನಗಾದ ನೋವು ಏನು ಅನ್ನಿಸಿರಲಿಲ್ಲ ... ಸಿಟ್ಟಿನಲ್ಲಿ ನಾ ಏನಾರು ಅಂದಿದ್ದರೆ, ಸತ್ಯಾ ತಿಳಿದಮೇಲೆ ಜೀವನ ಪೂರ್ತಿ ನನ್ನ ನಾ ಕ್ಷಮಿಸುತ್ತಿರಲಿಲ್ಲ... ಆ ಕ್ಷಣ ನಾ ಯೋಚಿಸದೆ ಏನಾರು ಅಂದಿದ್ದರೆ, ಪಾಪ ಅವನ ಮನಸ್ಸಿಗೆ ಎಷ್ಟು ನೋವಾಗಿರೋದು ನನ್ನಿಂದಾಗಿ.
ಶನಿವಾರ, ಡಿಸೆಂಬರ್ 11, 2010
ಬುಧವಾರ, ಡಿಸೆಂಬರ್ 8, 2010
ಮೂಢ ನಂಬಿಕೆಗಳೇ ???
ಜಿರಳೆ ಹೊಡಿಬಾರದು
ಹಲ್ಲಿ ಮೈ ಮೇಲೆ ಬಿದ್ದರೆ ಹಸಿರು ಗಿಡಾ ನೋಡಬೇಕು
ಸಿನಿದರೆ ಹೊಸ್ತಿಲಿಗೆ ನೀರು ಹಾಕಬೇಕು
ಸಾಯಂಕಾಲ ಕಸಾ ಹೊರಗೆ ಚೆಲ್ಲೋ ಹಾಗಿಲ್ಲ
ಸುರ್ಯಾಸ್ತಾ ಆದಮೇಲೆ ಹೂವು ಕಿಳೊಹಾಗಿಲ್ಲ
ರಾತ್ರಿ ಟೈಮ್ನಲ್ಲಿ ಉಗುರು ತೆಗಿಬಾರದು.... ಇನ್ನು ಏನೇನೋ ಇವೆ
ಇವೆಲ್ಲ ಇನ್ನು ನಮ್ಮ ಮನೇಲಿ ಹೇಳ್ತಾರೆ.... ಕೆಲವೊಂದಕ್ಕೆ ಅಜ್ಜಿ ಉತ್ತರ ಕೊಟ್ಟಿದ್ದಾರೆ.. ಇನ್ನೊಂದಿಸ್ಟು ಪ್ರಶ್ನೆಗಳಾಗೇ ಉಳಿದಿವೆ :(
ಗುರುವಾರ, ಡಿಸೆಂಬರ್ 2, 2010
ಪ್ರೀತಿಯ ನಾವೆ
ಕಲ್ಪನೆಯ ಕಡಲಲ್ಲಿ ನಾವಿಬ್ಬರು
ದೂರ ದೂರ ಸಾಗಿ
ದೇವರೆ ನಾವಿಕನಾಗಿ
ಬರಲಿ ನಮ್ಮ ಪ್ರೀತಿ ದೋಣಿಗೆ
ಹರಿವ ನೀರಿನಲ್ಲಿರೋ
ಜಲ ಪ್ರಾಣಿ ಪಕ್ಷಿಗಳು
ಹೂ ಮಳೆಯ ಸುರಿಯಲಿ
ಹರಸಲಿ ನಮ್ಮನ್ನು
ಏಳು ಕೋಟಿ ದೇವರು
ನೂರು ಕಾಲ ಬಾಳಿರಿ ಎಂದು
ದೂರ ದೂರ ಸಾಗಿ
ದೇವರೆ ನಾವಿಕನಾಗಿ
ಬರಲಿ ನಮ್ಮ ಪ್ರೀತಿ ದೋಣಿಗೆ
ಹರಿವ ನೀರಿನಲ್ಲಿರೋ
ಜಲ ಪ್ರಾಣಿ ಪಕ್ಷಿಗಳು
ಹೂ ಮಳೆಯ ಸುರಿಯಲಿ
ಹರಸಲಿ ನಮ್ಮನ್ನು
ಏಳು ಕೋಟಿ ದೇವರು
ನೂರು ಕಾಲ ಬಾಳಿರಿ ಎಂದು
ಭಾನುವಾರ, ನವೆಂಬರ್ 14, 2010
ನಮ್ಮೂರ ಕಡಿ ಸೋಬಾನೆ ಪದಾ
ನಮ್ಮೂರ ಕಡಿ ಸೋಬಾನೆ ಪದಾ...
ಮಾಳಿಗೆ ಮನಿ ಬೇಕು
ಜೋಳಿಗೆ ವನ ಬೇಕು
ಬಸವರಾಜ ದೇವರಂತ ಮಗಬೇಕು
ಬಸವರಾಜ ದೇವರಂತಾ ಮಗಬೇಕು
ಈ ಮನಿಗೆ ಕಿತ್ತೂರು ಚೆನ್ನಮ್ಮನಂತಾ ಸೋಸೇಬೇಕು
ಮಗಳು ಹೆಣ್ಣು ಹಡಿಯಲಿ
ಸೊಸೆಯೂ ಗಂಡ ಹಡಿಯಲಿ
ಏಳುರ ಎಮ್ಮಿ ಕರಿಯಲಿ
ಏಳುರ ಎಮ್ಮಿ ಕರಿಯಲಿ
ಈ ಮನಿಗೆ, ಸಡಗರ ನೋಡಾಕ ಶಿವ ಬರಲಿ
ಅಕ್ಕ ನಾಗಮ್ಮನ ವನಕ ತೊಟ್ಟಿಲ ಕಟ್ಟಿ
ಚೆನ್ನ ಬಸವಣ್ಣನಿಟ್ಟು ತುಗಿರಿ
ಮಾಳಿಗೆ ಮನಿ ಬೇಕು
ಜೋಳಿಗೆ ವನ ಬೇಕು
ಬಸವರಾಜ ದೇವರಂತ ಮಗಬೇಕು
ಬಸವರಾಜ ದೇವರಂತಾ ಮಗಬೇಕು
ಈ ಮನಿಗೆ ಕಿತ್ತೂರು ಚೆನ್ನಮ್ಮನಂತಾ ಸೋಸೇಬೇಕು
ಮಗಳು ಹೆಣ್ಣು ಹಡಿಯಲಿ
ಸೊಸೆಯೂ ಗಂಡ ಹಡಿಯಲಿ
ಏಳುರ ಎಮ್ಮಿ ಕರಿಯಲಿ
ಏಳುರ ಎಮ್ಮಿ ಕರಿಯಲಿ
ಈ ಮನಿಗೆ, ಸಡಗರ ನೋಡಾಕ ಶಿವ ಬರಲಿ
ಅಕ್ಕ ನಾಗಮ್ಮನ ವನಕ ತೊಟ್ಟಿಲ ಕಟ್ಟಿ
ಚೆನ್ನ ಬಸವಣ್ಣನಿಟ್ಟು ತುಗಿರಿ
ಸೋಮವಾರ, ಅಕ್ಟೋಬರ್ 25, 2010
ಮಾತಿನಲ್ಲಿ ಜಗವ ಗೆಲ್ಲುವ
ಕಾಡುವ ಹುಡುಗಿಯ ಕೇಳಿ ನೋಡು
ಅವಳ ಮುನಿಸಿಗೆ
ನಿನ್ನ ಅನಿಸಿಕೆ ಏನು
ಕಿತ್ತಾಡಿ ಜಗಳಘಂಟ ಅನ್ನಿಸಿಕೊಬ್ಯಾಡಾ
ತುಂಟಾಟದಿ ಮನ ಗೆದ್ದು ನೋಡು
ಸೀರೆ ತರದಿದ್ದರೂ
ನನ್ನುಸಿರೇ ಎಂದು ಕರೆದು ನೋಡು
ಸಿಡುಕು ಹೆಣ್ಣಿಗೆ
ಸಿಂಗಾರಿ ಎಂದು ನೋಡು
ಜಗಳಕ್ಕಿಳಿದರೆ
ಚೆನಮ್ಮ ಎಂದು ನೋಡು
ಸಿಟ್ಟಾದರೆ
ಮಾರಿಯಂತೆ ಹೊಳೆವ ಕಣ್ಣು ಎಂದು ನೋಡು
ಪ್ರೀತಿ ಮಾತಿಗೆ ಸೋಲದವರಿಲ್ಲ
ಮಾತಿನಲ್ಲಿ ಜಗವ ಗೆಲ್ಲುವ
ಮಾತಿನ ಮಲ್ಲನಾಗಿ ನೋಡು
ಅವಳ ಮುನಿಸಿಗೆ
ನಿನ್ನ ಅನಿಸಿಕೆ ಏನು
ಕಿತ್ತಾಡಿ ಜಗಳಘಂಟ ಅನ್ನಿಸಿಕೊಬ್ಯಾಡಾ
ತುಂಟಾಟದಿ ಮನ ಗೆದ್ದು ನೋಡು
ಸೀರೆ ತರದಿದ್ದರೂ
ನನ್ನುಸಿರೇ ಎಂದು ಕರೆದು ನೋಡು
ಸಿಡುಕು ಹೆಣ್ಣಿಗೆ
ಸಿಂಗಾರಿ ಎಂದು ನೋಡು
ಜಗಳಕ್ಕಿಳಿದರೆ
ಚೆನಮ್ಮ ಎಂದು ನೋಡು
ಸಿಟ್ಟಾದರೆ
ಮಾರಿಯಂತೆ ಹೊಳೆವ ಕಣ್ಣು ಎಂದು ನೋಡು
ಪ್ರೀತಿ ಮಾತಿಗೆ ಸೋಲದವರಿಲ್ಲ
ಮಾತಿನಲ್ಲಿ ಜಗವ ಗೆಲ್ಲುವ
ಮಾತಿನ ಮಲ್ಲನಾಗಿ ನೋಡು
ಸೋಮವಾರ, ಆಗಸ್ಟ್ 23, 2010
Reservation
ನಾ ಯುನಿವೆರ್ಸಿಟಿ ಹೋಗು ಬಸ್ ಕೆಟ್ಟ ನಿಂತತು... ಲೇಟ್ ಬ್ಯಾರೆ ಆಗಾತಿತ್ತು... ಏನ್ ಮಾಡುದು.. ಇಳದು ಬ್ಯಾರೆ ಬಸ್ ಹತ್ತಬೇಕು ಅಂದ್ರ.. ಅದು ಕೆಟ್ಟಿದ್ದು ನಡು ರಸ್ತೆ... ಹಂಗ ಡ್ರೈವರ್ ಅಂತು ಬಸ್ ಬಾಗಲಾ ತೆಗಿಯಪ್ಪ ಇಲ್ಲೇ ಇಳಿತೆವಿ ಅಂದ್ರು... safety issue ಅಂತೇಳಿ ಬಾಗಲಾನು ತಗಿಲಿಲ್ಲ.... ಇನ್ನು ಬ್ಯಾರೆ ಬಸ್ ಬರುದು ತಡಾ ಅಂತಾ ಗೊತ್ತಾತು... ಅಲ್ಲೇ ಆಜು ಬಾಜು (ಅಕ್ಕ ಪಕ್ಕ) ಕುತವರಿಗೆಲ್ಲ ಸ್ಮೈಲ್ ತಳ್ಳಿ... ಮತ್ತ ಬಂದು ನನ್ನ ಆಸನಕ್ಕೆ ಆಸಿನಳಾಗಿ...ಒಂದಿಷ್ಟು ಗಿಚಿದ್ದು...
ನಮ್ಮುರಕಡೆ ಬಸ್ ಸೀಟ್ ಹಿಡಿಯೋ ನೆನಪಾಗಿ ಒಬ್ಬಾಕಿ ನಗಾಕ ಶುರು ಮಾಡಿದೆ...
ನಿಮಗೂ ನೆನಪಾತ???
ಹುಬ್ಬಳ್ಳಿ ಬಸ್ ಸ್ಟ್ಯಾಂಡ್... ನಮ್ಮ ಅಜ್ಜ ಅಜ್ಜಿ ಊರಿಗೆ ಸುಟಿ ಇದ್ದಾಗ ಹೋಗು ದಿನಗಳು... ಬಸ್ಸಿಂದ ಹೊರಗೆ ನಿತಕೊಂಡು ನಮ್ಮ ಮಾವಯ್ಯ (ತಾಯಿ ಅಣ್ಣ) ಟಾವೆಲ್ ಒಗದು ಸೀಟ್ researvation ಮಾಡೋದು... ಅಸ್ಟೆ ಅಲ್ಲರಿ... ಕರವಸ್ತ್ರ, ಟಪಗಿ, ಕಯ್ಯಗ ಏನ್ ಸಿಗತದೋ ಅದನ್ನ ಆಗದು... ಸೀಟ್ reservation ಮಾಡೋದು... ಸೀಟ್ ಅಂತು reserve ಆಗಿರ್ತಿತ್ತು... ಇನ್ನು ಬಸ್ ಹತ್ತಿ ಒಳಾಗ ಬರುದರಾಗ... ಯಾರರ ಕೂತಿದ್ದರ ಪಜೀತಿ ಮಾಡಿ... ಎಷ್ಟು ಕಷ್ಟ ಪಟ್ಟು reserve ಮಾಡಿದ ಸಂಗತಿ ಹೇಳಿ ಎಬ್ಬಸಿ ಊರ ಬರೋವರೆಗೂ ನಿಶ್ಚಿಂತಿ...
ಇನ್ನು ಚುಮಣಿ ಎಣ್ಣಿ ಪಾಳಿ
ಆರ ಲಿಟರ್ ಹಿಡಿಯೋ ಬಾಟಲಿಗೆ ಎಂಟ ಲೀಟರ್ ಹಾಕೋ ನಮ್ಮ ರೇಶನ ಅಂಗಡಿಗಳು...
ಚುಮಣಿಎಣ್ಣಿ (ಸಿಮೆ ಎಣ್ಣೆ) ಮುಂಜಾನೆ ಜಲ್ದಿ ಎದ್ದು ಹೋಗಿ ಒಂದು ಕಲ್ಲು ಇಟ್ಟಬರೋದು ಡಬ್ಬಿ ಬದಲಿಗೆ, ಆ ಕಲ್ಲೇ reservation place for next dubbi...
ಇಷ್ಟು ಸಾಕು ಮತ್ತ ಮುಂದಿನ reservation ಮತ್ತ ಬರೀತೀನಿ...

ಮಂಗಳವಾರ, ಆಗಸ್ಟ್ 3, 2010
ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ
ಇತ್ತೀಚಿಗೆ ನನ್ನ ಭಾರತೀಯ ಗೆಳೆಯ ಒಬ್ಬ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ, ಅವನ ಮತ್ತು ಮತ್ತಿಸ್ಟು ಜನಾ ಫಾರೆನ್ ಫ್ರೆಂಡ್ಸ್ ಜೊತೆ ಆದ ಸಂಭಾಷಣೆಯನ್ನ, ಆಡು ಭಾಷೆಯಲ್ಲಿ ಭಾರತದಲ್ಲಿರೋವರ ಪಾಶ್ಚಾತ್ಯ ಸಂಸ್ಕೃತಿ, ಸ್ವಚತೆ ಬಗ್ಗೆ ಆಡೋ ಮಾತುಗಳು ಕೂಡಾ ಮಿಕ್ಸ್ ಮಾಡಿ ಬರೆದಿದ್ದೇನೆ....
ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿ...
ಅಯ್ಯೋ!! foreigners ಬಾಳ ಮುಂದ ಬಿಡ್ರಿ... ಏನೆಲ್ಲಾ ಕಂಡು ಹಿಡದಾರಿ, ಹೆಂಗೆಲ್ಲ ಮನಿ ಕಟಕೊಂಡಾರಿ... ಅಬ್ಬಬ್ಬಬ್ಬ!!! ಬ್ಯಾಸಗ್ಯಾಗ ತಣ್ಣನ ಗಾಳಿ, ಚಳಿಗಾಲದಾಗ ಬೆಚ್ಚಗೆ ಇರುಹಂಗೆ... ಏನೆಲ್ಲಾ ವ್ಯವಸ್ತೆ, ಏನ್ ಸ್ವಚತಾ... ಮೇಚ ಬೇಕರಿ... ಏನ್ ಶಾಣೆ ಅಂತಿರಿ...
ನಮಲ್ಲೆನರಿ ಮಂದಿ ಅಜ್ಞ್ಯಾನಿಗಳು... ಏನ್ ತಲಿನ ಇಲ್ಲ ಬಿಡ್ರಿ...
ಅಲ್ಲಿಯವರು ಮಕ್ಕಳಿಗೆ ಶಿಸ್ತು ಕಲಸೋದು ಅಂದರ ಮೆಚಬೇಕರಿ... ಏನ್ ನೀಟ್ ಅಂತಿರಿ ನಮ್ಮನಿಗೆ ಇತ್ತಿತಲಾಗ foreignನ್ಯಾಗ್ ಇದ್ದ ಬಂದ ಇಬ್ಬರು ಗಂಡಾ ಹೆಂಡತಿ ಅವರ ಮಕ್ಕಳನ್ನ ಕರಕೊಂಡು ಬಂದಿದ್ರು... ನಮ್ಮ ತಮ್ಮನ ಮಕ್ಕಳಿಗೂ ಅವರಿಗೂ ಹೊಲಸಿದರ... ಆ foreign ಮಕ್ಕಳು (ಆ ಜೋಡಿಗೆ ಇರೋ ಮಕ್ಕಳು) ಅವು foreign ಮಕ್ಕಳು ಆಗೊದವು ಮಾತಾಡ್ತಾ ಹೊಗಳ್ತಾ...ಛೆ ಛೆ ಛೆ ಏನ್ ನಾಜೂಕು, ಏನ್ ಕತಿ...
ಫಾರೆನ್ ಸಂಸ್ಕೃತಿ ನಮ್ಮದಾಗಿಸ್ಕೊಲಿಕ್ಕೆ ಬಾಳ ಹೊತ್ತೇನು ಹಿಡಿಯುದಿಲ್ಲ ಬಿಡ್ರಿ. ಅದ ಅವರಿಗೆ ನಮ್ಮ ಸಂಸ್ಕೃತಿ ಬಗ್ಗೆ ಓದಿ ತಿಳಕೊಂಡು ಅನ್ವಯಿಸಬೇಕು ಅಂದ್ರ ಒಂದು ಯುಗಾ ಕಳಿಬೇಕು. ನಾನೇನು ಅವರ ಸಂಸ್ಕೃತಿ ಬಗ್ಗೆ ಕೀಳರಿಮೆ ಮುಡಸ್ತಿಲ್ಲ. ಅವರದು ಸರಳ ಜೀವನ, ಯಾರ್ ಬೇಕಾದರೂ ಸರಳವಾಗಿ ಪಾಲಿಸಬಹುದು ಅಂತಾ. ಆತ್ಮೀಯತೆ ಕಡಿಮೆ, ಅವರ ಮನೆಗೆ ಹೋಗಬೇಕಿದ್ದರೆ ಮೊದಲೇ ಒಂದು ವಾರ ಮುಂಚೆ ಹೇಳಿ ಫ್ರೀ ಇದ್ದೀರಾ ನಾವು ಬರಬೇಕು ಅಂತಾ ಮಾಡಿದ್ವಿ ಅಂತೆಲ್ಲ ಕೇಳಿ/ಹೇಳಿ permission ತುಗೊಂಡು ಹೋಗಬೇಕು.
ದೂರದ ಬೆಟ್ಟ ನುಣ್ಣಗೆ... ಎಲ್ಲ ಕಡೆನು, ಅವರದೇ ಆದ ಸಂಸ್ಕೃತಿ... ಅಲ್ಲಿಯವರಿಗೆ ನಮ್ಮ ಸಂಸ್ಕೃತಿ ಬಗ್ಗೆ ಹೇಳಿ ನೋಡ್ರಿ. ಎಲ್ಲಿಲ್ಲದ ಆತ್ಮೀಯತೆ, ಪರಿಚಯ ಇಲ್ಲದಿದ್ದರೂ, ಬಾಗಿಲು ತಟ್ಟಿದಾಗ್ ಬಾಗಲ ತೆಗದು, ನೀರು ಬೇಕಿತ್ತೆನರಿ, ಎಲ್ಲಿಯವರು, ಎಲ್ಲಿ ಹೊಂಟಿದ್ರಿ... ವಿಚಾರಿಸಿ ಅವರ ತೋರಸೋ ಅಕ್ಕರೆ ಮುಂದೆ. ಇದ್ಯಾವ ಲೆಕ್ಕ... ಫೇಮಸ್ ಬರಹಗಾರ Francois Gautier ಭಾರತ ಬಗ್ಗೆ ಬರೆದಿರುವ ಲೇಖನಗಳು ಸೂಪರ್. ಸಮಯಾ ಸಿಕ್ಕಾಗ ಓದಿ ನೋಡಿ...
ನಮ್ಮಲ್ಲೇ ಹಿಂತಾ ಹಾಯ್ ಫಾಯ ಲೈಫ್ ಬೇಕು ಅವರಂಗ ಇರಬೇಕು, ಅದು ಸರಿ ಇಲ್ಲ, ಇದು ಸರಿ ಇಲ್ಲ... ಎಲ್ಲದಕ್ಕೂ ಸರಿ ಇಲ್ಲ... ಅದ ಇದ್ದಿದ್ರ ಮಸ್ತ ಇರ್ತಿತ್ತು... ಅದಕಿಂತಾ... ನಾವೇ ಅನುಸರಿಸ್ಕೊಂಡು ಹೋದರೆ, ಎಷ್ಟು ಚುಲೋ ಇರತೆತಿ ಅಲ್ಲವಾ... ನಿಜಾ ಜನಸಂಖೆ ಸಮಸ್ಯಯಿಂದಾ ಎಲ್ಲ ರೀತಿ ವ್ಯವಸ್ತೆ ಮಾಡೋದು, ಮಾಡಿದರು ಪಾಲಸೋದು ಎಷ್ಟು ಕಷ್ಟಾ.
ತಂದೆ ತಾಯಿಯನ್ನ ವಯಸ್ಸಾದ ಕೂಡಲೇ ವೃದ್ದಾಶ್ರಮಕ್ಕ ಸೇರಿಸಿ ಫಾರೆನ್ ಬಂದು ಇರೋದು ಸರಳ ಅನಿಸದವರಿಗೆ. ಅವರ ಜೊತೆ ಇದ್ದು, ಅವ್ವನ ಕೈ ಅಡುಗೆ, ಅಪ್ಪನ ಸಲಹೆ. ಮಕ್ಕಳಿಗೆ ಅಜ್ಜ, ಅಜ್ಜಿ ಪ್ರೀತಿ ಕೊಟ್ಟು ನೋಡಿ... ತಂದೆ, ತಾಯಿಯನ್ನ ವೃದ್ದಾಶ್ರಮಕ್ಕ ಸೇರಸಿ, ನಾನು ಇಷ್ಟು ದುಡ್ಡು ಕಳಸ್ತಿನಿ, ಯಾವದಕ್ಕೂ ನಮ್ಮನ್ನ ನೆನಸಿರಬಾರದು ಎಲ್ಲ ಅನುಕುಲಾನು ಮಾಡಿ ಬಂದೇನಿ... ವಯಸ್ಸಾದಾಗ ಅವರಿಗೆ ಬೇಕಾಗಿರೋದು ಆಸರೆ, ದುಡ್ಡಲ್ಲ... ನಮಗಾಗಿ ಅವರು ಪಟ್ಟ ಪರಿಶ್ರಮ, ನೋವಿದ್ದರೂ ಎಲ್ಲಿ ನಮ್ಮ ಓದಿಗೆ ಎಫೆಕ್ಟ್ ಆಗುತ್ತೋ ಅಂತ ಸಮಸ್ಯ ಅನ್ನೋದು ನಮ್ಮ ಕಡೆ ಸುಳಿಯದ ಹಾಗೆ ನೋಡಕೊಂಡು. ಎಲ್ಲ ಬೇಕುಗಳನ್ನು ಇಡೆರಸೋದು. ಅಬ್ಬ!! ಬರಿತಾ ಹೋದರೆ ಒಂದೇ ಎರಡೇ.
ನಿಜಾ ಫಾರೆನ್ ನಾವು ಬಂದಿರೋದು ಒಂದು ಒಳ್ಳೆ ವಿಧ್ಯಾಭ್ಯಾಸಕ್ಕೋ ಅಥವಾ ದುಡ್ಡು ಮಾಡುದುಕ್ಕೋ. ಆದರೆ ಅದೇನೇ ಇದ್ದರು 'ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ'.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)